ಚಿಂದ್ವಾರ (ಮಧ್ಯ ಪ್ರದೇಶ): ಸೆಲ್ಫಿ ತೆಗೆದುಕೊಳ್ಳಲು ಹೋದ ಸಹೋದರಿಯರಿಬ್ಬರು ನೀರಿನ ಪ್ರವಾಹದಲ್ಲಿ ಸಿಲುಕಿ ಒದ್ದಾಡಿದ ಘಟನೆ ಚಿಂದ್ವಾರದ ಪೆಂಚ್ ನದಿಯಲ್ಲಿ ನಡೆದಿದೆ.
ಯುವತಿಯರು ನೀರಿಗಿಳಿದಾಗ ನೀರಿನ ಹರಿವು ಕಡಿಮೆ ಇತ್ತು. ಬಳಿಕ ಇದ್ದಕ್ಕಿದ್ದಂತೆ ತೀವ್ರಗೊಂಡಿದ್ದು, ಇಬ್ಬರೂ ನದಿಯಲ್ಲಿಯೇ ಸಿಕ್ಕಿಹಾಕಿಕೊಂಡರು. ತಕ್ಷಣ ಈ ಕುರಿತು ಪೊಲೀಸ್ ಮತ್ತು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಲಾಯಿತು.
![sisters-trapped-in-middle-of-river](https://etvbharatimages.akamaized.net/etvbharat/prod-images/mp-chh-03-selfi-river-7204291-hdmp4_23072020231255_2307f_1595526175_16.jpg)
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ರಕ್ಷಿಸಿದ್ದಾರೆ. ಇಬ್ಬರು ಸಹೋದರಿಯರು ಸುಮಾರು ಒಂದು ಗಂಟೆ ನದಿಯ ಮಧ್ಯದಲ್ಲಿ ಸಿಲುಕಿಕೊಂಡು ಒದ್ದಾಡಿದರು.
![sisters-trapped-in-middle-of-river](https://etvbharatimages.akamaized.net/etvbharat/prod-images/mp-chh-03-selfi-river-7204291-hdmp4_23072020231255_2307f_1595526175_495.jpg)