ETV Bharat / bharat

ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ... ಭ್ರೂಣವನ್ನೇ ಹೊರತೆಗೆದ ಕಾಮುಕರು! - ದಲಿತ ಗರ್ಭಿಣಿ

ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ರಾಜಸ್ಥಾನದ ಉದಯಪುರ​​ದಲ್ಲಿ ನಡೆದಿದ್ದು, ಕುಡಿದ ಮತ್ತಿನಲ್ಲಿ ಈ ಕೃತ್ಯವೆಸಗಿರುವ ಕಾಮುಕರು, ಮಹಿಳೆಯ ಭ್ರೂಣವನ್ನೇ ಹೊರತೆಗೆದಿದ್ದಾಗಿ ತಿಳಿದು ಬಂದಿದೆ.

ಸಾದರ್ಭಿಕ ಚಿತ್ರ
author img

By

Published : Aug 13, 2019, 5:49 PM IST

ಜೈಪುರ್​​: ರಾಜಸ್ಥಾನದ ಉದಯಪುರ್​​ದಲ್ಲಿ ಗರ್ಭಿಣಿ ಮೇಲೆ ಕಾಮುಕರು ಅತ್ಯಾಚಾರವೆಸಗಿ ಭ್ರೂಣವನ್ನೇ ಹೊರತೆಗೆದು ಪರಾರಿಯಾಗಿದ್ದಾರೆ.

2016ರ ಡಿಸೆಂಬರ್​​​ ತಿಂಗಳಲ್ಲಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದ ನಿರ್ಭಯಾ ಗ್ಯಾಂಗ್​ರೇಪ್​ ರೀತಿಯಲ್ಲೇ ಈ ಘಟನೆ ನಡೆದಿದೆ. ಜುಲೈ 13ರಂದು ಮೋಟರ್​ಬೈಕ್​ ಮೇಲೆ ಗೆಳೆಯನೊಂದಿಗೆ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿರುವ ಮೂವರು ಕಾಮುಕರು ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್​ಗಳಿಂದ ಹೊಡೆದು ಪ್ರಜ್ಞೆ ತಪ್ಪಿಸಿದ್ದಾರೆ. ಆತನ ಬಳಿ ಇದ್ದ ಮೊಬೈಲ್​ ಕಿತ್ತುಕೊಂಡಿದ್ದಾರೆ. ನಂತರ ಮಹಿಳೆಯನ್ನ ಹತ್ತಿರದ ಬಸ್​ ಸ್ಯಾಂಡ್​ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅವರು, ಮತ್ತೊಂದು ಸ್ಥಳಕ್ಕೆ ಆಕೆಯನ್ನ ಕರೆದುಕೊಂಡು ಹೋಗಿ ಅಲ್ಲಿ ಮತ್ತಿಬ್ಬರಿಂದ ಅತ್ಯಾಚಾರ ಮಾಡಿಸಿದ್ದಾರೆ.

ಇನ್ನು ಪ್ರಜ್ಞೆ ತಪ್ಪಿದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ತನಿಖೆ ನಡೆಸಲು ಪೊಲೀಸರು ಮುಂದಾಗುತ್ತಿದ್ದಂತೆ ಆಕೆಯ ಮೇಲೆ ಅತ್ಯಾಚಾರ ನಡೆದ ಘಟನೆ ಸಹ ಬಹಿರಂಗವಾಗಿದೆ. ಇವರಿಬ್ಬರು ಮದುವೆಯಾಗದೇ ಜೀವನ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಮಹಿಳೆ ಮೇಲೆ ಅತ್ಯಾಚಾರವಾದಾಗ ಆಕೆ ಒಂದೂವರೆ ತಿಂಗಳ ಗರ್ಭಿಣಿ ಎಂಬುದು ವೈದ್ಯಕೀಯ ಪರೀಕ್ಷೆಯಿಂದ ಗೊತ್ತಾಗಿದೆ.

