ETV Bharat / bharat

ಓ ಸಿಖ್‌ ಸೋದರರೇ.. ಕಾಶ್ಮೀರಿಗರ ಹೃದಯದಲ್ಲಿ ನೀವೀಗ ಶಾಶ್ವತ ! - ಕಾಶ್ಮೀರಿಗಳ ಹೃದಯ

ಬದುಕುವ ಆಸೆಯನ್ನೇ ಬಿಟ್ಟಿದ್ದ ಕಾಶ್ಮೀರಿ ಮುಸ್ಲಿಮರಿಗೆ ದೇವರಂತೆ ಬಂದು ಕಾಪಾಡಿದ ಸಿಖ್ ಸಮುದಾಯ.

ಸಿಖ್ ಸಮುದಾಯ
author img

By

Published : Feb 24, 2019, 10:22 AM IST

ನವದೆಹಲಿ: ಸಿಖ್ ಸಮುದಾಯದ ದೇಶಭಕ್ತಿ ಪ್ರಶ್ನಾತೀತ. ಕ್ರಿಕೆಟ್‌ನಂತಹ ಕ್ರೀಡೆ, ರಾಜಕೀಯ ಹಾಗೂ ಸೈನ್ಯದಲ್ಲೂ ಸಿಖ್ಖರ್‌ ರಾಷ್ಟ್ರಭಕ್ತಿಗೆ ಮಾರುಹೋಗದವರಿಲ್ಲ. ಇದಷ್ಟೇ ಅಲ್ಲ, ಅವರಲ್ಲಿರುವ ಮಾನವೀಯತೆಯನ್ನ ಈಗ ಇಡೀ ಕಾಶ್ಮೀರದ ಜನ ಮುಕ್ತ ಮನಸ್ಸಿನಿಂದ ಶ್ಲಾಘಿಸುತ್ತಿದ್ದಾರೆ. ಸಿಖ್ಖರು ಕಾಶ್ಮೀರಿಗಳ ಹೃದಯದಲ್ಲಿ ಶಾಶ್ವತ ನೆಲೆಯೂರುವ ಮಾನವೀಯ ಮಹತ್ಕಾರ್ಯ ಮಾಡಿದ್ದಾರೆ.

ಬದುಕುತ್ತೀವೋ ಇಲ್ವೋ ಅನ್ನೋ ಭಯ. ಇರೋಕೆ ಜಾಗ, ತಿನ್ನೋಕೆ ಆಹಾರ ಇಲ್ಲ. ಎಲ್ಲರು ನೋಡುವ ದೃಷ್ಟಿಕೋನವೇ ಬೇರೆ. ಯಾವಾಗ ದಾಳಿಯಾಗುತ್ತೋ ಅನ್ನೋ ಭೀತಿಯಲ್ಲೇ ಇದ್ದರು ಅವರೆಲ್ಲ. ಮರಳಿ ತವರೂರು ಸೇರಿಕೊಳ್ಳೋಣವೆಂದರೂ ಆಗದೇ ನೆಲೆ ಕಳೆದುಕೊಂಡಿದ್ದರು. ಪುಲ್ವಾಮಾ ದಾಳಿಯಲ್ಲಿ 44ಕ್ಕೂ ಹೆಚ್ಚು ಸಿಆರ್‌ಪಿಎಫ್‌ ಯೋದರು ಹುತಾತ್ಮರಾದ ಮೇಲೆ ಕಾಶ್ಮೀರಿ ವಿದ್ಯಾರ್ಥಿಗಳು, ವ್ಯಾಪಾರಸ್ಥರು, ದುಡಿಯೋಕೆ ಬಂದ ಕಾರ್ಮಿಕರು ಅನುಭವಿಸಿದ ಯಾತನೆಯಿದೆ. ಇಡೀ ದೇಶದಲ್ಲೇ ಮುಸ್ಲಿ ಸಮುದಾಯದ ವಿರುದ್ಧವೇ ಕೆಲ ವಿಚ್ಛಿದ್ರಕಾರಿ ಶಕ್ತಿಗಳು ದ್ವೇಷ ಹರಡುತ್ತಿದ್ದವು. ಅಲ್ಲಲ್ಲಿ ದಾಳಿ ಕೂಡ ನಡೆದಿದ್ದವು. ಉತ್ತರಭಾರತದ ರಾಜ್ಯಗಳಲ್ಲಂತೂ ಇದು ಮಿತಿಮೀರಿತ್ತು. ಇಲ್ಲಿರೋದೇ ಬೇಡ ಅಂತ ಕಾಶ್ಮೀರಿ ಮುಸ್ಲಿಮರು ತವರಿಗೆ ಹೊರಟಿದ್ದರು. ಆದ್ರೇ, ಅದಕ್ಕೂ ಆಸ್ಪದ ಸಿಕ್ಕಿರಲಿಲ್ಲ. ಆಗ ನೆಲೆ ಕಳ್ಕೊಂಡು ಬದುಕುವ ಆಸೆಯನ್ನೇ ಬಿಟ್ಟಿದ್ದವರ ನೆರವಿಗೆ ಧಾವಿಸಿದ್ದೇ ಸಿಖ್‌ ಸಮುದಾಯ.

