ETV Bharat / bharat

ರಾಷ್ಟ್ರಪತಿಯಾಗಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದ್ದ ಮಹಾನ್​ ಚೇತನ ಪ್ರಣಬ್ ಮುಖರ್ಜಿ...

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ರಾಷ್ಟ್ರಪತಿಗಳಾದ ನಂತರ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದರು. ರಾಷ್ಟ್ರಪತಿ ಹುದ್ದೆ ಹಾಗೂ ರಾಷ್ಟ್ರಪತಿ ಭವನಕ್ಕೆ ಸಂಬಂಧಿಸಿದಂತೆ ಕೆಲ ಕ್ರಾಂತಿಕಾರಕ ಬದಲಾವಣೆಗಳನ್ನು ತಂದರು. ಅಂಥ ಕೆಲ ಪ್ರಮುಖ ಬದಲಾವಣೆಗಳ ಬಗ್ಗೆ ಒಂದು ಸಮಗ್ರ ಮಾಹಿತಿ ಇಲ್ಲಿದೆ.

author img

By

Published : Aug 31, 2020, 6:27 PM IST

Pranab Mukherjee as President
ರಾಷ್ಟ್ರಪತಿಯಾಗಿ ಪ್ರಣಬ್ ಮುಖರ್ಜಿ ಜಾರಿಗೆ ತಂದ ಸುಧಾರಣಾ ಕ್ರಮಗಳು

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು, ಭಾರತದ ಮುತ್ಸದ್ದಿ ರಾಜಕೀಯ ನಾಯಕ. ಅವರು ರಾಷ್ಟ್ರಪತಿಗಳಾದ ನಂತರ ಕೆಲ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದರು. ಆಡಂಬರದ ಜೀವನ, ಒಣ ಪ್ರತಿಷ್ಠೆ ಮುಂತಾದುವುಗಳನ್ನು ಇಷ್ಟಪಡದ ಮುಖರ್ಜಿ, ರಾಷ್ಟ್ರಪತಿ ಹುದ್ದೆ ಹಾಗೂ ರಾಷ್ಟ್ರಪತಿ ಭವನಕ್ಕೆ ಸಂಬಂಧಿಸಿದಂತೆ ಕ್ರಾಂತಿಕಾರಕ ಬದಲಾವಣೆಗಳನ್ನು ತಂದವರು.

ಪ್ರಣಬ್ ತಾವು ರಾಷ್ಟ್ರಪತಿಯಾಗಿ ಒಂದು ವರ್ಷ ಅಧಿಕಾರ ಪೂರೈಸಿದ ಸಂದರ್ಭದಲ್ಲಿ, ರಾಷ್ಟ್ರಪತಿ ಹುದ್ದೆಯ ಸಂಬೋಧನೆಯ ಕುರಿತು ಮಹತ್ವದ ಬದಲಾವಣೆ ಮಾಡಿದರು. ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿಗಳನ್ನು ಸಂಬೋಧಿಸುವಾಗ ಯಾವಾಗಲೂ ರಾಷ್ಟ್ರಪತಿಗಳ ಹೆಸರಿನ ಹಿಂದೆ 'ಘನತೆವೆತ್ತ' ಎಂಬ ಗೌರವವಾಚಕವನ್ನು ಬಳಸಲಾಗುತ್ತಿತ್ತು. ಆದರೆ ಪ್ರಣಬ್ ಮುಖರ್ಜಿಯವರು ಇನ್ನು ಮುಂದೆ ರಾಷ್ಟ್ರಪತಿಗಳಿಗೆ ಈ ರೀತಿ ಗೌರವಸೂಚಕ ವಿಶೇಷಣವನ್ನು ಬಳಸುವ ಅಗತ್ಯವಿಲ್ಲ ಎಂದು ಆದೇಶ ಹೊರಡಿಸಿದರು. ಮಾತ್ರವಲ್ಲದೇ ರಾಜ್ಯಗಳ ರಾಜ್ಯಪಾಲರು ಸಹ ಇದೇ ಕ್ರಮವನ್ನು ಅನುಸರಿಸುವಂತೆ ಉತ್ತೇಜಿಸಿದ್ದರು.

