ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಿಯಾಂಕ ಗಾಂಧಿ ಬಳಿ ರಾಜ್ಯಸಭೆ ಸದಸ್ಯರಾಗುವ ಅರ್ಹತೆ ಹಾಘೂ ಸಾಮರ್ಥ್ಯವಿದೆ ಎಂದು ರಾಜಸ್ಥಾನ ಕಾಂಗ್ರೆಸ್ ಮುಖಂಡ ಅವಿನಾಶ್ ಪಾಂಡೆ ಅಭಿಪ್ರಾಯ ಪಟ್ಟಿದ್ದಾರೆ.
ಅವರು ತಿಳಿಸಿರುವ ಪ್ರಕಾರ ದೇಶದ ನಾನಾ ಮೂಲೆಗಳಿಂದಲೂ ಪ್ರಿಯಾಂಕ ಗಾಂಧಿ ರಾಜ್ಯಸಭೆ ಚುನಾವಣೆಗೆ ಕಣಕ್ಕಿಳಿಯುವಂತೆ ಕೂಗು ಕೇಳಿ ಬರುತ್ತಿದ್ದು, ಅವರ ಬಳಿ ಆ ಅರ್ಹತೆ ಇದೆ ಎಂದು ತಿಳಿಸಿದ್ದಾರೆ.

ಮಧ್ಯಪ್ರದೇಶದಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಲ್ಲಿ ಈ ಸಲ ಹಿರಿಯ ಮುಖಂಡರ ಬದಲು ಪ್ರಿಯಾಂಕ ಗಾಂಧಿ ಅವರನ್ನ ಕಳುಹಿಸಲು ಈಗಾಗಲೇ ಕಾಂಗ್ರೆಸ್ ತೀರ್ಮಾನಿಸಿದ್ದು, ಅದಕ್ಕೆ ಇದೀಗ ರಾಜಸ್ಥಾನ ಕಾಂಗ್ರೆಸ್ನಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಮಧ್ಯಪ್ರದೇಶದ ಮೂರು ರಾಜ್ಯಸಭೆ ಸ್ಥಾನಗಳಿಗೆ ಏಪ್ರಿಲ್ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಒಂದು ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ಅವರನ್ನ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಈಗಾಗಲೇ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹಾಗೂ ರಾಜ್ಯಸಭೆಯಲ್ಲಿ ಪ್ರಿಯಾಂಕ ಗಾಂಧಿ ಇರುವುದರಿಂದ ಬಿಜೆಪಿಯನ್ನ ಸಮರ್ಥವಾಗಿ ಎದುರಿಸುವ ಸೂತ್ರ ರಚಿಸಬಹುದು ಎಂದಿದ್ದಾರೆ.