ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 35 ಲೋಡಿ ಎಸ್ಟೇಟ್ ಬಂಗಲೆ ಖಾಲಿ ಮಾಡುವ ಮೊದಲು ರಾಜ್ಯಸಭೆಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯ ಅನಿಲ್ ಬಲೂನಿ ಅವರನ್ನು ಚಹಾ ಕೂಟಕ್ಕಾಗಿ ಆಹ್ವಾನಿಸಿದ್ದಾರೆ.
ಪತ್ರ ಮತ್ತು ದೂರವಾಣಿ ಮೂಲಕ ಅನಿಲ್ ಬಲೂನಿ ಅವರ ಕಚೇರಿಗೆ ಆಹ್ವಾನವನ್ನು ಕಳುಹಿಸಲಾಗಿದೆ, ಆದರೆ, ಅದಕ್ಕೆ ಅವರು ಇನ್ನೂ ಸ್ಪಂದಿಸಿಲ್ಲ ಎಂದು ವಾದ್ರಾ ಅವರ ಆಪ್ತ ಮೂಲಗಳು ತಿಳಿಸಿವೆ.
ಪ್ರಿಯಾಂಕಾ ವಾದ್ರಾ ನಿಗದಿತ ಸಮಯದೊಳಗೆ ಮನೆ ಖಾಲಿ ಮಾಡಲು ಸಿದ್ಧರಾಗಿದ್ದಾರೆ ಎಂದು ವಾದ್ರಾ ಅವರ ಆಪ್ತ ಮೂಲವೊಂದು ತಿಳಿಸಿದೆ. ಸದ್ಯಕ್ಕೆ ಅವರು ಗುರುಗ್ರಾಮ್‌ನಲ್ಲಿರುವ ತಮ್ಮ ಮನೆಯಲ್ಲಿಯೇ ಇರುತ್ತಾರೆ. ಬಳಿಕ ಮತ್ತೆ ನವದೆಹಲಿಗೆ ಬರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಬಂಗಲೆಗಳನ್ನು ಕೇಂದ್ರ ಲೋಕೋಪಯೋಗಿ ಇಲಾಖೆ ಮತ್ತು ಎಸ್ಟೇಟ್ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಪ್ರಿಯಾಂಕಾ ಗಾಂಧಿಯ ಆಪ್ತ ಸಹಾಯಕ ಹೇಳಿದ್ದಾರೆ.