ETV Bharat / bharat

ಗಣತಂತ್ರ ದಿನದ ಘಟನೆಗೆ ಬೇಸರ: ಐಕ್ಯತೆ ಮಂತ್ರ, ಸರ್ಕಾರದ ಬೆನ್ನುತಟ್ಟಿದ ರಾಷ್ಟ್ರಪತಿ ಕೋವಿಂದ್​ - ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಸುದ್ದಿ

address budget session, President Ram Nath Kovind to address budget session, President Ram Nath Kovind, President Ram Nath Kovind news, ಬಜೆಟ್​​ ಕಲಾಪ, ಬಜೆಟ್​​ ಕಲಾಪ ಬಗ್ಗೆ ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಭಾಷಣ, ಜಂಟಿ ಅಧಿವೇಶನ ಉದ್ಧೇಶಿಸಿ ರಾಷ್ಟ್ರಪತಿ ಭಾಷಣ, ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​, ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಸುದ್ದಿ,
ರಾಷ್ಟ್ರಪತಿ ರಾಮನಾಥ್ ಕೋವಿಂದ್
author img

By

Published : Jan 29, 2021, 10:02 AM IST

Updated : Jan 29, 2021, 12:50 PM IST

12:00 January 29

ದೇಶವು ಕೋವಿಡ್‌ ಕಾಲದ ಹೊಡೆತದಿಂದ ಚೇತರಿಸಿಕೊಳ್ಳುತ್ತಿದೆ: ರಾಷ್ಟ್ರಪತಿ

  • ಕಠಿಣ ಸನ್ನಿವೇಶದ ಹೊರತಾಗಿಯೂ ಜಾಗತಿಕ ಹೂಡಿಕೆದಾರರಿಗೆ ಭಾರತವು ಪ್ರಶಸ್ತ ಸ್ಥಳವಾಗಿ ಹೊರಹೊಮ್ಮಿದೆ
  • ಹೊಸ ಸಂಸತ್‌ ಕಟ್ಟಡ ನಿರ್ಮಾಣಕ್ಕೆ ಹಿಂದಿನ ಸರ್ಕಾರಗಳು ಪ್ರಯತ್ನ ಮಾಡಿದ್ದವು
  • ಸ್ವಾತಂತ್ರ್ಯೋತ್ಸವದ 75ನೇ ವರ್ಷದತ್ತ ಅಡಿ ಇಡುತ್ತಿರುವಾಗ ಹೊಸ ಸಂಸತ್‌ ಕಟ್ಟಡ ನಿರ್ಮಾಣ ಆರಂಭಿಸಿದ್ದು, ಕಾಕತಾಳೀಯ ಮತ್ತು ಸಂತಸದ ವಿಚಾರ: ರಾಷ್ಟ್ರಪತಿ ಕೋವಿಂದ್

11:54 January 29

ನಮ್ಮ ಸರ್ಕಾರದ ಕೆಲಸ ನನಗೆ ನನಗೆ ತೃಪ್ತಿ ತಂದಿದೆ: ರಾಷ್ಟ್ರಪತಿ

  • ನಮ್ಮ ಸರ್ಕಾರ ತೆಗೆದುಕೊಂಡ ಸಮಯೋಚಿತ ನಿರ್ಧಾರವು ಲಕ್ಷಾಂತರ ನಾಗರೀಕರ ಜೀವವನ್ನು ಉಳಿಸಿದೆ
  • ನಮ್ಮ ಸರ್ಕಾರದ ಕೆಲಸ ನನಗೆ ನನಗೆ ತೃಪ್ತಿ ತಂದಿದೆ
  • ಇಂದು ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ
  • ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ
  • ಭಾರತದ ವಿಶ್ವದಲ್ಲಿಯೇ ಅತೀ ದೊಡ್ಡ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿರುವುದು ಹೆಮ್ಮೆಯ ವಿಚಾರ
  • ಎರಡು ಲಸಿಕೆಗಳು ಸ್ವದೇಶಿ ನಿರ್ಮಿತ ಲಸಿಕೆಗಳಾಗಿವೆ ಎಂದು ರಾಷ್ಟ್ರಪತಿ ಹೇಳಿದರು