ರಾಷ್ಟ್ರಪತಿ ಭವನದ ಭೇಟಿಗೆ ಆಗಮಿಸುವ ಅತಿಥಿಗಳ ಶಿಷ್ಟಾಚಾರ ನಿಯಮಗಳು ಹಾಗೂ ಸುರಕ್ಷತಾ ನಿಯಮಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸರಳಗೊಳಿಸಿದರು. ಈ ಮೊದಲು ರಾಷ್ಟ್ರಪತಿಗಳಾಗಿದ್ದವರು ದೆಹಲಿಯಲ್ಲಿ ನಡೆಯುವ ಹಲವಾರು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು. ಹೀಗೆ ರಾಷ್ಟ್ರಪತಿಗಳು ಸಮಾರಂಭಕ್ಕೆ ಹೋಗುವಾಗ, ಹಲವು ಕಡೆ ಭದ್ರತಾ ನಿಯಮಗಳ ಜಾರಿಯಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದ ಪ್ರಣಬ್, ಆದಷ್ಟೂ ಕಾರ್ಯಕ್ರಮಗಳನ್ನು ರಾಷ್ಟ್ರಪತಿ ಭವನದೊಳಗಡೆಯೇ ಏರ್ಪಡಿಸುವಂತೆ ಮಾಡಿ, ಜನರಿಗೆ ತೊಂದರೆಯಾಗದಂತೆ ಕಾಳಜಿ ವಹಿಸಿದ್ದರು.

ಇನ್ನು ಪ್ರಮುಖವಾಗಿ ಪ್ರಣಬ್ ಮುಖರ್ಜಿ, ತಮ್ಮ ಅಧಿಕಾರಾವಧಿಯಲ್ಲಿ ಒಟ್ಟು 26 ಸುಗ್ರೀವಾಜ್ಞೆ ಅಥವಾ ಮರು ಸುಗ್ರೀವಾಜ್ಞೆಗಳಿಗೆ ಅನುಮೋದನೆ ನೀಡಿದರು. ಐದನೇ ವರ್ಷದಲ್ಲಿ 5 ಸುಗ್ರೀವಾಜ್ಞೆಗಳಿಗೆ ಅಂಕಿತ ಹಾಕಿದ್ದರು. ತಮ್ಮ ಬಳಿಗೆ ಬಂದ ಒಟ್ಟು ಕ್ಷಮಾಪಣಾ ಅರ್ಜಿಗಳ ಪೈಕಿ 4 ಅರ್ಜಿಗಳನ್ನು ಅಂಗೀಕಾರ ಮಾಡಿದ್ದರು ಹಾಗೂ ಇನ್ನುಳಿದ 30 ಅರ್ಜಿಗಳನ್ನು ತಿರಸ್ಕರಿಸಿದ್ದರು.

ಶಾಲಾ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ದೇಶದ ಪ್ರಪ್ರಥಮ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪ್ರಣಬ್ ಪಾತ್ರರಾಗಿದ್ದಾರೆ. ತಾವು 50 ವರ್ಷಗಳ ಹಿಂದೆ ಶಿಕ್ಷಕರಾಗಿದ್ದನ್ನು ಮರೆಯದ ಅವರು, ತಮ್ಮ ಅಧಿಕಾರದ ಕೊನೆಯ ಎರಡು ವರ್ಷ ರಾಷ್ಟ್ರಪತಿ ಭವನದೊಳಗಡೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಇತಿಹಾಸ, ರಾಜ್ಯಶಾಸ್ತ್ರ ಮತ್ತು ಕಾನೂನಿನಲ್ಲಿ ಸ್ನಾತಕೋತ್ತರ ಪದವೀಧರರಾದ ಪ್ರಣಬ್, ಪ್ರೆಸಿಡೆಂಟ್​ ಎಸ್ಟೇಟ್​ನಲ್ಲಿರುವ ರಾಜೇಂದ್ರ ಪ್ರಸಾದ್ ಸರ್ವೋದಯ ವಿದ್ಯಾಲಯದ 11 ಮತ್ತು 12 ನೇ ತರಗತಿಯ ಸುಮಾರು 80 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಿಸಿದರು.