s
ಸಹಾಯದ ಚಿತ್ರ

ಒಂದು ವೇಳೆ ಸಿಖ್ ಸಮುದಾಯ ಇಲ್ಲದಿದ್ರೇ, ಕಾಶ್ಮೀರಿಗಳ ಕಥೆ ಬೇರೆಯಿತ್ತು. ಈಗ ನೂರಾರು ಸಾವಿರಾರು ಕಾಶ್ಮೀರಿಗಳು ಸುರಕ್ಷಿತವಾಗಿ ತಮ್ಮ ಕಣಿವೆ ರಾಜ್ಯದ ಊರುಗಳಿಗೆ ಬಂದು ತಲುಪಿದ್ದಾರೆಂದ್ರೇ, ಅದಕ್ಕೆ ಸಿಖ್ ಸಮುದಾಯದ ಪರಿಶ್ರಮ, ಶ್ರೇಷ್ಠ ಮಾನವೀಯತೆಯೇ ಕಾರಣ.

ಪುಲ್ವಾಮಾ ದಾಳಿ ಬಳಿಕ ಕಾಶ್ಮೀರದ ಮುಸ್ಲಿಮರ ವಿರುದ್ಧ ಉದ್ರಿಕ್ತ ಗುಂಪುಗಳು ದಂಗೆ ನೆನಪಿಸುವ ರೀತಿ ವರ್ತಿಸಿದ್ದವು. ಇದರಿಂದ ತಪ್ಪಿಸಿಕೊಳ್ಳಲು ಹೋಟೆಲ್‌ಗಳ ಮೊರೆ ಹೋಗೋಕೂ ಆಗದ ಸ್ಥಿತಿ. ಆಗ್ರಾದ ಹೋಟೆಲ್‌ವೊಂದರಲ್ಲಿ ನೋಟಿಸ್‌ವೊಂದನ್ನ ನೇತು ಹಾಕಲಾಗಿತ್ತು. 'ಕಾಶ್ಮೀರಿಗಳಿಗೆ ಇಲ್ಲಿ ತಂಗಲು ಅವಕಾಶವಿಲ್ಲ. ನಾವೆಲ್ಲ ಭಾರತೀಯರು, ವೀರಪುತ್ರರಿಗೆ ಶ್ರದ್ಧಾಂಜಲಿ' ಅಂತ ಅದರಲ್ಲಿ ಬರೆಯಲಾಗಿತ್ತು. ಇದನ್ನ ನೋಡಿದ್ರೇ ಕಾಶ್ಮೀರಿಗಳು ಮರಳಿ ಹೋಗೋದಾದ್ರೂ ಹೇಗೆ, ಅಸಲಿಗೆ ಬದುಕೋದಕ್ಕೂ ಸಾಧ್ಯವಿಲ್ಲವೇನೋ ಅನ್ನೋ ಭಯ ಕಾಡ್ತಾಯಿತ್ತು. ಉತ್ತರಭಾರತದಾದ್ಯಂತ ಕಾಶ್ಮೀರಿಗಳ ವಿರುದ್ಧ ಹಿಂಸಾಚಾರ ನಡೆಯುವಾಗಲೇ ಸಹಾಯಕ್ಕೆ ಸಿಖ್‌ ಸಮುದಾಯ ರಸ್ತೆಗಿಳಿಯಿತು.