11:54 January 29

ಈ ಬಿಕ್ಕಟ್ಟಿನಲ್ಲಿಯೂ ಭಾರತ ಮಾನವೀಯತೆಯನ್ನು ತೋರಿದೆ: ರಾಷ್ಟ್ರಪತಿ

  • ಈ ಬಿಕ್ಕಟ್ಟಿನಲ್ಲಿಯೂ ಭಾರತ ಮಾನವೀಯತೆಯನ್ನು ತೋರಿದೆ
  • ಹಲವಾರು ರಾಷ್ಟ್ರಗಳಿಗೆ ಲಕ್ಷಾಂತರ ಲಸಿಕೆಗಳನ್ನು ನೀಡಿದೆ
  • ಜನೌಷಧ ಕೇಂದ್ರಗಳ ಮೂಲಕ ಕಡಿಮೆ ದರದಲ್ಲಿ ಔಷಧ ನೀಡಲಾಗಿದೆ
  • ದೇಶದಲ್ಲಿ ಬಡವರಿಗೆ ಉಚಿತವಾಗಿ ಚಿಕಿತ್ಸೆ ಸಿಗುತ್ತಿದೆ
  • ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡವರಿಗೆ ಸಹಾಯವಾಗುತ್ತಿದೆ
  • ಬಡವರಿಗೆ ರೂ.5 ಲಕ್ಷದವರೆಗೂ ಉಚಿತ ಚಿಕಿತ್ಸೆ ಸಿಗುತ್ತಿದೆ
  • ದೇಶದಲ್ಲಿ ಇದೀಗ 562 ವೈದ್ಯಕೀಯ ಕಾಲೇಜುಗಳಿವೆ
  • ರೈತರ ಉತ್ಪನ್ನಕ್ಕೆ ಒಂದೂವರೆ ಪಟ್ಟು ಕನಿಷ್ಟ ಬೆಂಬಲ ಬೆಲೆ ನೀಡಲು ನಿರ್ಧಾರಿಸಲಾಗಿದೆ
  • ನೀರಾವರಿ ಯೋಜನೆಗಳಲ್ಲಿ ಸುಧಾರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ

11:38 January 29

ಕೆಂಪುಕೋಟೆಯಲ್ಲಿ ಧ್ವಜಕ್ಕೆ ಅಪಮಾನ ದೌರ್ಭಾಗ್ಯಪೂರ್ಣ: ರಾಷ್ಟ್ರಪತಿ

  • ಕೆಂಪುಕೋಟೆಯಲ್ಲಿ ಧ್ವಜಕ್ಕೆ ಅಪಮಾನ ದೌರ್ಭಾಗ್ಯಪೂರ್ಣ ಎಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಕಳವಳ ವ್ಯಕ್ತಪಡಿಸಿದರು. ಇಂತಹ ಕೃತ್ಯ ದೇಶದ ಗೌರವಕ್ಕೆ ಧಕ್ಕೆ ತಂದಿದೆ. ಹೀಗಾಗಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

11:35 January 29

ಸಣ್ಣ ರೈತರಿಗೆ ದೊಡ್ಡ ರೈತರಷ್ಟೇ ಆದಾಯ ಸಿಗುವಂತಾಗಬೇಕು

  • ಸಣ್ಣ ರೈತರಿಗೆ ದೊಡ್ಡ ರೈತರಷ್ಟೇ ಆದಾಯ ಸಿಗುವಂತಾಗಬೇಕು. ಕೃಷಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. 100ಕ್ಕೂ ಹೆಚ್ಚು ಕೃಷಿ ರೈಲುಗಳನ್ನು ಓಡಿಸಲಾಗುತ್ತಿದೆ. ಡೇರಿ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಅನ್ನದಾತರನ್ನು ಇಂಧನದಾತರನ್ನಾಗಿಯೂ ಮಾಡಲಾಗುತ್ತಿದೆ. ಇಥೆನಾಲ್ ಉತ್ಪಾದನೆಯಿಂದ ರೈತರ ಆದಾಯ ಹೆಚ್ಚಾಗಲಿದೆ ಎಂದು ಕೋವಿಂದ್​ ಘೋಷಣೆ ಮಾಡಿದರು.
  • ಕೃಷಿ ಕ್ಷೇತ್ರವನ್ನು ಲಾಭದಾಯಕಗೊಳಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಗ್ರಾಮಗಳಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ದೇಶದ ಕಾನೂನನ್ನು ಗಂಭೀರವಾಗಿ ಪಾಲಿಸುವ ಅಗತ್ಯವಿದೆ. ಕೃಷಿ ತಿದ್ದುಪಡಿ ಕಾಯ್ದೆಗಳ ಬಗ್ಗೆ ವದಂತಿ ಹಬ್ಬಿಸಲಾಗುತ್ತಿದೆ.
  • ಸಣ್ಣ ಉದ್ಯಮಗಳನ್ನು ಸಶಕ್ತಗೊಳಿಸಲಾಗುತ್ತಿದೆ. 1 ರೂಪಾಯಿಗೆ ಸ್ಯಾನಿಟರಿ ಪ್ಯಾಡ್ ನೀಡಲು ಯೋಜನೆ ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿ ಬಾಣಂತಿಯರ ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂದು ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು

