ನವದೆಹಲಿ: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಸ್ವಲ್ಪ ಚೇತರಿಸಿಕೊಂಡಿದ್ದು, ಸ್ಥಿರವಾಗಿದೆ ಎಂದು ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಮಾಹಿತಿ ನೀಡಿದ್ದಾರೆ.
-
Yesterday , I had visited my Father In Hospital . With God's grace & all your good wishes , He is much better & stable than D preceeding days! All his vital parameters are stable & he is responding to treatment ! We firmly believe that He will be back among us soon
— Abhijit Mukherjee (@ABHIJIT_LS) August 16, 2020 " class="align-text-top noRightClick twitterSection" data="
Thank You🙏
">Yesterday , I had visited my Father In Hospital . With God's grace & all your good wishes , He is much better & stable than D preceeding days! All his vital parameters are stable & he is responding to treatment ! We firmly believe that He will be back among us soon
— Abhijit Mukherjee (@ABHIJIT_LS) August 16, 2020
Thank You🙏Yesterday , I had visited my Father In Hospital . With God's grace & all your good wishes , He is much better & stable than D preceeding days! All his vital parameters are stable & he is responding to treatment ! We firmly believe that He will be back among us soon
— Abhijit Mukherjee (@ABHIJIT_LS) August 16, 2020
Thank You🙏
ಆಗಸ್ಟ್ 10ರಂದು ಮೆದುಳಿನ ಸರ್ಜರಿಗೆ ಒಳಗಾಗಿದ್ದ ಪ್ರಣಬ್ ಮುಖರ್ಜಿ ಅವರ ಆರೋ್ಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ನಾನು ಆಸ್ಪತ್ರೆಗೆ ಭೇಟಿ ನೀಡಿದ್ದು, ಅವರ ಆರೋಗ್ಯ ಸ್ಥಿತಿಯಲ್ಲಿ ಅಲ್ಪ ಸುಧಾರಣೆ ಕಂಡಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅಭಿಜಿತ್ ಮಾಹಿತಿ ನೀಡಿದ್ದಾರೆ.
ಅವರು ಶೀಘ್ರವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಮರಳುತ್ತಾರೆ ಎಂದು ನಾವು ದೃಢವಾಗಿ ನಂಬಿದ್ದೇವೆ, ಧನ್ಯವಾದಗಳು ಎಂದು ಅಭಿಜಿತ್ ಮುಖರ್ಜಿ ಟ್ವೀಟ್ ಮಾಡಿದ್ದಾರೆ.
ಆಗಸ್ಟ್ 10ರಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕೊರೊನಾ ಸೋಂಕು ಕಂಡುಬಂದಿತ್ತು. ಇದರ ಬೆನ್ನಲ್ಲೇ ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೆಲವು ದಿನಗಳ ಹಿಂದೆ ಪ್ರಣಬ್ ಮುಖರ್ಜಿ ಅವರ ಸಾವಿನ ವದಂತಿಗಳು ಹರಿದಾಡಿದ ಕಾರಣದಿಂದ ಪ್ರಣಬ್ ಮುಖರ್ಜಿ ಅವರ ಕುಟುಂಬಸ್ಥರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.