sikh
ಸಿಖ್ ಸಮುದಾಯ

ಅಂತಾರಾಷ್ಟ್ರೀಯ ಮಾನವತಾವಾದಿಗಳ ಸಂಘಟನೆ 'ಖಾಲ್ಸಾ ಏಡ್‌' ಸಹಾಯಕರು, ಗುರುದ್ವಾರದ ಸ್ಥಳೀಯರು ಜತೆಗೆ ಸಿಖ್‌ ಸಮುದಾಯವೇ ಕಾಶ್ಮೀರಿಗಳ ಜೀವ ರಕ್ಷಣೆಗೆ ಮುಂದಾದರು. ವೈದ್ಯಕೀಯ ಚಿಕಿತ್ಸೆ ಕೊಡಿಸಿದರು, ತಿನ್ನೋದಕ್ಕೆ ಆಹಾರ ಕೊಟ್ಟರು, ತಾತ್ಕಾಲಿಕ ತಂಗಲು ವ್ಯವಸ್ಥೆ ಕಲ್ಪಿಸಿದರು. ಕಾಲೇಜು, ವಿಶ್ವವಿದ್ಯಾಲಯ ಸೇರಿದಂತೆ ಕಾಶ್ಮೀರಿಗಳು ಇದ್ದ ಜಾಗದಲ್ಲಿ ಸಿಖ್‌ ಸಮುದಾಯ ಉದ್ರಿಕ್ತ ಗುಂಪುಗಳು ದಾಳಿ ನಡೆಸದಂತೆ ಭದ್ರತೆ ನೀಡಿದರು. ರಾತ್ರಿಯೆಲ್ಲ ಕಾಶ್ಮೀರಿಗಳನ್ನ ನಿದ್ದೆ ಬಿಟ್ಟು ಕಾಯ್ದರು. ತಾವೇ ಹಣ ಕೊಟ್ಟರು, ವಾಹನ ನೀಡಿದರು ಜತೆಗೆ ಕಾಶ್ಮೀರಕ್ಕೆ ವಾಪಸ್‌ ತೆರಳಲು ನೆಲೆ ಕಳೆದುಕೊಂಡಿದ್ದ ಸಾವಿರಾರು ಮುಸ್ಲಿಮರಿಗೆ ಪ್ರಯಾಣದ ವ್ಯವಸ್ಥೆ ಕಲ್ಪಿಸಿದರು. ಒಂದ್ಕಡೆ ದೇಶದ ಗೌರವ ಹೆಚ್ಚಿಸಿದ್ದರು. ಮಾನವೀಯತೆ ಇನ್ನೂ ಸತ್ತಿಲ್ಲ ಬದುಕಿಸಿದೆ ಅಂತ ತೋರಿಸಿದ್ದರು. ಧರ್ಮಕ್ಕಿಂತ ಮನುಷ್ಯತ್ವ, ಸೋದರತೆಯ ಪ್ರೀತಿಯನ್ನ ತೋರಿಸಿದ ಇಡೀ ಸಿಖ್‌ ಸಮುದಾಯಕ್ಕೆ ಈಗ ದೇಶದಲ್ಲಷ್ಟೇ ಅಲ್ಲ, ಇಡೀ ವಿಶ್ವದಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಸಿಖ್ಖರ ಈ ಔದಾರ್ಯ ಗುಣದ ಕುರಿತಂತೆ ಕಾರ್ಟೂನ್‌ಗಳೂ ಹರಿದಾಡ್ತಿವೆ. ತೇಲುವ ಹಡಗಿನಲ್ಲಿರುವ ಸಿಖ್‌ ಸಿಂಗ್‌ವೊಬ್ಬರು ನೀರಲ್ಲಿ ಮುಳುಗುತ್ತಿದ್ದ ಮುಸ್ಲಿಂ ಯುವಕವನನ್ನ ರಕ್ಷಿಸುತ್ತಿರುವ ಕಾರ್ಟೂನ್‌, ಟ್ವಿಟರ್‌ನಲ್ಲಿ ಎಲ್ಲರ ಮನಕಲುಕಿದೆ. ಇದಕ್ಕೆ ಸಾಕಷ್ಟು ಹಿಟ್‌ ಬಂದಿವೆ. ಕಾಶ್ಮೀರಿ ಕಾರ್ಟೂನಿಸ್ಟ್‌ ಸುಹೈಲ್‌ ನಖಾಷ್‌ಬಂಡಿ, ಇದನ್ನ ಚಿತ್ರಿಸಿದ್ದು, 'ಸರ್ದಾರ್‌ ಅಂದ್ರೇ ದೇಶಕ್ಕೇ ನಾಯಕ, ಅದಕ್ಕೆ ಸಾಕ್ಷಿಯೇ ಇಲ್ಲಿರೋ ಈ ಚಿತ್ರ, ಎಲ್ಲ ಕಡೆಗೂ ನೀವು ಮಾಡುವ ಸಹಾಯಕ್ಕೆ ಹ್ಯಾಟ್ಸ್ಆಫ್‌' ಅಂತ ತಮ್ಮದೇ ಕಾರ್ಟೂನ್‌ ಜತೆಗೆ ಬರೆದುಕೊಂಡಿದ್ದು ಅದನ್ನ ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ದೇಶದ ಸಹೋದರತ್ವ ಸಾರಿದ ಸಿಖ್ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದ ಕಾರ್ಟೂನಿಸ್ಟ್‌ ಸುಹೈಲ್‌ರ ಈ ಟ್ವೀಟ್‌ನ ಸಾವಿರಾರು ಜನ ಶೇರ್‌ ಮಾಡಿದ್ದಾರೆ. ಇದೇ ಕಾರ್ಟೂನ್‌ ಬಳಸಿ ಸೋಷಿಯಲ್‌ ಮೀಡಿಯಾದಲ್ಲಿ ಕಾಶ್ಮೀರದ ಗಣ್ಯ ರಾಜಕಾರಣಿಗಳೂ ಸೇರಿ ಸಾವಿರಾರು ಮುಸ್ಲಿಮರೂ ಸಿಖ್‌ ಸಮುದಾಯದ ಈ ಮಾನವೀಯತೆಗೆ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.

