ನವದೆಹಲಿ: ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಚರ್ಚಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಉತ್ತರ ಪ್ರದೇಶ ಕಾಂಗ್ರೆಸ್ ಮುಖಂಡರ ವರ್ಚುವಲ್ ಸಭೆ ಕರೆದಿದ್ದಾರೆ.
ರಾಜ್ಯದ ಅತ್ಯಂತ ಕುಖ್ಯಾತ ಅಪರಾಧಿಗಳಲ್ಲಿ ಒಬ್ಬನಾದ ವಿಕಾಸ್ ದುಬೆ ಅವರನ್ನು ಬಂಧಿಸಲು ಹೋದ ಸಂದರ್ಭದಲ್ಲಿ ಉಪ ಅಧೀಕ್ಷಕರು ಸೇರಿದಂತೆ ಕನಿಷ್ಠ ಎಂಟು ಮಂದಿ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದರು ಮತ್ತು ಆರು ಪೊಲೀಸರು ಗಾಯಗೊಂಡಿದ್ದರು. ಈ ಘಟನೆಯ ನಂತರ ಕಾಂಗ್ರೆಸ್ ಸಲಹಾ ಗುಂಪು, ಸಿಎಲ್‌ಪಿ ನಾಯಕ, ಪಿಸಿಸಿ ಅಧ್ಯಕ್ಷ ಮತ್ತು ಇತರ ಪ್ರಮುಖ ನಾಯಕರು ಉತ್ತರಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಪ್ರಿಯಾಂಕಾ ಗಾಂಧಿ ಸಭೆಯಲ್ಲಿ ಚರ್ಚಿಸಲಿದ್ದಾರೆ.
ಪ್ರಾಣ ತ್ಯಾಗ ಮಾಡಿದ ಪೊಲೀಸರಿಗೆ ಗೌರವ ಸಲ್ಲಿಸಲು ಮತ್ತು ಅವರ ಕುಟುಂಬಗಳಿಗೆ ಒಗ್ಗಟ್ಟನ್ನು ತೋರಿಸಲು ರಾಜ್ಯ ಘಟಕವು ಪಕ್ಷದ ಕಾರ್ಯಕರ್ತರನ್ನು ತಮ್ಮ ಮನೆಗಳ ಹೊರಗೆ ಮೇಣದಬತ್ತಿಗಳನ್ನು ಹಚ್ಚುವಂತೆ ಕೇಳಿಕೊಂಡಿತ್ತು. ಕಾನ್ಪುರದ ಘಟನೆಯು ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಘಟನೆ ಬಗ್ಗೆ ಪ್ರತಿಪಕ್ಷಗಳು ಯೋಗಿ ನೇತೃತ್ವದ ಸರ್ಕಾರವನ್ನ ಹಿಗ್ಗಾಮುಗ್ಗಾ ಟೀಕೆಗೆ ಗುರಿಪಡಿಸಿವೆ.
-
कानपुर की भयावह घटना की खबर आई ही थी कि प्रयागराज में एक परिवार के चार लोगों की हत्या कर दी गई। गाजियाबाद में पिता-पुत्री की हत्या कर दी गई।
— Priyanka Gandhi Vadra (@priyankagandhi) July 3, 2020 " class="align-text-top noRightClick twitterSection" data="
उप्र में अपराधियों का इस तरह हावी हो जाना असामान्य है। इस #जंगलराज को देखते हुए जवाबदेही तो फिक्स करनी ही होगी।https://t.co/GYt6FmEDkK
">कानपुर की भयावह घटना की खबर आई ही थी कि प्रयागराज में एक परिवार के चार लोगों की हत्या कर दी गई। गाजियाबाद में पिता-पुत्री की हत्या कर दी गई।
— Priyanka Gandhi Vadra (@priyankagandhi) July 3, 2020
उप्र में अपराधियों का इस तरह हावी हो जाना असामान्य है। इस #जंगलराज को देखते हुए जवाबदेही तो फिक्स करनी ही होगी।https://t.co/GYt6FmEDkKकानपुर की भयावह घटना की खबर आई ही थी कि प्रयागराज में एक परिवार के चार लोगों की हत्या कर दी गई। गाजियाबाद में पिता-पुत्री की हत्या कर दी गई।
— Priyanka Gandhi Vadra (@priyankagandhi) July 3, 2020
उप्र में अपराधियों का इस तरह हावी हो जाना असामान्य है। इस #जंगलराज को देखते हुए जवाबदेही तो फिक्स करनी ही होगी।https://t.co/GYt6FmEDkK
"ಕಾನ್ಪುರದಲ್ಲಿ ನಡೆದ ಭೀಕರ ಘಟನೆಯ ನಂತರ, ಪ್ರಯಾಗರಾಜ್‌ನಲ್ಲಿ ಒಂದು ಕುಟುಂಬದ ನಾಲ್ಕು ಜನರು ಕೊಲ್ಲಲ್ಪಟ್ಟ ಮತ್ತೊಂದು ಘಟನೆ ಗಮನಕ್ಕೆ ಬಂದಿದೆ. ಗಾಜಿಯಾಬಾದ್‌ನಲ್ಲಿ ತಂದೆ ಮತ್ತು ಮಗಳನ್ನು ಹತ್ಯೆ ಮಾಡಲಾಗಿದೆ" ಎಂದು ಪ್ರಿಯಾಂಕಾ ತಮ್ಮ ಟ್ವಿಟರ್ನಲ್ಲಿ ತೀಕ್ಷ್ಣವಾಗಿ ಯೋಗಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