ಇನ್ನು ಘಟನೆಯಿಂದ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಜುಲೈ 13ರಂದು ರಾತ್ರಿ 10 ಗಂಟೆ ವೇಳೆ ಬನ್ಸವಾರ್​ ಪ್ರದೇಶದಿಂದ ತಮ್ಮ ಊರಿಗೆ ತೆರಳುತ್ತಿದ್ದರು.

Intro:Body:

ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ... ಭ್ರೂಣವನ್ನೇ ಹೊರತೆಗೆದ ಕಾಮುಕರು! 

ಜೈಪುರ್​​: ರಾಜಸ್ಥಾನದ ಉದಯಪುರ್​​ದಲ್ಲಿ ಅಮಾನವೀಯ ಕೃತ್ಯವೊಂದು ನಡೆದಿದ್ದು, ದಲಿತ ಗರ್ಭಿಣಿ ಮೇಲೆ ಕಾಮುಕರು ಅತ್ಯಾಚಾರವೆಸಗಿ ಭ್ರೂಣವನ್ನೇ ಹೊರತೆಗೆದು ಪರಾರಿಯಾಗಿದ್ದಾರೆ. 

2016ರ ಡಿಸೆಂಬರ್​​​ ತಿಂಗಳಲ್ಲಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದ ನಿರ್ಭಯಾ ಗ್ಯಾಂಗ್​ರೇಪ್​ ರೀತಿಯಲ್ಲೇ ಈ ಘಟನೆ ನಡೆದಿದ್ದು, ಇದೀಗ ನಡೆದಿರುವ ಘಟನೆ ಸಹ ಅದೇ ರೀತಿಯಾಗಿ ನಡೆದಿದೆ. ಜುಲೈ 13ರಂದು ಮೋಟರ್​ಬೈಕ್​ ಮೇಲೆ ಗೆಳೆಯನೊಂದಿಗೆ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿರುವ ಮೂವರು ಕಾಮುಕರು ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್​ಗಳಿಂದ ಹೊಡೆದು ಪ್ರಜ್ಞೆ ತಪ್ಪಿಸಿದ್ದಾರೆ. ಆತನ ಬಳಿ ಇದ್ದ ಮೊಬೈಲ್​ ಕಿತ್ತುಕೊಂಡಿದ್ದಾರೆ. ತದನಂತರ ಮಹಿಳೆಯನ್ನ ಹತ್ತಿರದ ಬಸ್​ ಸ್ಯಾಂಡ್​ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅವರು, ಮತ್ತೊಂದು ಸ್ಥಳಕ್ಕೆ ಆಕೆಯನ್ನ ಕರೆದುಕೊಂಡು ಹೋಗಿ ಅಲ್ಲಿ ಮತ್ತಿಬ್ಬರಿಂದ ಅತ್ಯಾಚಾರ ಮಾಡಿಸಿದ್ದಾರೆ. 

ಇನ್ನು ಪ್ರಜ್ಞೆ ತಪ್ಪಿದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದರ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲು ಪೊಲೀಸರು ಮುಂದಾಗುತ್ತಿದ್ದಂತೆ ಆಕೆಯ ಮೇಲೆ ಅತ್ಯಾಚಾರ ನಡೆದ ಘಟನೆ ಸಹ ಬಹಿರಂಗವಾಗಿದೆ. ಇವರಿಬ್ಬರು ಮದುವೆಯಾಗದೇ ಜೀವನ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಮಹಿಳೆ ಮೇಲೆ ಅತ್ಯಾಚಾರವಾದಾಗ ಆಕೆ ಒಂದೂವರೆ ತಿಂಗಳ ಗರ್ಭಿಣಿ ಎಂಬುದು ವೈದ್ಯಕೀಯ ಪರೀಕ್ಷೆಯಿಂದ ಗೊತ್ತಾಗಿದೆ. ಈಕೆಯ ಮೇಲೆ ಅತ್ಯಾಚಾರವೆಸಗಿರುವ ಕಾಮುಕರು ಕಂಠಪೂರ್ತಿ ಕುಡಿದು ಈ ಕೃತ್ಯವೆಸಗಿದ್ದಾರೆ. ಈ ಕೃತ್ಯದಿಂದಲೇ ಆಕೆಯ ಗೆಳೆಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.