ಪಣಜಿ: ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಅಂತ್ಯಕ್ರಿಯೆ ನೆರವೇರಿದ ದಿನ ತಡರಾತ್ರಿ 2 ಗಂಟೆಗೆ ಸಿಎಂ ಗಾದಿಗೇರಿದ ಪ್ರಮೋದ್ ಸಾವಂತ್ ಬಿಜೆಪಿ ವಯಲದಲ್ಲಿ ಮೃದು ಸ್ವಭಾವದ ವ್ಯಕ್ತಿ ಎಂದೇ ಗುರುತಿಸಿಕೊಂಡವರು.
ಸಂಕ್ವಿಲಿಂ ಕ್ಷೇತ್ರದಿಂದ ಆಯ್ಕೆಯಾದ ಸಾವಂತ್ ಅವರು ಹುಟ್ಟಿದ್ದು ಏಪ್ರಿಲ್ 24, 1973. 2012ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚೊಚ್ಚಲ ಬಾರಿ ಆಯ್ಕೆಯಾದ ಸಾವಂತ್ ಮೂಲತಃ ಆಯುರ್ವೇದಿಕ್ ವೈದ್ಯ. ಬಿಜೆಪಿಯ ಯುವ ಮೋರ್ಚಾದಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ದಿಢೀರ್ ಅವಕಾಶ ಒಲಿದುಬಂದು ಸಂಕ್ವಿಲಿನ್ ಕ್ಷೇತ್ರದಿಂದ ಆಯ್ಕೆಯಾದರು. ಎಲ್ಲ ಪಕ್ಷಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಸಾವಂತ್ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿತ್ತು.
ವೃತ್ತಿಯಲ್ಲಿ ರಾಸಾಯನಿಕ ಶಾಸ್ತ್ರ ಶಿಕ್ಷಕಿಯಾಗಿರುವ ಅವರ ಪತ್ನಿ ಸುಲಕ್ಷಣ ಅವರು ಸದ್ಯ ಬಿಜೆಪಿ ಮಹಿಳಾ ಮೋರ್ಚದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.