undefined
shikh
ಸಿಖ್ ಸಮುದಾಯ

ಆ ಗಲಭೆಯಿಂದ ತಾವು ಹೇಗೆ ಜೀವ ಉಳಿಸಿಕೊಳ್ಳೋದಕ್ಕೆ ಸಿಖ್ಖ ಸೋದರರು ಕಾರಣವಾದರು ಅನ್ನೋದನ್ನ ಬದುಳಿದ ಬಂದ ಮುಸ್ಲಿಮ ಸಹೋದರರು ತಮ್ಮ ಅನುಭವಗಳ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಿಖ್ ಸಮುದಾಯ ವಿವಿ, ಕಾಲೇಜುಗಳ ಹೊರಗೆ ನಿಂತು ಉದ್ರಿಕ್ತರು ಒಳ ಪ್ರವೇಶಿಸದಂತೆ ತಡೆದು ರಾತ್ರಿಯೆಲ್ಲ ಕಾವಲು ಕಾಯ್ದರು. ತಮ್ಮನ್ನ ದೇವರಂತೆ ಬಂದು ರಕ್ಷಿಸಿದರು. ಅವರ ಮಾನವೀಯತೆಯ ನಡೆಗೆ ಮಾತೇ ಬರುತ್ತಿಲ್ಲ. ಸಿಖ್‌ ಸಮುದಾಯದ ಮೇಲಿನ ಪ್ರೀತಿ-ಗೌರವ ಮತ್ತಷ್ಟು ಹೆಚ್ಚಿತು. ಮಾನವೀಯತೆ ಇನ್ನೂ ಜೀವಂತ ಇದೆ ಎಂದೆನೆಸಿತು, ಸಿಖ್‌ ಸಮುದಾಯಕ್ಕೆ ನಮ್ಮ ಹೃದಯದಲ್ಲಿ ಶಾಶ್ವತ ನೆಲೆ ಅಂತ ಬದುಕುಳಿದ ಸಾವಿರಾರು ಕಾಶ್ಮೀರಿಗಳು ಸಿಖ್ಖರನ್ನ ಸ್ಮರಿಸುತ್ತಿದ್ದಾರೆ. ಅವರುಗಳ ಔದಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ಜಮ್ಮು-ಕಾಶ್ಮೀರದ ಮಾಜಿ ಸಿಎಂಗಳಾದ ಮೆಹಬೂಬಾ ಮುಫ್ತಿ ಹಾಗೂ ಒಮರ್‌ ಅಬ್ದುಲ್ಲಾ ಕೂಡ ಅದೇ ಕಾರ್ಟೂನ್‌ ಬಳಸಿ ಟ್ವೀಟ್‌ ಮಾಡಿದ್ದಾರೆ. 'ಖಾಲ್ಸಾ ಏಡ್‌' ಹಾಗೂ ಸಿಖ್‌ ಸಮುದಾಯದ ಮಾನವೀಯತೆಯನ್ನ ಈ ಉಭಯ ನಾಯಕರೂ ಕೊಂಡಾಡಿದ್ದಾರೆ. ಖಾಲ್ಸಾ ಏಡ್‌ ಸಿಇಒ ರವೀಂದ್ರ್ ಸಿಂಗ್‌, ನ್ಯಾಷನಲ್‌ ಕಾನ್ಫರೆನ್ಸ್‌ನ ಮಾಜಿ ಸಿಎಂ ಕೃತಜ್ಞತೆಗೆ ಪ್ರತಿ ಹೇಳಿಕೆ ನೀಡಿ, ಇದೆಲ್ಲ ಕೃತಜ್ಞೆ ಪಂಜಾಬ್‌ ಸಿಎಂ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಹಾಗೂ ಗುರುದ್ವಾರದ ಸಿಖ್‌ ಸಮುದಾಯಕ್ಕೆ ಸಲ್ಲಬೇಕು ಅಂತಾನೂ ಹೇಳಿದ್ದಾರೆ.