ಜುಲೈ 1, 2014 ರಂದು ರಾಷ್ಟ್ರಪತಿ ಭವನದ ಟ್ವಿಟ್ಟರ್​ ಅಕೌಂಟ್​ ಪ್ರಥಮವಾಗಿ ಆರಂಭವಾಯಿತು. ರಾಷ್ಟ್ರಪತಿಗಳ ಚಟುವಟಿಕೆಗಳನ್ನು ನೇರವಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ಈ ಖಾತೆಯನ್ನು ಆರಂಭಿಸಲಾಯಿತು. ಖಾತೆ ಆರಂಭವಾದ 20 ದಿನಗಳಲ್ಲಿ ಇದಕ್ಕೆ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್​ಗಳು ಬಂದರು. ಪ್ರಣಬ್ ಅವರು ಹುದ್ದೆಯಿಂದ ನಿವೃತ್ತಿಯಾಗುವ ಸಮಯಕ್ಕೆ ಟ್ವಿಟ್ಟರ್ ಫಾಲೋವರ್ಸ್​ ಸಂಖ್ಯೆ 32 ಲಕ್ಷಕ್ಕೆ ಏರಿತ್ತು.

ಡೆಹ್ರಾಡೂನ್​ನಲ್ಲಿರುವ ರಾಷ್ಟ್ರಪತಿಗಳ ವಿಶ್ರಾಂತಿ ಭವನ 'ರಾಷ್ಟ್ರಪತಿ ಆಶಿಯಾನಾ' ಕಟ್ಟಡವು ತೀರಾ ದುಸ್ಥಿತಿಗೆ ತಲುಪಿತ್ತು. ಸಾಂಪ್ರದಾಯಿಕ ಮೌಲ್ಯ ಹೊಂದಿದ ಈ ಕಟ್ಟಡವನ್ನು ರಾಷ್ಟ್ರಪತಿ ಪ್ರಣಬ್ ಪುನರುಜ್ಜೀವನಗೊಳಿಸಿದರು. ಕಮಾಂಡೆಂಟ್ ಬಂಗಲೋ ಎಂದು ಕರೆಯಲಾಗುತ್ತಿದ್ದ ಆಶಿಯಾನಾ ಕಟ್ಟಡವು, ಸುಮಾರು 217 ಎಕರೆಯಷ್ಟು ವಿಶಾಲವಾದ ಜಾಗ ಹೊಂದಿತ್ತು. ಇದನ್ನು ಬ್ರಿಟಿಷ್ ಕಾಲದ ವೈಸ್​ರಾಯ್​ ಅವರ ಅಂಗರಕ್ಷಕರೊಬ್ಬರು, 1836 ರಲ್ಲಿ ಲೀಸ್​ಗೆ ಪಡೆದುಕೊಂಡಿದ್ದರು. ನಂತರ 1975 ರಲ್ಲಿ ಇದನ್ನು ರಾಷ್ಟ್ರಪತಿ ಆಶಿಯಾನಾ ಎಂದು ಸರ್ಕಾರ ನಿಯೋಜಿಸಿತ್ತು.

ರಾಷ್ಟ್ರಪತಿ ಭವನವನ್ನು ಭಾರತದ ಅತ್ಯಾಕರ್ಷಕ ಪ್ರವಾಸೋದ್ಯಮ ತಾಣವಾಗಿಸುವ ನಿಟ್ಟಿನಲ್ಲಿ ರಾಷ್ಟ್ರಪತಿ ಭವನ, ಮುಘಲ್ ಗಾರ್ಡನ್ ಮತ್ತು ರಾಷ್ಟ್ರಪತಿ ಭವನ ಮ್ಯೂಸಿಯಂ ಗಳನ್ನು ಪ್ರಣಬ್ ಮುಖರ್ಜಿ ಜುಲೈ 25, 2016 ರಂದು ಉದ್ಘಾಟಿಸಿದರು. ಪ್ರಣಬ್​ ಅವರ ಅಧಿಕಾರಾವಧಿಯ ಐದನೇ ವರ್ಷದಲ್ಲಿ 94 ಸಾವಿರಕ್ಕೂ ಅಧಿಕ ಪ್ರವಾಸಿಗರು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ್ದು ಗಮನಾರ್ಹ.