11:30 January 29

ಆತ್ಮ ನಿರ್ಭರ ಭಾರತ ರೈತರ ಜೀವನ ಮಟ್ಟ ಸುಧಾರಿಸಿದೆ: ಕೋವಿಂದ್

ಕೋವಿಡ್ ತಡೆಗೆ ಸರ್ಕಾರದ ಸಕಾಲಿಕ ನಿರ್ಧಾರದಿಂದ ಲಕ್ಷಾಂತರ ಮಂದಿಯ ಜೀವ ಉಳಿದಿದೆ: ಕೋವಿಂದ್

‘ಕೋವಿಡ್ ವಿರುದ್ಧದ ಹೋರಾಟದಲ್ಲಿ ನಾವು ಅನೇಕ ನಾಗರಿಕರನ್ನು ಕಳೆದುಕೊಂಡಿದ್ದೇವೆ. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರೂ ಕೊರೊನಾ ಸಮಯದಲ್ಲೇ ಇಹಲೋಕ ತ್ಯಜಿಸಿದ್ದಾರೆ. ಆರು ಮಂದಿ ಸಂಸದರು ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ. ಅವರೆಲ್ಲರಿಗೆ ನನ್ನ ಗೌರವ ನಮನಗಳು  ಎಂದ ಕೋವಿಂದ್​

11:26 January 29

ಗಣರಾಜ್ಯೋತ್ಸವ ದಿನ ರಾಷ್ಟ್ರಧ್ವಜಕ್ಕೆ ಅಪಮಾನ ದುರದೃಷ್ಟಕರ: ರಾಷ್ಟ್ರಪತಿ

  • ಕೃಷಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ
  • 100ಕ್ಕೂ ಹೆಚ್ಚು ಕೃಷಿ ರೈಲುಗಳನ್ನು ಓಡಿಸಲಾಗುತ್ತಿದೆ
  • ಡೈರಿ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಲಾಗುತ್ತಿದೆ
  • ಅನ್ನದಾತರನ್ನು ಇಂಧನದಾತರನ್ನಾಗಿ ಮಾಡುವ ಉದ್ದೇಶವಾಗಿದೆ
  • ಗಣರಾಜ್ಯೋತ್ಸವ ದಿನದ ಅಪಮಾನ ದೌಭಾರ್ಗ್ಯಪೂರ್ಣ
  • ನೂತನ ಕೃಷಿ ಕಾನೂನುಗಳಿಗೆ ಶ್ಲಾಘನೆ
  • ಹೊಸ 3 ಕೃಷಿ ಕಾಯ್ದೆಗಳಿಂದ ರೈತರು ಸಬಲರಾಗುತ್ತಾರೆ