Intro:Body:

Kashmiris Wholeheartedly Thank Sikh Community For Helping Them During Post Pulwama Violence

ಬದುಕೋ ಆಸೆ ಬಿಟ್ಟಿದ್ದ ಕಾಶ್ಮೀರಿ ಮುಸ್ಲಿಮರಿಗೆ ಸಿಖ್‌ ಅಭಯ

ಓ ಸಿಖ್‌ ಸೋದರರೇ.. ಕಾಶ್ಮೀರಿಗರ ಹೃದಯದಲ್ಲಿ ನೀವೀಗ ಶಾಶ್ವತ !

ನವದೆಹಲಿ:

ಸಿಖ್ ಸಮುದಾಯದ ದೇಶಭಕ್ತಿ ಪ್ರಶ್ನಾತೀತ. ಕ್ರಿಕೆಟ್‌ನಂತಹ ಕ್ರೀಡೆ, ರಾಜಕೀಯ ಹಾಗೂ ಸೈನ್ಯದಲ್ಲೂ ಸಿಖ್ಖರ್‌ ರಾಷ್ಟ್ರಭಕ್ತಿಗೆ ಮಾರುಹೋಗದವರಿಲ್ಲ. ಇದಷ್ಟೇ ಅಲ್ಲ, ಅವರಲ್ಲಿರುವ ಮಾನವೀಯತೆಯನ್ನ ಈಗ ಇಡೀ ಕಾಶ್ಮೀರದ ಜನ ಮುಕ್ತ ಮನಸ್ಸಿನಿಂದ ಶ್ಲಾಘಿಸುತ್ತಿದ್ದಾರೆ. ಸಿಖ್ಖರು ಕಾಶ್ಮೀರಿಗಳ ಹೃದಯದಲ್ಲಿ ಶಾಶ್ವತ ನೆಲೆಯೂರುವ ಮಾನವೀಯ ಮಹತ್ಕಾರ್ಯ ಮಾಡಿದ್ದಾರೆ.

ಬದುಕುತ್ತೀವೋ ಇಲ್ವೋ ಅನ್ನೋ ಭಯ. ಇರೋಕೆ ಜಾಗ, ತಿನ್ನೋಕೆ ಆಹಾರ ಇಲ್ಲ. ಎಲ್ಲರು ನೋಡುವ ದೃಷ್ಟಿಕೋನವೇ ಬೇರೆ. ಯಾವಾಗ ದಾಳಿಯಾಗುತ್ತೋ ಅನ್ನೋ ಭೀತಿಯಲ್ಲೇ ಇದ್ದರು ಅವರೆಲ್ಲ. ಮರಳಿ ತವರೂರು ಸೇರಿಕೊಳ್ಳೋಣವೆಂದರೂ ಆಗದೇ ನೆಲೆ ಕಳೆದುಕೊಂಡಿದ್ದರು. ಪುಲ್ವಾಮಾ ದಾಳಿಯಲ್ಲಿ 44ಕ್ಕೂ ಹೆಚ್ಚು ಸಿಆರ್‌ಪಿಎಫ್‌ ಯೋದರು ಹುತಾತ್ಮರಾದ ಮೇಲೆ ಕಾಶ್ಮೀರಿ ವಿದ್ಯಾರ್ಥಿಗಳು, ವ್ಯಾಪಾರಸ್ಥರು, ದುಡಿಯೋಕೆ ಬಂದ ಕಾರ್ಮಿಕರು ಅನುಭವಿಸಿದ ಯಾತನೆಯಿದೆ. ಇಡೀ ದೇಶದಲ್ಲೇ ಮುಸ್ಲಿ ಸಮುದಾಯದ ವಿರುದ್ಧವೇ ಕೆಲ ವಿಚ್ಛಿದ್ರಕಾರಿ ಶಕ್ತಿಗಳು ದ್ವೇಷ ಹರಡುತ್ತಿದ್ದವು. ಅಲ್ಲಲ್ಲಿ ದಾಳಿ ಕೂಡ ನಡೆದಿದ್ದವು. ಉತ್ತರಭಾರತದ ರಾಜ್ಯಗಳಲ್ಲಂತೂ ಇದು ಮಿತಿಮೀರಿತ್ತು. ಇಲ್ಲಿರೋದೇ ಬೇಡ ಅಂತ ಕಾಶ್ಮೀರಿ ಮುಸ್ಲಿಮರು ತವರಿಗೆ ಹೊರಟಿದ್ದರು. ಆದ್ರೇ, ಅದಕ್ಕೂ ಆಸ್ಪದ ಸಿಕ್ಕಿರಲಿಲ್ಲ. ಆಗ ನೆಲೆ ಕಳ್ಕೊಂಡು ಬದುಕುವ ಆಸೆಯನ್ನೇ ಬಿಟ್ಟಿದ್ದವರ ನೆರವಿಗೆ ಧಾವಿಸಿದ್ದೇ ಸಿಖ್‌ ಸಮುದಾಯ.

