ನವದೆಹಲಿ: ಕಳೆದ ವರ್ಷವೇ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆ ಪಾಸ್ ಮಾಡಿ ಭಾರತೀಯ ಕಂದಾಯ ಇಲಾಖೆ(IRS) ಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರದೀಪ್ ಸಿಂಗ್, 2019ರಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆದು ಇದೀಗ ದೇಶಕ್ಕೆ ಮೊದಲ ಸ್ಥಾನದ ವಿಶೇಷ ಸಾಧನೆ ಮಾಡಿದ್ದಾರೆ.
ಇದನ್ನೂ ಒದಿ: UPSC ಸಾಧಕರನ್ನು ಅಭಿನಂದಿಸಿ, ಆಯ್ಕೆ ಆಗದವರಿಗೆ ಧೈರ್ಯ ತುಂಬಿದ ಪ್ರಧಾನಿ ಮೋದಿ
ರೈತನ ಮಗನಾಗಿರುವ ಪ್ರದೀಪ್ ಸಿಂಗ್ ಹುಟ್ಟಿ ಬೆಳೆದಿದ್ದು ಹರ್ಯಾಣದ ಸೋನಿಪತ್ನಲ್ಲಿ. ಇವರ ತಂದೆ ರೈತ. ಸ್ಥಳೀಯ ಹೈಸ್ಕೂಲ್ನಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಇವರು ಇಂಜಿನಿಯರಿಂಗ್ ಪದವೀಧರನೂ ಹೌದು.
ತನ್ನ ಸಾಧನೆಯ ಬಗ್ಗೆ ಪ್ರತಿಕ್ರಿಯಿಸುತ್ತಾ, ದೇಶ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ನಾಗರಿಕ ಸೇವೆಯ ಮೂಲಕ ತಮ್ಮ ಕೈಯಿಂದಾದ ಜನಸೇವೆ ಮಾಡಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.