ಬಾಲಸೋರ್ : ಒಡಿಶಾ ಕಡಲ ತೀರದಲ್ಲಿ ಭಾರತವು ಇಂದು ಪೃಥ್ವಿ -2 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗ ನಡೆಸಿತು.
ಎರಡು ಕ್ಷಿಪಣಿಗಳಿಂದ ಈ ಪರೀಕ್ಷೆಯನ್ನ ಕೈಗೊಳ್ಳಲಾಯಿತು. ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಕ್ಷಿಪಣಿಗಳ ಪ್ರಯೋಗಗಳು ಯಶಸ್ವಿಯಾಗಿವೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಸೇನೆಯ ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್ನಿಂದ ಒಡಿಶಾ ಕರಾವಳಿಯ ರಕ್ಷಣಾ ಕೇಂದ್ರದಿಂದ ಅಣುಬಾಂಬ್ ತೆಗೆದುಕೊಂಡು ಹೋಗುವ ಸಾಮರ್ಥ್ಯ ಹೊಂದಿರುವ ಬ್ಯಾಲಿಸ್ಟಿಕ್ ಕ್ಷಿಪಣಿ ಪೃಥ್ವಿ- II ಅನ್ನು ಪ್ರಯೋಗಕ್ಕೆ ಒಳಪಡಿಸಲಾಗುತ್ತಿದೆ.