ನವದೆಹಲಿ: ಕೊರೊನಾ ಮಹಾಮಾರಿ ವಿರುದ್ಧದ ನಡುವೆ ದೇಶದಲ್ಲಿರುವ ಅನ್ಲಾಕ್ ಮುಕ್ತಾಯಗೊಳ್ಳಲು ಕ್ಷಣಗಣನೇ ಶುರುವಾಗಿದ್ದು, ಇದರ ಮಧ್ಯೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.
ಮಂಗಳವಾರ ಸಂಜೆ 4 ಗಂಟೆಗೆ ನಮೋ ದೇಶದ ಜನರನ್ನುದ್ದೇಶಿಸಿ ಮಾತನಾಡಲಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ. ಭಾರತ- ಚೀನಾ ನಡುವಿನ ಬಿಕ್ಕಟ್ಟು, ಲಡಾಖ್ನಲ್ಲಿ ಭಾರತೀಯ ಯೋಧರು ಹುತಾತ್ಮರಾಗಿರುವ ವಿಚಾರವಾಗಿ ಮಾತನಾಡುವ ಸಾಧ್ಯತೆ ಇದೆ.
-
Prime Minister @narendramodi will address the nation at 4 PM tomorrow.
— PMO India (@PMOIndia) June 29, 2020 " class="align-text-top noRightClick twitterSection" data="
">Prime Minister @narendramodi will address the nation at 4 PM tomorrow.
— PMO India (@PMOIndia) June 29, 2020Prime Minister @narendramodi will address the nation at 4 PM tomorrow.
— PMO India (@PMOIndia) June 29, 2020
ಕೇಂದ್ರ ಸರ್ಕಾರದಿಂದ ಈಗಾಗಲೇ ಚೀನಾದ 59 ಆ್ಯಪ್ ಬ್ಯಾನ್ ಆಗಿದ್ದು, ಜತೆಗೆ ಅನ್ಲಾಕ್ 2.0ಗೆ ಸಂಬಂಧಿಸಿದಂತೆ ಸೋಮವಾರ ಕೇಂದ್ರ ಗೃಹ ಸಚಿವಾಲಯದಿಂದ ಮಾರ್ಗಸೂಚಿ ಬಿಡುಗಡೆಯಾಗಿವೆ. ಹೀಗಾಗಿ ನಮೋ ಮಾತು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಭಾನುವಾರ ಮನ್ ಕೀ ಬಾತ್ನಲ್ಲಿ ಮಾತನಾಡಿದ್ದ ನಮೋ ಚೀನಾಗೆ ಸರಿಯಾಗಿ ಭಾರತ ತಿರುಗೇಟು ನೀಡಿದೆ ಎಂದಿದ್ದು, ಚೀನಾ ವಸ್ತು ಬಹಿಷ್ಕಾರ ಮಾಡುವಂತೆ ಕರೆ ನೀಡಿದ್ದರು. ಇದೀಗ ಅವರು ಯಾವೆಲ್ಲ ವಿಚಾರವಾಗಿ ಮಾತನಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ.