ನವದೆಹಲಿ: ಜಾಗತಿಕವಾಗಿ ಎಲ್ಲ ರಾಷ್ಟ್ರಗಳು ಪ್ರಸ್ತುತ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ವಾಯಮಾಲಿನ್ಯ. ಈ ಮೊದಲು ವಾಯಮಾಲಿನ್ಯದ ಪರಿಣಾಮಗಳ ಬಗ್ಗೆ ಓದುತ್ತಿದ್ದ, ಕೇಳುತ್ತಿದ್ದ ನಾವು, ಇತ್ತೀಚೆಗೆ ದೆಹಲಿಯಲ್ಲಿ ಉಂಟಾದ ಆಘಾತಕಾರಿ ವಾಯಮಾಲಿನ್ಯದ ದುಷ್ಪರಿಣಾಮವನ್ನು ಕಣ್ಣಾರೆ ಕಂಡಿದ್ದೇವೆ.
ವಾಯುಮಾಲಿನ್ಯ ಉಂಟಾಗಲು ಮುಖ್ಯ ಕಾರಣ ಇಂಗಾಲದ ಡೈ ಆಕ್ಸೈಡ್ (ಕಾರ್ಬನ್ ಡೈ ಆಕ್ಸೈಡ್). ಪೆಟ್ರೋಲಿಯಂ ವಾಹನಗಳು ಹೊರಬಿಡುವ ಇಂಗಾಲದ ಡೈ ಆಕ್ಸೈಡ್ ವಿಷಪೂರಿತ ಗಾಳಿಯು ಜಗತ್ತಿಗೆ ಕಂಟಕ ತಂದಿಟ್ಟಿದೆ. ಇದರಿಂದ ಸಂರಕ್ಷಣೆ ಹೊಂದಲು ತಾತ್ಕಾಲಿಕ ದಾರಿಯೆಂದರೆ ಇಲೆಕ್ಟ್ರಿಕ್ ವಾಹನಗಳು ಅಥವಾ ನೈಸರ್ಗಿಕ ಇಂಧನಗಳ ಬಳಕೆ.
ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಇಲೆಕ್ಟ್ರಿಕ್ ವಾಹನ ಬಳಕೆಯ ಸಾಧ್ಯ ಸಾಧ್ಯತೆಗಳ ಬಗ್ಗೆ ನೋಡುವುದಾದರೆ, ಬಯೋಗ್ಯಾಸ್, ಸಿಎನ್‌ಜಿ, ಎಥೆನಾಲ್ ಮತ್ತು ಮೆಥನಾಲ್ ಅನ್ನುವಾಹನಗಳಿಗೆ ಲಭ್ಯವಾಗುವಂತೆ ಮಾಡಲು ಚಿಲ್ಲರೆ ಮಾರಾಟ ಮಳಿಗೆ (ಆರ್ಒ) ಗಳನ್ನು ಸ್ಥಾಪಿಸಬೇಕು. ಇದು ತೈಲ ಮಾರ್ಕೆಟಿಂಗ್ ಕಂಪನಿ (ಒಎಂಸಿ) ಅಥವಾ ಇತರ ಸಂಸ್ಥೆಗಳು ನಡೆಸುವ ವಾಣಿಜ್ಯ ಚಟುವಟಿಕೆಗಳನ್ನು ಆಧರಿಸಿ ಇರುತ್ತದೆ.
ಈ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು 2019 ನವೆಂಬರ್ 8ರಂದು ಅಧಿಸೂಚನೆಯೊಂದನ್ನು ಹೊರಡಿಸಿದೆ. ಈ ಅಧಿಸೂಚನೆಯಲ್ಲಿ ಸಾಂಪ್ರದಾಯಿಕ ಇಂಧನಗಳ ಜೊತೆಗೆ, ನೈಸರ್ಗಿಕ ಅನಿಲ (ಸಿಎನ್‌ಜಿ) ನಂತಹ ಕನಿಷ್ಠ ಒಂದು ಹೊಸ ಪರ್ಯಾಯ ಇಂಧನಗಳ ಮಾರಾಟ ಮಾಡುವ ಅಧಿಕೃತ ಘಟಕಗಳ ಸ್ಥಾಪನೆ ಅತ್ಯಗತ್ಯ ಎಂದಿದೆ. ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ ಯೋಜಿತ ಪರ್ಯಾಯ ಇಂಧನ ಘಟಕಗಳಲ್ಲಿ ನೈಸರ್ಗಿಕ ಅನಿಲ (ಸಿಎನ್‌ಜಿ) ಅಥವಾ ಇಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್ಗಳು ಸೇರಿದಂತೆ ಇತರ ವ್ಯವಸ್ಥೆಗಳು ಒಳಗೊಂಡಿವೆ.