ಒಂದು ವೇಳೆ ಸಿಖ್ ಸಮುದಾಯ ಇಲ್ಲದಿದ್ರೇ, ಕಾಶ್ಮೀರಿಗಳ ಕಥೆ ಬೇರೆಯಿತ್ತು. ಈಗ ನೂರಾರು ಸಾವಿರಾರು ಕಾಶ್ಮೀರಿಗಳು ಸುರಕ್ಷಿತವಾಗಿ ತಮ್ಮ ಕಣಿವೆ ರಾಜ್ಯದ ಊರುಗಳಿಗೆ ಬಂದು ತಲುಪಿದ್ದಾರೆಂದ್ರೇ, ಅದಕ್ಕೆ ಸಿಖ್ ಸಮುದಾಯದ ಪರಿಶ್ರಮ, ಶ್ರೇಷ್ಠ ಮಾನವೀಯತೆಯೇ ಕಾರಣ. 

ಪುಲ್ವಾಮಾ ದಾಳಿ ಬಳಿಕ ಕಾಶ್ಮೀರದ ಮುಸ್ಲಿಮರ ವಿರುದ್ಧ ಉದ್ರಿಕ್ತ ಗುಂಪುಗಳು ದಂಗೆ ನೆನಪಿಸುವ ರೀತಿ ವರ್ತಿಸಿದ್ದವು. ಇದರಿಂದ ತಪ್ಪಿಸಿಕೊಳ್ಳಲು ಹೋಟೆಲ್‌ಗಳ ಮೊರೆ ಹೋಗೋಕೂ ಆಗದ ಸ್ಥಿತಿ. ಆಗ್ರಾದ ಹೋಟೆಲ್‌ವೊಂದರಲ್ಲಿ ನೋಟಿಸ್‌ವೊಂದನ್ನ ನೇತು ಹಾಕಲಾಗಿತ್ತು. 'ಕಾಶ್ಮೀರಿಗಳಿಗೆ ಇಲ್ಲಿ ತಂಗಲು ಅವಕಾಶವಿಲ್ಲ. ನಾವೆಲ್ಲ ಭಾರತೀಯರು, ವೀರಪುತ್ರರಿಗೆ ಶ್ರದ್ಧಾಂಜಲಿ' ಅಂತ ಅದರಲ್ಲಿ ಬರೆಯಲಾಗಿತ್ತು. ಇದನ್ನ ನೋಡಿದ್ರೇ ಕಾಶ್ಮೀರಿಗಳು ಮರಳಿ ಹೋಗೋದಾದ್ರೂ ಹೇಗೆ, ಅಸಲಿಗೆ ಬದುಕೋದಕ್ಕೂ ಸಾಧ್ಯವಿಲ್ಲವೇನೋ ಅನ್ನೋ ಭಯ ಕಾಡ್ತಾಯಿತ್ತು. ಉತ್ತರಭಾರತದಾದ್ಯಂತ ಕಾಶ್ಮೀರಿಗಳ ವಿರುದ್ಧ ಹಿಂಸಾಚಾರ ನಡೆಯುವಾಗಲೇ ಸಹಾಯಕ್ಕೆ ಸಿಖ್‌ ಸಮುದಾಯ ರಸ್ತೆಗಿಳಿಯಿತು.

