ನವದೆಹಲಿ: ಲಾಕ್‌ಡೌನ್ ಸಮಯದಲ್ಲಿ ಯಾವುದೇ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಿಸಲು ಅವಕಾಶವಿರುವುದಿಲ್ಲ. ಶಾಲೆಗಳು ಪ್ರಾರಂಭವಾಗುವವರೆಗೆ ಬೋಧನಾ ಶುಲ್ಕವನ್ನು ಮಾತ್ರ ವಿಧಿಸಬಹುದು ಎಂದು ನವದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
-
It has come to my notice that many schools are taking fees arbitrarily and charging transportation fees even when schools are closed. Private schools should not stoop to this level. Be it private or government schools, they cannot hike fees: Delhi Deputy CM Manish Sisodia pic.twitter.com/Bm80wyYlUG
— ANI (@ANI) April 17, 2020 " class="align-text-top noRightClick twitterSection" data="
">It has come to my notice that many schools are taking fees arbitrarily and charging transportation fees even when schools are closed. Private schools should not stoop to this level. Be it private or government schools, they cannot hike fees: Delhi Deputy CM Manish Sisodia pic.twitter.com/Bm80wyYlUG
— ANI (@ANI) April 17, 2020It has come to my notice that many schools are taking fees arbitrarily and charging transportation fees even when schools are closed. Private schools should not stoop to this level. Be it private or government schools, they cannot hike fees: Delhi Deputy CM Manish Sisodia pic.twitter.com/Bm80wyYlUG
— ANI (@ANI) April 17, 2020
ಶಾಲೆಗಳು ಸಾರಿಗೆ ಶುಲ್ಕ, ಇತರ ಶುಲ್ಕಗಳನ್ನು ವಿಧಿಸುತ್ತಿದೆ ಎಂದು ನಮಗೆ ಸಾಕಷ್ಟು ದೂರುಗಳು ಬಂದಿವೆ. ಲಾಕ್‌ಡೌನ್ ಸಮಯದಲ್ಲಿ ಶುಲ್ಕ ಏರಿಕೆಗೆ ಮುಂದಾಗಿವೆ ಎಂಬ ಮಾತು ಕೇಳಿಬಂದಿದೆ. ಸರ್ಕಾರದಿಂದ ಅನುಮತಿ ಪಡೆಯದೇ ಯಾವುದೇ ಖಾಸಗಿ ಶಾಲೆ ಶುಲ್ಕವನ್ನು ಹೆಚ್ಚಿಸಲು ಅನುಮತಿ ನೀಡಲಾಗುವುದಿಲ್ಲ. ಬೋಧನಾ ಶುಲ್ಕ ಹೊರತು ಯಾವುದೇ ಶುಲ್ಕ ವಿಧಿಸುವಂತಿಲ್ಲ ಎಂದಿದ್ದಾರೆ.
ವಾರ್ಷಿಕ ಶುಲ್ಕ ಅಥವಾ ಇನ್ನಿತರ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ ಎಂದು ಸಿಸೋಡಿಯಾ ಸ್ಪಷ್ಟಪಡಿಸಿದ್ದು, ಎಲ್ಲಾ ಶಾಲೆಗಳು ಸಿಬ್ಬಂದಿಗೆ ವೇತನ ಪಾವತಿ ಮಾಡಬೇಕು ಎಂದು ತಿಳಿಸಿದ್ದಾರೆ.