ನವದೆಹಲಿ: ಅಯೋಧ್ಯೆಯ ರಾಮ ಮಂದಿರದ ಶಿಲಾನ್ಯಾಸ ಸಮಾರಂಭವು ರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಾಮರಸ್ಯದ ಸಂಕೇತವಾಗಲಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆಶಿಸಿದ್ದಾರೆ.
ನಾಳೆ ರಾಮ ಮಂದಿರದ ಭೂಮಿ ಪೂಜೆ ಕಾರ್ಯಕ್ರಮ ನೆರವೇರಲಿದ್ದು, ರಾಮಾಯಣವು ವಿಶ್ವದ ನಾಗರೀಕತೆ ಮತ್ತು ಭಾರತೀಯ ಉಪಖಂಡದ ಮೇಲೆ ಅಳಿಸಲಾಗದ ಹೆಗ್ಗುರುತು. ಭಗವಾನ್ ರಾಮ ಎಲ್ಲರಿಗೂ ಸೇರಿದವನು. ರಾಮನು ಪ್ರತಿಯೊಬ್ಬರ ಕಲ್ಯಾಣವನ್ನು ಬಯಸುತ್ತಾನೆ. ಇದಕ್ಕಾಗಿಯೇ ಅವನನ್ನು 'ಮರ್ಯಾದಾ ಪುರುಷೋತ್ತಮ' ಎಂದು ಕರೆಯಲಾಗುತ್ತದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಶಿಲಾನ್ಯಾಸ ಕಾರ್ಯಕ್ರಮದ ಕ್ಷಣವು ಭಗವಾನ್ ಶ್ರೀರಾಮನ ಸಂದೇಶ ಮತ್ತು ಆಶೀರ್ವಾದದೊಂದಿಗೆ ರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಾಮರಸ್ಯದ ಸಂಕೇತವಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.