ಚೆನ್ನೈ: ಹೆಲ್ಮೆಟ್ ಇಲ್ಲದ ಸೈಕಲ್ ಸವಾರನಿಗೆ ಸಂಚಾರಿ ಪೊಲೀಸರು ದಂಡ ಹಾಕಿದ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಧರ್ಮಪುರಿ ಜಿಲ್ಲೆಯ ಏರಿಯೂರ್ ಭಾಗದ ಸಂಚಾರಿ ಪೊಲೀಸರು ವಾಹನ ತಪಾಸಣೆಗೆ ರಸ್ತೆಗಿಳಿದಿದ್ದರು. ಈ ವೇಳೆ ಸೈಕಲ್ನಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ತಡೆದು ನಿಲ್ಲಿಸಿ ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.
ಹೆಲ್ಮೆಟ್ ಇಲ್ಲದೆ ಸೈಕಲ್ ಚಲಾಯಿಸಿದ್ದಕ್ಕೆ 2 ಸಾವಿರ ರೂ. ದಂಡ ಪಾವತಿಸುವಂತೆ ಸೂಚಿಸಿದ್ದಾರೆ! ದಂಡದ ಹಣ ನೀಡದಿದ್ದರೆ ಸೈಕಲ್ ಜಪ್ತಿ ಮಾಡುವುದಾಗಿಯೂ ಬೆದರಿಸಿದ್ರು.
ಸೈಕಲ್ ಸವಾರನನ್ನು ಪೊಲೀಸರು ವಿಚಾರಣೆಗೊಳಪಡಿಸಿರುವ ದೃಶ್ಯವನ್ನು ಅನಾಮಿಕ ವ್ಯಕ್ತಿಯೊಬ್ಬ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ.