ಇಂದೋರ್(ಮಧ್ಯ ಪ್ರದೇಶ): ಲಾಕ್ಡೌನ್ ವೇಳೆ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳಿಗೆ ಕೂಡ ಕೊರೊನಾ ಸೋಂಕು ತಗುಲುತ್ತಿದೆ.
ಮಧ್ಯಪ್ರದೇಶದ ಇಂದೋರ್ನಲ್ಲಿ ಇಂದು ಕೋವಿಡ್-19ಗೆ ಪೊಲೀಸ್ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಉಜ್ಜೈನ್ನ ಪೊಲೀಸ್ ಠಾಣಾ ಉಸ್ತುವಾರಿಯಾಗಿ ನಿಯೋಜನೆಯಾಗಿದ್ದ ಯಶ್ವಂತ್ ಪಾಲ್ಗೆ ಸೋಂಕು ತಗುಲಿತ್ತು. ಕಳೆದ 12 ದಿನಗಳಿಂದ ಶ್ರೀ ಅರಬಿಂದೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಮೃತಪಟ್ಟಿದ್ದಾರೆ ಎಂದು ಇಂದೋರ್ನ ಮುಖ್ಯ ವೈದ್ಯಾಧಿಕಾರಿ ಪ್ರವೀಣ್ ಜಾಡಿಯಾ ತಿಳಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದಷ್ಟೇ ಇಂದೋರ್ನ ಜುನಿಯ ಪೊಲೀಸ್ ಠಾಣಾ ಉಸ್ತುವಾರಿ ದೇವೇಂದ್ರ ಕುಮಾರ್ ಚಂದ್ರವಂಶಿ ಕೂಡ ಕೊರೊನಾಗೆ ಬಲಿಯಾಗಿದ್ದರು. ಇಂದೋರ್ ಒಂದರಲ್ಲೇ ಈವರೆಗೆ ಕೋವಿಡ್-19 ವೈರಸ್ನಿಂದ 52 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಏ.18 ರಂದು ಕೊರೊನಾ ಸೋಂಕಿಗೆ ಒಳಗಾಗಿದ್ದ ಪಂಜಾಬ್ನ ಲೂಧಿಯಾನದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಅನಿಲ್ ಕೊಹ್ಲಿ ಬಲಿಯಾಗಿದ್ದರು.