ETV Bharat / bharat

ದೊಡ್ಡಗೌಡರು ಸೇರಿ ಧುರೀಣರೊಂದಿಗೆ ಮೋದಿ ಮಾತುಕತೆ: ಕೊರೊನಾ ವಿರುದ್ಧ​ ಸಮರಕ್ಕೆ ಹೆಚ್​ಡಿಡಿ ಬೆಂಬಲ

ಕೊರೊನಾ ದೇಶವನ್ನು ತೀವ್ರವಾಗಿ ಕಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೊನಾ ತಡೆಯಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಮಾಜಿ ಪ್ರಧಾನಿ ಹೆಚ್​ಡಿಡಿ ಸೇರಿ ರಾಷ್ಟ್ರದ ಹಲವು ನಾಯಕರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ.

ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ
devegowda
author img

By

Published : Apr 5, 2020, 8:26 PM IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ದೇವೇಗೌಡರಿಗೆ ಕರೆ ಮಾಡಿ ಕೋವಿಡ್-19 ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ದೇವೇಗೌಡರು ''ಪ್ರಧಾನಿ ಕರೆ ಮಾಡಿ ನನಗಿರುವ ಆಡಳಿತಾತ್ಮಕ ಅನುಭವವನ್ನು ಶ್ಲಾಘಿಸಿದರು. ಜೊತೆಗೆ ಕೊರೊನಾ ಹೋರಾಟದಲ್ಲಿ ತಮ್ಮ ಬೆಂಬಲ ಕೋರಿದ್ದಾರೆ'' ಎಂದು ತಿಳಿಸಿದ್ದಾರೆ. ಜೊತೆಗೆ ಕೊರೊನಾ ವಿರುದ್ಧ ಹೋರಾಟಕ್ಕೆ ಪ್ರಧಾನಿಗೆ ಬೆಂಬಲ ನೀಡುತ್ತೇನೆ ಎಂದಿದ್ದಾರೆ.

ಇನ್ನೊಂದು ಟ್ವಿಟ್​ನಲ್ಲಿ ವಿಶ್ವದಾದ್ಯಂತ ಕೊರೊನಾಗೆ ಸಾವಿರಾರು ಜನರು ಸಾವಿಗೀಡಾಗುತ್ತಿದ್ದಾರೆ. ಮುಂದಿನ ವಾರ ಕೊರೊನಾ ವಿರುದ್ಧದ ಹೋರಾಟ ಭಾರತಕ್ಕೆ ಪ್ರಮುಖ ಘಟ್ಟವಾಗಲಿದೆ ಎಂದಿದ್ದಾರೆ.

  • Thousands of people are dying across the world due to COVID19. Coming weeks are crucial for India in our fight against the virus.
    As a Former Prime Minister I agreed to cooperate in the fight against #Coronavirus that has devastated not only our country but also the whole world.

    — H D Devegowda (@H_D_Devegowda) April 5, 2020 " class="align-text-top noRightClick twitterSection" data=" ">

ಮಾಜಿ ಪ್ರಧಾನಿ ಹೆಚ್​ಡಿಡಿ ಸೇರಿ ಪ್ರಧಾನಿ ಮೋದಿ ಇಂದು ರಾಷ್ಟ್ರದ ಹಿರಿಯ ರಾಜಕೀಯ ನಾಯಕರೊಂದಿಗೆ ಕೊರೊನಾ ಸೋಂಕಿನ ಕುರಿತು ಚರ್ಚೆ ನಡೆಸಿದ್ದಾರೆ. ಮಾಜಿ ರಾಷ್ಟ್ರಪತಿಗಳಾದ ಪ್ರಣಬ್​ ಮುಖರ್ಜಿ, ಪ್ರತಿಭಾ ಪಾಟೀಲ್​, ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್​, ಸೋನಿಯಾಗಾಂಧಿ, ಮುಲಾಯಂಸಿಂಗ್​ ಯಾದವ್​, ನವೀನ್​ ಪಟ್ನಾಯಕ್​, ಕೆ.ಚಂದ್ರಶೇಖರ್​ ರಾವ್​, ಎಂ.ಕೆ.ಸ್ಟ್ಯಾಲಿನ್​. ಪ್ರಕಾಶ್​ ಸಿಂಗ್​ ಬಾದಲ್​​ ಅವರೊಂದಿಗೆ ಚರ್ಚೆ ನಡೆಸಿ ಕೊರೊನಾ ಕುರಿತ ಸಲಹೆ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.