ರಾಷ್ಟ್ರಪತಿ ಭವನದಲ್ಲಿರುವ ಕ್ಯಾರೇಜ್ ಹಾಲ್ಸ್​ ಮತ್ತು ಸ್ಟೇಬಲ್ಸ್​ ಎಂಬ ಕಟ್ಟಡವನ್ನು ಹಿಂದಿನ ಕಾಲದಲ್ಲಿ ಕುದುರೆಗಳನ್ನು ಕಟ್ಟಲು ಹಾಗೂ ಸೇವಕರಿಗಾಗಿ ಉಪಯೋಗಿಸಲಾಗುತ್ತಿತ್ತು. ಈ ಕಟ್ಟಡವನ್ನು ಪಾರಂಪರಿಕ ಮ್ಯೂಸಿಯಂ ಆಗಿ ಬದಲಾಯಿಸಿದವರು ಪ್ರಣಬ್ ಮುಖರ್ಜಿ. 1911 ರ ದೆಹಲಿ ದರ್ಬಾರ್​ನಿಂದ ಹಿಡಿದು ರಾಜೇಂದ್ರ ಪ್ರಸಾದ್ ಅವರು ಭಾರತದ ಪ್ರಥಮ ರಾಷ್ಟ್ರಪತಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಘಟನಾವಳಿಗಳ ದೃಶ್ಯ, ಈ ಮ್ಯೂಸಿಯಂನಲ್ಲಿವೆ.

ಹಳೆಯ ಕಾಲದ ಕೆಲ ಅಪೂರ್ವ ಶಸ್ತ್ರಾಸ್ತ್ರಗಳು, ಸಾಂಪ್ರದಾಯಿಕ ಶೈಲಿಯ ಪೀಠೋಪಕರಣಗಳು, ರಾಷ್ಟ್ರಪತಿಗಳ ಅಂಗರಕ್ಷಕರ ವಸ್ತುಗಳು ಹಾಗೂ ವಿದೇಶಿ ಅತಿಥಿಗಳು ರಾಷ್ಟ್ರಪತಿಗಳಿಗೆ ನೀಡಿದ ಕಾಣಿಕೆಗಳು ಇಲ್ಲಿವೆ. ಮತ್ತೊಂದು ಕಡೆ 10 ಸಾವಿರ ಚದರ್​ ಮೀಟರ್ ಪ್ರದೇಶದಲ್ಲಿ ನೆಲಮಾಳಿಗೆಯಲ್ಲಿ ಇನ್ನೊಂದು ವಿಭಾಗವಿದ್ದು, ಇಲ್ಲಿ ಸಂಪೂರ್ಣ ರಾಷ್ಟ್ರಪತಿ ಭವನದ ವಿನ್ಯಾಸದ ಬಗ್ಗೆ ಕಥೆ ಹೇಳುವ ರೂಪದಲ್ಲಿ ನಿರ್ಮಾಣ ಮಾಡಲಾಗಿದೆ.

ಆಯ್ದ ಹಳ್ಳಿಗಳನ್ನು ಹೈಟೆಕ್​ ಹಾಗೂ ನೆಮ್ಮದಿಯ ಗ್ರಾಮಗಳನ್ನಾಗಿ ರೂಪಿಸುವ ದೂರದೃಷ್ಟಿಯಿಂದ ರಾಷ್ಟ್ರಪತಿ ಪ್ರಣಬ್, ಜುಲೈ 2, 2016 ರಂದು ಸ್ಮಾರ್ಟ್​ಗ್ರಾಮ ಎಂಬ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯಡಿ ಗುರುಗ್ರಾಮ ಹಾಗೂ ಮೇವಾತ್ ಜಿಲ್ಲೆಯ ಐದು ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.