ಅಂತಾರಾಷ್ಟ್ರೀಯ ಮಾನವತಾವಾದಿಗಳ ಸಂಘಟನೆ 'ಖಾಲ್ಸಾ ಏಡ್‌' ಸಹಾಯಕರು, ಗುರುದ್ವಾರದ ಸ್ಥಳೀಯರು ಜತೆಗೆ ಸಿಖ್‌ ಸಮುದಾಯವೇ ಕಾಶ್ಮೀರಿಗಳ ಜೀವ ರಕ್ಷಣೆಗೆ ಮುಂದಾದರು. ವೈದ್ಯಕೀಯ ಚಿಕಿತ್ಸೆ ಕೊಡಿಸಿದರು, ತಿನ್ನೋದಕ್ಕೆ ಆಹಾರ ಕೊಟ್ಟರು, ತಾತ್ಕಾಲಿಕ ತಂಗಲು ವ್ಯವಸ್ಥೆ ಕಲ್ಪಿಸಿದರು. ಕಾಲೇಜು, ವಿಶ್ವವಿದ್ಯಾಲಯ ಸೇರಿದಂತೆ ಕಾಶ್ಮೀರಿಗಳು ಇದ್ದ ಜಾಗದಲ್ಲಿ ಸಿಖ್‌ ಸಮುದಾಯ ಉದ್ರಿಕ್ತ ಗುಂಪುಗಳು ದಾಳಿ ನಡೆಸದಂತೆ ಭದ್ರತೆ ನೀಡಿದರು. ರಾತ್ರಿಯೆಲ್ಲ ಕಾಶ್ಮೀರಿಗಳನ್ನ ನಿದ್ದೆ ಬಿಟ್ಟು ಕಾಯ್ದರು. ತಾವೇ ಹಣ ಕೊಟ್ಟರು, ವಾಹನ ನೀಡಿದರು ಜತೆಗೆ ಕಾಶ್ಮೀರಕ್ಕೆ ವಾಪಸ್‌ ತೆರಳಲು ನೆಲೆ ಕಳೆದುಕೊಂಡಿದ್ದ ಸಾವಿರಾರು ಮುಸ್ಲಿಮರಿಗೆ ಪ್ರಯಾಣದ ವ್ಯವಸ್ಥೆ ಕಲ್ಪಿಸಿದರು. ಒಂದ್ಕಡೆ ದೇಶದ ಗೌರವ ಹೆಚ್ಚಿಸಿದ್ದರು. ಮಾನವೀಯತೆ ಇನ್ನೂ ಸತ್ತಿಲ್ಲ ಬದುಕಿಸಿದೆ ಅಂತ ತೋರಿಸಿದ್ದರು. ಧರ್ಮಕ್ಕಿಂತ ಮನುಷ್ಯತ್ವ, ಸೋದರತೆಯ ಪ್ರೀತಿಯನ್ನ ತೋರಿಸಿದ ಇಡೀ ಸಿಖ್‌ ಸಮುದಾಯಕ್ಕೆ ಈಗ ದೇಶದಲ್ಲಷ್ಟೇ ಅಲ್ಲ, ಇಡೀ ವಿಶ್ವದಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಸಿಖ್ಖರ ಈ ಔದಾರ್ಯ ಗುಣದ ಕುರಿತಂತೆ ಕಾರ್ಟೂನ್‌ಗಳೂ ಹರಿದಾಡ್ತಿವೆ. ತೇಲುವ ಹಡಗಿನಲ್ಲಿರುವ ಸಿಖ್‌ ಸಿಂಗ್‌ವೊಬ್ಬರು ನೀರಲ್ಲಿ ಮುಳುಗುತ್ತಿದ್ದ ಮುಸ್ಲಿಂ ಯುವಕವನನ್ನ ರಕ್ಷಿಸುತ್ತಿರುವ ಕಾರ್ಟೂನ್‌, ಟ್ವಿಟರ್‌ನಲ್ಲಿ ಎಲ್ಲರ ಮನಕಲುಕಿದೆ. ಇದಕ್ಕೆ ಸಾಕಷ್ಟು ಹಿಟ್‌ ಬಂದಿವೆ. ಕಾಶ್ಮೀರಿ ಕಾರ್ಟೂನಿಸ್ಟ್‌ ಸುಹೈಲ್‌ ನಖಾಷ್‌ಬಂಡಿ, ಇದನ್ನ ಚಿತ್ರಿಸಿದ್ದು, 'ಸರ್ದಾರ್‌ ಅಂದ್ರೇ ದೇಶಕ್ಕೇ ನಾಯಕ, ಅದಕ್ಕೆ ಸಾಕ್ಷಿಯೇ ಇಲ್ಲಿರೋ ಈ ಚಿತ್ರ, ಎಲ್ಲ ಕಡೆಗೂ ನೀವು ಮಾಡುವ ಸಹಾಯಕ್ಕೆ ಹ್ಯಾಟ್ಸ್ಆಫ್‌' ಅಂತ ತಮ್ಮದೇ ಕಾರ್ಟೂನ್‌ ಜತೆಗೆ ಬರೆದುಕೊಂಡಿದ್ದು ಅದನ್ನ ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ದೇಶದ ಸಹೋದರತ್ವ ಸಾರಿದ ಸಿಖ್ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದ ಕಾರ್ಟೂನಿಸ್ಟ್‌ ಸುಹೈಲ್‌ರ ಈ ಟ್ವೀಟ್‌ನ ಸಾವಿರಾರು ಜನ ಶೇರ್‌ ಮಾಡಿದ್ದಾರೆ. ಇದೇ ಕಾರ್ಟೂನ್‌ ಬಳಸಿ ಸೋಷಿಯಲ್‌ ಮೀಡಿಯಾದಲ್ಲಿ ಕಾಶ್ಮೀರದ ಗಣ್ಯ ರಾಜಕಾರಣಿಗಳೂ ಸೇರಿ ಸಾವಿರಾರು ಮುಸ್ಲಿಮರೂ ಸಿಖ್‌ ಸಮುದಾಯದ ಈ ಮಾನವೀಯತೆಗೆ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.

