ETV Bharat / bharat

ತ್ರಿವಳಿ ತಲಾಖ್​ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ: ತಲಾಖ್ ಅಂದವರು ಜೈಲಲ್ಲಿ ಲಾಕ್​!

author img

By

Published : Aug 1, 2019, 12:10 PM IST

ತ್ರಿವಳಿ ತಲಾಖ್ ಸಂಬಂಧಿತ ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ವಿಧೇಯಕ 2019ಕ್ಕೆ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರು ಅಂಕಿತ ಹಾಕಿದ್ದಾರೆ

President Ram Nath Kovind

ನವದೆಹಲಿ: ಭಾರಿ ಚರ್ಚೆ ಹುಟ್ಟುಹಾಕಿದ್ದ ತ್ರಿವಳಿ ತಲಾಖ್ ಸಂಬಂಧಿತ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರು ಅಂಕಿತ ಹಾಕಿದ್ದು, ಇನ್ನು ತಲಾಖೆ ಹೇಳಿದವರು ಜೈಲು ಸೇರಿದು ನಿಶ್ಚಿತವಾಗಿದೆ.

President Ram Nath Kovind
President Ram Nath Kovind

ಲೋಕಸಭೆ, ಆ ಬಳಿಕ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡ ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ವಿಧೇಯಕ 2019ಕ್ಕೆ ರಾಷ್ಟ್ರಪತಿಗಳು ಮುದ್ರೆ ಒತ್ತಿದ್ದಾರೆ. ಇದರಿಂದ ತಲಾಖ್ ಹೇಳುವ ಮೂಲಕ ವಿವಾಹ ಸಂಬಂಧ ಮುರಿದುಕೊಳ್ಳುವುದು ಕಾನೂನು ರೀತಿಯ ಅಪರಾಧವಾಗಿದ್ದು, ಆ ವ್ಯಕ್ತಿಗೆ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾದ ಬಳಿಕ ಟ್ವೀಟ್​ ಮಾಡಿದ್ದ ರಾಷ್ಟ್ರಪತಿಗಳು, ಈ ವಿಧೇಯಕ ಮೂಲಕ ತ್ರಿವಳಿ ತಲಾಖ್​​ನಂತ ಅಸಮಾನ ಚಟುವಟಿಕೆಗಳು ರದ್ದಾಗಲಿವೆ. ಲಿಂಗ ಸಮಾನತೆಗೆ ಇದು ಮೈಲಿಗಲ್ಲಾಗಿದೆ ಎಂದು ಹೊಗಳಿದ್ದರು.

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಸಕಷ್ಟು ಚರ್ಚೆ ನಡೆಸಿದರೂ, ಅಂತಿಮವಾಗಿ ವಿಧೇಯಕ ಜಾರಿಯಾಗಲು ಸಹಕರಿಸಿದವು. ಈ ಮೂಲಕ ತನ್ನ ಆದ್ಯತೆಯ ಕಾಯ್ದೆಯನ್ನು ಸರ್ವಾನುಮತದಿಂದ ಜಾರಿಗೊಳಿಸಿದ ಖುಷಿ ಎನ್​​ಡಿಎ ಸರ್ಕಾರದ್ದಾಗಿದೆ.

Intro:Body:

President Ram Nath Kovind 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.