ETV Bharat / bharat

ಭತ್ತಕ್ಕೆ ನಿಖರ ಬೆಲೆ ಖಾತ್ರಿಗೊಳಿಸಿ: ಯೋಗಿ ಸರ್ಕಾರಕ್ಕೆ ಪ್ರಿಯಾಂಕಾ ಆಗ್ರಹ - ಭತ್ತಕ್ಕೆ ನಿಖರ ಬೆಲೆ ಖಾತ್ರಿಗೊಳಿಸಿ

ಉತ್ತರಪ್ರದೇಶ ಸರ್ಕಾರ ಭತ್ತದ ಬೆಲೆ ನಿಗದಿಪಡಿಸದೆ ರೈತರನ್ನು ಸಂಕಷ್ಟಕ್ಕೆ ದೂಡಿದೆ ಅಂತಾ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹರಿಹಾಯ್ದಿದ್ದಾರೆ.

Priyanka Gandhi
ಪ್ರಿಯಾಂಕಾ ಗಾಂಧಿ ವಾದ್ರಾ
author img

By

Published : Oct 13, 2020, 3:25 PM IST

Updated : Oct 13, 2020, 3:33 PM IST

ದೆಹಲಿ: ಭತ್ತಕ್ಕೆ ಸರಿಯಾದ ಬೆಲೆ ಖಾತ್ರಿ ಪಡಿಸಬೇಕೆಂದು ಉತ್ತರಪ್ರದೇಶ ಸರ್ಕಾರಕ್ಕೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆಗ್ರಹಿಸಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ನೀವು ಖಾತ್ರಿ ಪಡಿಸದಿದ್ದರೆ ಆಂದೋಲನ ನಡೆಸುವುದಾಗಿ ಎಚ್ಚರಿಕೆ ನೀಡಿದರು.

  • ..ऐसे में तो किसान की लागत भी नहीं निकलेगी। किसान अगली फसल कैसे लगाएगा? बिजली बिल में लूट चल ही रही है। मजबूरन किसान कर्ज के जाल में फँसता जाएगा।

    उप्र सरकार तुरंत इसमें हस्तक्षेप कर किसान को सही दाम दिलाए वरना कांग्रेस पार्टी आंदोलन करेगी।

    — Priyanka Gandhi Vadra (@priyankagandhi) October 13, 2020 " class="align-text-top noRightClick twitterSection" data=" ">

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತಿ ಕ್ವಿಂಟಲ್ ಭತ್ತದ ಬೆಲೆ 3,500 ರೂಪಾಯಿ ಇತ್ತು. ಪ್ರಸ್ತುತ ದರ 1,200 ರೂಪಾಯಿಗಳಿದ್ದು, ರೈತರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ಗೋಧಿಗಿಂತ ಭತ್ತವನ್ನು ಅಗ್ಗವಾಗಿ ಮಾರುತ್ತಿರುವುದು ಇದೇ ಮೊದಲ ಬಾರಿ ಅನ್ನಿಸುತ್ತಿದೆ. ಇದರಿಂದ ರೈತರು ಬೆಳೆ ಬೆಳೆಯಲು ಖರ್ಚು ಮಾಡಿದ ಹಣವೂ ಬರುವುದಿಲ್ಲ. ಮತ್ತೊಮ್ಮೆ ಅವರು ಹೇಗೆ ಬೆಳೆ ಬೆಳೆಯಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಬೆಳೆಗೆ ನೀರು ಹರಿಸುವ ಸಲುವಾಗಿ ವಿದ್ಯುತ್ ಬಳಿಸಿದ್ದಾರೆ. ವಿದ್ಯುತ್ ಬಿಲ್ ಕಟ್ಟಲಾಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಲಾದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಸೇರಿ ಹಲವು ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ಸರ್ಕಾರ, ಈ ಕಾಯ್ದೆಗಳು ರೈತರಿಗೆ ಅನುಕೂಲವಾಗಲಿದ್ದು, ಆದಾಯ ಹೆಚ್ಚಿಸಲು ಸಹಕಾರಿಯಾಗಲಿವೆ ಎಂದು ಪ್ರತಿಪಾದಿಸಿತ್ತು.

Last Updated : Oct 13, 2020, 3:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.