ಔರಂಗಾಬಾದ್ (ಮಹಾರಾಷ್ಟ್ರ): ಭಾರತೀಯ ಕರೆನ್ಸಿಯ ಅಮಾನ್ಯೀಕರಣಗೊಂಡಿರುವ 1,000 ಮತ್ತು 500 ಮುಖಬೆಲೆಯ ಸುಮಾರು 1 ಕೋಟಿ ರೂ. ಮೌಲ್ಯದ ನೋಟುಗಳನ್ನು ಅಪರಾಧ ಶಾಖೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೊಂಡಾ ನಾಕಾ ಚೌಕ್‌ನ ಸಿಂಧಿ ಕಾಲೋನಿಯಲ್ಲಿರುವ ಹೋಟೆಲ್ ಗ್ಲೋಬಲ್ ಇನ್ನಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.
ಕರೆನ್ಸಿ ನೋಟುಗಳ ವಿನಿಮಯಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ನೋಟುಗಳ ಜೊತೆಗೆ ನಾಲ್ಕು ಮೊಬೈಲ್ ಫೋನ್ಗಳನ್ನು ಕೂಡಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜವಾಹರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.