ETV Bharat / bharat

ತೆಲಂಗಾಣವನ್ನೇ ಬೆಚ್ಚಿಬೀಳಿಸಿದ್ದ ಮರ್ಯಾದಾ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಆತ್ಮಹತ್ಯೆಗೆ ಶರಣು

ದೇಶಾದ್ಯಂತ ತಲ್ಲಣ ಉಂಟುಮಾಡಿದ್ದ ಪ್ರಣಯ್​​ ಪರುಮಲ್ಲಾ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿ ರಾವ್​ ಖೈರತಾಬಾದ್​ನ ಆರ್ಯ ವ್ಯಾಸ ಭವನದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Prime accused in Pranay Perumalla honour killing commits suicide
ಅಮೃತವರ್ಷಿಣಿ ಹಾಗೂ ಪ್ರಣಯ್​​ ಪರುಮಲ್ಲಾ
author img

By

Published : Mar 8, 2020, 3:14 PM IST

Updated : Mar 8, 2020, 3:19 PM IST

ಹೈದರಾಬಾದ್​: ಇಡೀ ತೆಲಂಗಾಣವನ್ನೇ ಬೆಚ್ಚಿಬೀಳಿಸಿ, ದೇಶಾದ್ಯಂತ ಚರ್ಚೆಗೆ ಕಾರಣವಾದ ಪ್ರಣಯ್​​ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮಾರುತಿ ರಾವ್​, ಜಾಮೀನಿನ ಮೇಲೆ ಹೊರಬಂದಿದ್ದರು. ಆದರೆ ಇಂದು ಖೈರತಾಬಾದ್​ನ ಆರ್ಯ ವ್ಯಾಸ ಭವನದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಸೈಫಾಬಾದ್​ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆ:

ಅಮೃತವರ್ಷಿಣಿ ಹಾಗೂ ಪ್ರಣಯ್​​ ಪರುಮಲ್ಲಾ 2017ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಕೆಳಜಾತಿಯ ಹುಡುಗನನ್ನು ಮಗಳು ಪ್ರೀತಿಸಿ ಮದುವೆಯಾಗಿದ್ದಳು ಎಂಬ ಕಾರಣಕ್ಕೆ ಅಮೃತಾಳ ತಂದೆ ಸೆಪ್ಟಂಬರ್​ನಲ್ಲಿ 2018ರಲ್ಲಿ ಸುಪಾರಿ ಕೊಟ್ಟು ಆಕೆಯ ಕಣ್ಣೆದುರೇ ಪ್ರಣಯ್​ನನ್ನು ಕೊಲೆ ಮಾಡಿಸಿದ್ದರು. ಈ ವೇಳೆ ಅಮೃತಾ ಏಳು ತಿಂಗಳ ಗರ್ಭಿಣಿಯಾಗಿದ್ದಳು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೃತಾ, ಘಟನೆಯ ಬಳಿಕ ನಾನು ಒಂದು ಬಾರಿ ಕೂಡ ತಂದೆಯನ್ನು ನೋಡೂ ಇಲ್ಲ, ಮಾತನಾಡಿಸಲೂ ಇಲ್ಲ. ಬಹುಶಃ ಪಶ್ಚಾತ್ತಾಪವಾಗಿ ಹೀಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು, ಈ ಕುರಿತು ಖಚಿತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

Last Updated : Mar 8, 2020, 3:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.