ನವದೆಹಲಿ: ಕಲಿಂದಿ ಕುಂಜ್ ನಗರದ ಜೆಜೆ ಕಾಲೋನಿ ನಿವಾಸಿಗಳು ಕರ್ತವ್ಯನಿರತ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ್ದು, ಪ್ರಾಣ ರಕ್ಷಣೆಗಾಗಿ ಪೇದೆ ಗಾಳಿಯಲ್ಲಿ ಗುಂಡು ಹಾರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಪೊಲೀಸ್ ಪೇದೆ ರಾಮಕೃಷ್ಣ ಜೆಜೆ ಕಾಲೋನಿ ಬಳಿ ಗಸ್ತು ತಿರುಗುತ್ತಿದ್ದಾಗ ಇಬ್ಬರು ವ್ಯಕ್ತಿಗಳು ತಮ್ಮ ಮನೆ ಹೊರಗೆ ನಿಂತುಕೊಂಡು ಗಲಾಟೆ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ತೆರಳಿದ ಪೇದೆ, ಏನೆಂದು ವಿಚಾರಿಸಿದ್ದಾನೆ. ಆಗ ಪೇದೆ ಜೊತೆ ಅನುಚಿತವಾಗಿ ವರ್ತಿಸಿದ್ದಲ್ಲದೆ ದ್ವಿಚಕ್ರ ವಾಹನಕ್ಕೆ ಹಾನಿ ಉಂಟುಮಾಡಿದ್ದಾರೆ.
-
#WATCH Delhi: "A Delhi police constable was allegedly beaten up by the residents of JJ colony in New Delhi's Kalindi Kunj area in the early hours of August 3", said the Delhi Police. The constable was patrolling the area for bootleggers when the incident took place. 1 arrested pic.twitter.com/dCo62qXKAb
— ANI (@ANI) August 3, 2019 " class="align-text-top noRightClick twitterSection" data="
">#WATCH Delhi: "A Delhi police constable was allegedly beaten up by the residents of JJ colony in New Delhi's Kalindi Kunj area in the early hours of August 3", said the Delhi Police. The constable was patrolling the area for bootleggers when the incident took place. 1 arrested pic.twitter.com/dCo62qXKAb
— ANI (@ANI) August 3, 2019#WATCH Delhi: "A Delhi police constable was allegedly beaten up by the residents of JJ colony in New Delhi's Kalindi Kunj area in the early hours of August 3", said the Delhi Police. The constable was patrolling the area for bootleggers when the incident took place. 1 arrested pic.twitter.com/dCo62qXKAb
— ANI (@ANI) August 3, 2019
ಸ್ವಲ್ಪ ಹೊತ್ತಲ್ಲೇ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಪೊಲೀಸ್ ಪೇದೆ ರಾಮಕೃಷ್ಣ ಜೊತೆ ಜಗಳ ಮಾಡುತ್ತ ಹಲ್ಲೆಗೂ ಮುಂದಾಗುತ್ತಾರೆ. ಈ ವೇಳೆ ಪ್ರಾಣ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ ಪೇದೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಓರ್ವ ಆರೋಪಿಯನ್ನ ಬಂಧಿಸಿದ್ದಾರೆ.