ಆ ಗಲಭೆಯಿಂದ ತಾವು ಹೇಗೆ ಜೀವ ಉಳಿಸಿಕೊಳ್ಳೋದಕ್ಕೆ ಸಿಖ್ಖ ಸೋದರರು ಕಾರಣವಾದರು ಅನ್ನೋದನ್ನ ಬದುಳಿದ ಬಂದ ಮುಸ್ಲಿಮ ಸಹೋದರರು ತಮ್ಮ ಅನುಭವಗಳ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಿಖ್ ಸಮುದಾಯ ವಿವಿ, ಕಾಲೇಜುಗಳ ಹೊರಗೆ ನಿಂತು ಉದ್ರಿಕ್ತರು ಒಳ ಪ್ರವೇಶಿಸದಂತೆ ತಡೆದು ರಾತ್ರಿಯೆಲ್ಲ ಕಾವಲು ಕಾಯ್ದರು. ತಮ್ಮನ್ನ ದೇವರಂತೆ ಬಂದು ರಕ್ಷಿಸಿದರು. ಅವರ ಮಾನವೀಯತೆಯ ನಡೆಗೆ ಮಾತೇ ಬರುತ್ತಿಲ್ಲ. ಸಿಖ್‌ ಸಮುದಾಯದ ಮೇಲಿನ ಪ್ರೀತಿ-ಗೌರವ ಮತ್ತಷ್ಟು ಹೆಚ್ಚಿತು.  ಮಾನವೀಯತೆ ಇನ್ನೂ ಜೀವಂತ ಇದೆ ಎಂದೆನೆಸಿತು, ಸಿಖ್‌ ಸಮುದಾಯಕ್ಕೆ ನಮ್ಮ ಹೃದಯದಲ್ಲಿ ಶಾಶ್ವತ ನೆಲೆ ಅಂತ ಬದುಕುಳಿದ ಸಾವಿರಾರು ಕಾಶ್ಮೀರಿಗಳು ಸಿಖ್ಖರನ್ನ ಸ್ಮರಿಸುತ್ತಿದ್ದಾರೆ. ಅವರುಗಳ ಔದಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ಜಮ್ಮು-ಕಾಶ್ಮೀರದ ಮಾಜಿ ಸಿಎಂಗಳಾದ ಮೆಹಬೂಬಾ ಮುಫ್ತಿ ಹಾಗೂ ಒಮರ್‌ ಅಬ್ದುಲ್ಲಾ ಕೂಡ ಅದೇ ಕಾರ್ಟೂನ್‌ ಬಳಸಿ ಟ್ವೀಟ್‌ ಮಾಡಿದ್ದಾರೆ. 'ಖಾಲ್ಸಾ ಏಡ್‌' ಹಾಗೂ ಸಿಖ್‌ ಸಮುದಾಯದ ಮಾನವೀಯತೆಯನ್ನ ಈ ಉಭಯ ನಾಯಕರೂ ಕೊಂಡಾಡಿದ್ದಾರೆ. ಖಾಲ್ಸಾ ಏಡ್‌ ಸಿಇಒ ರವೀಂದ್ರ್ ಸಿಂಗ್‌, ನ್ಯಾಷನಲ್‌ ಕಾನ್ಫರೆನ್ಸ್‌ನ ಮಾಜಿ ಸಿಎಂ ಕೃತಜ್ಞತೆಗೆ ಪ್ರತಿ ಹೇಳಿಕೆ ನೀಡಿ, ಇದೆಲ್ಲ ಕೃತಜ್ಞೆ ಪಂಜಾಬ್‌ ಸಿಎಂ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಹಾಗೂ ಗುರುದ್ವಾರದ ಸಿಖ್‌ ಸಮುದಾಯಕ್ಕೆ ಸಲ್ಲಬೇಕು ಅಂತಾನೂ ಹೇಳಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.