ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮುಖಗವಸು ಹಾಕಿಕೊಂಡು ದೇಶದ ರಾಜ್ಯಗಳ ಸಿಎಂಗಳೊಂದಿಗೆ ವಿಡಿಯೋ ಸಂವಾದ ನಡೆಸುತ್ತಿದ್ದಾರೆ. ಈ ವೇಳೆ ಅವರು, ನಾನು ವಾರದ 24X7 ಲಭ್ಯವಿರುವುದಾಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು 4-5 ನಿಮಿಷಗಳಲ್ಲಿ ತಮ್ಮ ರಾಜ್ಯದ ಪರಿಸ್ಥಿತಿ, ಲಾಕ್‌ಡೌನ್ ವಿಸ್ತರಣೆ ಮಾಡುವ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಪ್ರಧಾನಿ ಜತೆ ಮಾತುಕತೆ ವೇಳೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಲಾಕ್‌ಡೌನ್ ವಿಸ್ತರಣೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾಗಿ ತಿಳಿದು ಬಂದಿದೆ.
ಒಡಿಶಾ, ಪಂಜಾಬ್ ರಾಜ್ಯಗಳು ಏಪ್ರಿಲ್ ತಿಂಗಳಾಂತ್ಯದ ವೇಳೆಯವರೆಗೂ ಲಾಕ್‌ಡೌನ್ ವಿಸ್ತರಿಸಿವೆ. ಇಂದು ರಾಜಸ್ಥಾನ ಕೂಡ ಲಾಕ್‌ಡೌನ್ ವಿಸ್ತರಿಸಿ ಆದೇಶಿಸಿದೆ.
ಬಿಹಾರ ಸಿಎಂ ದಿಗ್ಭಂಧನ ಅವಧಿ ವಿಸ್ತರಿಸಲು ಹಿಂದೇಟು ಹಾಕಿದ್ದು, ರೈತರಿಗಾಗಿ ಕೆಲವು ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.