ಸದ್ಯ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ಪ್ರಕಾರ ಯೋಜಿತ ಪರ್ಯಾಯ ಇಂಧನಗಳ ಮಾರಾಟ ಮಳಿಗೆಗಳು ಮುಂದಿನ ಮೂರು ವರ್ಷಗಳ ಒಳಗಾಗಿ ಕಾರ್ಯಗತಗೊಳ್ಳಬೇಕು. ನೂತನವಾಗಿ ಆರಂಭವಾಗುವ ಘಟಕಗಳು ಪ್ರಸ್ತುತ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಇಂಧನಗಳ ರೀತಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ, ಕೇಂದ್ರ ವಿದ್ಯುತ್ ಪ್ರಾಧಿಕಾರ ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ ಇವುಗಳ ಶಾಸನಬದ್ಧ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ನಿಯಮಗಳನ್ನು ಪಾಲಿಸಿ ಕಾರ್ಯಾಚರಿಸುವ ಅಧಿಕೃತ ಘಟಕದ ಮೇಲೆ ಯಾವುದೇ ನಿರ್ಬಂಧವಿರುವುದಿಲ್ಲ.
ಪ್ರಸ್ತುತ ದೇಶದಲ್ಲಿರುವ ಇಲೆಕ್ಟ್ರಿಕ್ ವಾಹನಗಳ ಸಂಖ್ಯೆ ಈ ಕೆಳಗಿನಂತಿದೆ( ರಾಜ್ಯವಾರು)
ಕ್ರಮ.ಸಂ | ರಾಜ್ಯಗಳು | ವಾಹನಗಳ ಸಂಖ್ಯೆ |
1 | ಅರುಣಾಚಲ ಪ್ರದೇಶ | 13 |
2 | ಅಸ್ಸಾಂ | 19,726 |
3 | ಬಿಹಾರ | 23,256 |
4 | ಚತ್ತೀಸ್ಘಡ | 6,039 |
5 | ಛಂಧೀಘಡ | 700 |
6 | ದಾಮನ್ ಮತ್ತು ದಿಯು | 60 |
7 | ದೆಹಲಿ | 85,133 |
8 | ದಾದ್ರ ನಗರ್ ಹವೇಲಿ | 15 |
9 | ಗೋವಾ | 403 |
10 | ಗುಜರಾತ್ | 4,290 |
11 | ಹಿಮಾಚಲ ಪ್ರದೇಶ | 171 |
12 | ಹರಿಯಾಣ | 13,266 |
13 | ಜಾರ್ಖಂಡ್ | 6,001 |
14 | ಜಮ್ಮು ಮತ್ತು ಕಾಶ್ಮೀರ | 221 |
15 | ಕರ್ನಾಟಕ | 33,721 |
16 | ಕೇರಳ | 481 |
17 | ಮಹಾರಾಷ್ಟ್ರ | 21,404 |
18 | ಮೇಘಾಲಯ | 26 |
19 | ಮಣಿಪುರ | 268 |
20 | ಮಿಝೋರಾಂ | 19 |
21 | ನಾಗಾಲ್ಯಾಂಡ್ | 39 |
22 | ಒಡಿಸ್ಸಾ | 4,255 |
23 | ಪಂಜಾಬ್ | 2,973 |
24 | ಪಾಂಡಿಚೇರಿ | 966 |
25 | ರಾಜಸ್ಥಾನ | 20,464 |
26 | ಸಿಕ್ಕಿಂ | 23 |
27 | ತಮಿಳುನಾಡು | 12,824 |
28 | ತ್ರಿಪುರ | 916 |
28 | ಉತ್ತರಾಂಖಂಡ್ | 15,747 |
29 | ಉತ್ತರಪ್ರದೇಶ | 160,545 |
30 | ಪಶ್ಚಿಮ ಬಂಗಾಳ | 25,087 |
ಒಟ್ಟು | 459,052 |