11:22 January 29

ಈಗ ಭಾರತ ವಿದೇಶಿಗಳಿಗೆ ಕೋವಿಡ್​ ಲಸಿಕೆ ಪೂರೈಸುತ್ತಿದೆ

  • ಆತ್ಮ ನಿರ್ಭರತೆಯತ್ತ ನಾವು ವೇಗವಾಗಿ ಮುನ್ನಡೆಯುತ್ತಿದ್ದೇವೆ
  • ಕೋವಿಡ್​ ಸಂದರ್ಭದಲ್ಲಿ ಸರ್ಕಾರ ಹಲವು ಯೋಜನೆಗಳನ್ನು ನೀಡಿದೆ
  • ಕೊರೊನಾ ಸಂದರ್ಭದಲ್ಲಿ ಭಾರತ ಆರ್ಥಿಕ ಪ್ಯಾಕೇಜ್​ ಘೋಷಿಸಿದೆ
  • ಈಗ ಭಾರತ ವಿದೇಶಿಗಳಿಗೆ ಕೋವಿಡ್​ ಲಸಿಕೆ ಪೂರೈಸುತ್ತಿದೆ
  • ನಮ್ಮ ಒಂದ ಕೈಯಲ್ಲಿ ಕರ್ತವ್ಯ, ಮತ್ತೊಂದು ಕೈಯಲ್ಲಿ ಯಶಸ್ಸಿದೆ ಎಂದ ರಾಷ್ಟ್ರಪತಿ
  • ನೀರಾವರಿ ಯೋಜನೆಗಳಲ್ಲಿ ಸುಧಾರಣೆ ಮಾಡಲಾಗಿದೆ
  • ಸಂಕಷ್ಟ ಪರಿಸ್ಥಿತಿಯಲ್ಲಿ ಭಾರತ ಮಾನವೀಯತೆ ತೋರಿದೆ
  • ಆಯುಷ್ಮಾನ್​ ಯೋಜನೆಯಿಂದ ಬಡವರಿಗೆ ಸಹಾಯ ಮಾಡಲಾಗಿದೆ

11:15 January 29

ಭಾರತದಲ್ಲಿ ಕೋವಿಡ್​ ಪ್ರಕರಣಗಳು ಇಳಿ ಮುಖವಾಗುತ್ತಿವೆ: ರಾಷ್ಟ್ರಪತಿ

  • ಈ ಅಧಿವೇಶನ ಅತ್ಯಂತ ಮಹತ್ವಪೂರ್ಣವಾಗಿದೆ
  • ಭಾರತ ಅಸಾಧ್ಯವಾದದ್ದನ್ನು ಸಾಧ್ಯವಾಗಿ ಮಾಡಿದೆ
  • ಭಾರತ ಹೊಸ ಸಾಮರ್ಥ್ಯದೊಂದಿಗೆ ಕೆಲಸ ಮಾಡುತ್ತಿದೆ
  • 6 ರಾಜ್ಯಗಳಲ್ಲಿ ಗರೀಬ್​ ಕಲ್ಯಾಣ್ ರೋಜ್​ಗಾರ್​​ ಯೋಜನೆ
  • ಭಾರತದಲ್ಲಿ ಕೋವಿಡ್​ ಪ್ರಕರಣಗಳು ಇಳಿ ಮುಖವಾಗುತ್ತಿವೆ
  • ಕೇಂದ್ರ ಸರ್ಕಾರ ಎಲ್ಲ ವರ್ಗಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ ಎಂದು ರಾಷ್ಟ್ರಪತಿ ಕೋವಿಂದ್​ ಹೇಳಿದರು.

11:11 January 29

ಕೇಂದ್ರದ ಬೆನ್ನುತಟ್ಟಿದ ರಾಷ್ಟ್ರಪತಿ

ಸಂಸತ್‌ನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಮಾತನಾಡುತ್ತಿದ್ದಾರೆ. ಹೊಸ ವರ್ಷ, ಹೊಸ ದಶಕದ ಮೊದಲ ಅಧಿವೇಶನ ಇದಾಗಿದೆ ಎಂದು ರಾಮನಾಥ ಕೋವಿಂದ್​ ಹೇಳಿದರು. ಸಂಸತ್‌ನ ಈ ಅಧಿವೇಶನ ಅತ್ಯಂತ ಮಹತ್ವಪೂರ್ಣವಾಗಿದೆ. ಸವಾಲುಗಳನ್ನು ಎದುರಿಸಿ ಭಾರತ ಮುನ್ನಡೆಯುತ್ತಿದೆ. ಭಾರತ ಅಸಾಧ್ಯವಾದುದನ್ನೂ ಸಾಧ್ಯ ಮಾಡಿ ತೋರಿಸಿದೆ. ಎಲ್ಲ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ ಎಂದು ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಕೋವಿಂದ್​ ಸಮರ್ಥಿಸಿಕೊಂಡರು

