ETV Bharat / bharat

ಕೊರೊನಾ ದೇಣಿಗೆಗಾಗಿ ಜನಪ್ರಿಯ ಸಂಗೀತ ತಂಡದಿಂದ ಆನ್‌ಲೈನ್‌ ಪ್ರದರ್ಶನ

author img

By

Published : Apr 12, 2020, 12:35 PM IST

ದೇಶವೇ ಲಾಕ್​ಡೌನ್​ನಲ್ಲಿರುವ ಸಂದರ್ಭದಲ್ಲಿ ಶಿಲ್ಲಾಂಗ್​ ಮೂಲದ ಮ್ಯೂಸಿಕ್‌ ಬ್ಯಾಂಡ್​ ತಂಡವೊಂದು ಕೊರೊನಾ ಪೀಡಿತ ಜನರಿಗಾಗಿ ಆನ್​ಲೈನ್ ಪ್ರದರ್ಶನ ನೀಡುತ್ತಿದೆ.

ಕೊರೊನಾಗಾಗಿ ದೇಣಿಗೆ
ಸೋಲ್ಮೇಟ್​ ತಂಡ

ಶಿಲ್ಲಾಂಗ್​: ದೇಶದೆಲ್ಲೆಡೆ ಕೊರೊನಾ ವೈರಸ್​ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲಾಕ್​ಡೌನ್​ ಇರುವುದರಿಂದ ಶಿಲ್ಲಾಂಗ್​ನ ಜನಪ್ರಿಯ ಮ್ಯೂಸಿಕ್ ಬ್ಯಾಂಡ್​ ಸಾಮಾಜಿಕ ಜಾಲಾತಾಣಗಳಲ್ಲಿ ಪ್ರದರ್ಶನ ನೀಡಿ, ದೇಶ-ವಿದೇಶದೆಲ್ಲಡೆ ಇರುವ ಅಭಿಮಾನಿಗಳಿಂದ ಹಣ ಸಂಗ್ರಹಿಸಿ ಕೋವಿಡ್- 19ನಿಂದ ತೊಂದರೆಗೀಡಾಗಿರುವ ಜನಸಮಾನ್ಯರಿಗೆ ನೆರವಾಗುತ್ತಿದೆ.

ಪ್ರತೀವಾರ ನಡೆಯುವ ಮಾರುಕಟ್ಟೆಗಳು ಸ್ಥಗಿತಗೊಂಡಿರುವುದರಿಂದ ರೈತರ ಜೀವನೋಪಾಯಕ್ಕೆ ತೊಂದರೆಯಾಗಿದೆ ಎಂದು ನಗರ ಮೂಲದ ಸೋಲ್ಮೇಟ್​ ಬ್ಯಾಂಡ್‌ ಸದಸ್ಯ ರೂಡಿ ವಾಲಾಂಗ್​ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ಸೋಲ್ಮೇಟ್​ ತಮ್ಮ ಫೇಸ್​ಬುಕ್​ನಲ್ಲಿ ಲೈವ್​ ಪ್ರದರ್ಶನ ನೀಡಿ, ವಿಶ್ವದಾದ್ಯಂತ ತಮ್ಮ ಅಭಿಮಾನಿಗಳಿಂದ ಸಂಗ್ರಹಿಸಿದ ಮೊತ್ತವನ್ನು ಗ್ರಾಮೀಣ ಪ್ರದೇಶದಲ್ಲಿ ತೊಂದರೆಗೊಳಗಾದ ಜನರಿಗೆ ನೀಡಿದ್ದಾರೆ.

ನಾನು ನಮ್ಮ ರೂಮಿನಿಂದಲೇ ಫೇಸ್​ಬುಕ್​ ಲೈವ್ ಪ್ರದರ್ಶನ ನೀಡಿದ್ದೇವೆ. ಜಗತ್ತಿನೆಲ್ಲೆಡೆ ಇರುವ ನಮ್ಮ ಅಭಿಮಾನಿಗಳು ಇದನ್ನು ಇಷ್ಟಪಟ್ಟಿದ್ದಾರೆ. ಅಂದಾಜು 7 ಲಕ್ಷ ರೂ ದೇಣಿಗೆ ಸಂಗ್ರಹಿಸುವ ಗುರಿ ಹೊಂದಿದ್ದೇವೆ ಎಂದು ಸೋಲ್ಮೇಟ್​ ಮುಖ್ಯಸ್ಥ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.