11:08 January 29

ಮೃತಪಟ್ಟ ಗಣ್ಯರಿಗೆ ಸಂತಾಪ ಸೂಚಿಸುವ ಮೂಲಕ ಭಾಷಣ ಆರಂಭ

  • ಸಂಸತ್​ ಬಜೆಟ್​ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಭಾಷಣ
  • ಈ ದಶಕದ ಮೊದಲ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ
  • ಭಾಷಣ ಆರಂಭಿಸಿದ ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​
  • ಮೃತಪಟ್ಟ ಗಣ್ಯರಿಗೆ ಸಂತಾಪ ಸೂಚಿಸುವ ಮೂಲಕ ಭಾಷಣ ಆರಂಭ

11:01 January 29

ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸಂಸತ್ತಿಗೆ ಆಗಮಿಸಿದ್ದಾರೆ. ಬಜೆಟ್​ ಅಧಿವೇಶನ​ ಪ್ರಾರಂಭವಾಗುತ್ತಿದ್ದಂತೆ ರಾಷ್ಟ್ರಪತಿ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 

10:42 January 29

ಈ ದಶಕದ ಅಧಿವೇಶನ ಬಹಳ ಮುಖ್ಯ: ಪ್ರಧಾನಿ

  • Today commences the first Session of this decade. This decade is very important for the bright future of India. A golden opportunity has come before the nation to fulfill the dreams seen by the freedom fighters: Prime Minister Narendra Modi at the Parliament#BudgetSession pic.twitter.com/goO5zkxRHI

    — ANI (@ANI) January 29, 2021 " class="align-text-top noRightClick twitterSection" data=" ">

ಇಂದು ಈ ದಶಕದ ಮೊದಲ ಅಧಿವೇಶನವನ್ನು ಪ್ರಾರಂಭಿಸಲಾಗುತ್ತಿದೆ. ಭಾರತದ ಉಜ್ವಲ ಭವಿಷ್ಯಕ್ಕಾಗಿ ಈ ದಶಕದ ಅಧಿವೇಶನ ಬಹಳ ಮುಖ್ಯ. ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸುಗಳನ್ನು ಈಡೇರಿಸಲು ರಾಷ್ಟ್ರದ ಮುಂದೆ ಒಂದು ಸುವರ್ಣಾವಕಾಶ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಹೇಳಿದರು. 

10:16 January 29

ಸಂಸತ್​​ಗೆ ಬಿಗಿ ಭದ್ರತೆ

ಸಂಸತ್​ ಅಧಿವೇಶನದ ಹಿನ್ನೆಲೆಯಲ್ಲಿ ಪಾರ್ಲೆಮೆಂಟ್​​​​​​​ಗೆ ಭಾರಿ ಬಿಗಿ ಭದ್ರತೆ ನೀಡಲಾಗಿದೆ. 

09:37 January 29

ಜಂಟಿ ಅಧಿವೇಶನ ಆರಂಭ...

address budget session, President Ram Nath Kovind to address budget session, President Ram Nath Kovind, President Ram Nath Kovind news, ಬಜೆಟ್​​ ಕಲಾಪ, ಬಜೆಟ್​​ ಕಲಾಪ ಬಗ್ಗೆ ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಭಾಷಣ, ಜಂಟಿ ಅಧಿವೇಶನ ಉದ್ಧೇಶಿಸಿ ರಾಷ್ಟ್ರಪತಿ ಭಾಷಣ, ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​, ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಸುದ್ದಿ,
ರಾಷ್ಟ್ರಪತಿ ರಾಮನಾಥ್ ಕೋವಿಂದ್

ಇಂದಿನಿಂದ ಸಂಸತ್​ ಮುಂಗಡಪತ್ರದ ಅಧಿವೇಶನ ಆರಂಭವಾಗಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂಸತ್​ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೂ ಮುನ್ನ ಸ್ಪೀಕರ್​ ಓಂ ಬಿರ್ಲಾ ಸರ್ವ ಪಕ್ಷಗಳ ಸಭೆಯನ್ನು ಕರೆದಿದ್ದಾರೆ. 

Last Updated : Jan 29, 2021, 12:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.