ETV Bharat / bharat

ಪ್ರತಿ ವರ್ಷ 7.84 ಲಕ್ಷ ಮಂದಿ ಕ್ಯಾನ್ಸರ್​ಗೆ ಬಲಿ: 90,000 ಮಂದಿಗೆ 'ಪಿಎಂಜೆಎವೈ'ಯಡಿ ಚಿಕಿತ್ಸೆ - ಆಯುಷ್ಮಾನ್‌ ಭಾರತ್‌

ದೇಶದಾದ್ಯಂತ ಇರುವ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರಗಳು, ಸಂಶೋಧನಾ ಸಂಸ್ಥೆಗಳು, ರೋಗಿಗಳ ಗುಂಪು ಹಾಗೂ ಚಾರಿಟೇಬಲ್‌ ಟ್ರಸ್ಟ್‌ಗಳ ನಡುವೆ ಜಾಲವೊಂದನ್ನು ಸೃಷ್ಟಿಸಿ ಕ್ಯಾನ್ಸರ್‌ ರೋಗಿಗಳ ಚಿಕಿತ್ಸಾ ಸೇವೆಗಳನ್ನು ಎನ್‌ಎಚ್‌ಎ ಮತ್ತು ಎನ್‌ಸಿಜಿಯಡಿ ಒಂದೇ ವೇದಿಕೆಗೆ ತಂದಿದೆ. ಈ ಮೂಲಕ ಕಳೆದ ಒಂದು ವರ್ಷದಲ್ಲಿ 90 ಸಾವಿರ ಮಂದಿಗೆ ಕ್ಯಾನ್ಸರ್​ ಚಿಕಿತ್ಸೆ ಒದಗಿಸಲಾಗಿದೆ.

ಸಾಂದರ್ಭಿಕ ಚಿತ್ರ
author img

By

Published : Oct 6, 2019, 9:59 AM IST

ನವದೆಹಲಿ: ಕೇಂದ್ರ ಸರ್ಕಾರದ ಆರೋಗ್ಯ ವಿಮಾ ಯೋಜನೆಯ ಆಯುಷ್ಮಾನ್‌ ಭಾರತ್‌ ಮತ್ತು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ (ಪಿಎಂಜೆಎವೈ) ಅಡಿ ಕಳೆದ ಒಂದು ವರ್ಷದಲ್ಲಿ 90 ಸಾವಿರ ಕ್ಯಾನ್ಸರ್​ ರೋಗಿಗಳಿಗೆ ಚಿಕಿತ್ಸೆ ಲಭ್ಯವಾಗಿದೆ.

ಕೇಂದ್ರ ಸರ್ಕಾರದ ಆರೋಗ್ಯ ವಿಮಾ ಯೋಜನೆ ಆಯುಷ್ಮಾನ್‌ ಭಾರತ್‌ ಹಾಗೂ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಮೂಲಕ, ಕ್ಯಾನ್ಸರ್‌ ರೋಗಿಗಳ ಚಿಕಿತ್ಸೆಗೆ ಏಕರೂಪದ ನಿಯಮಗಳನ್ನು ರೂಪಿಸುವ ಉದ್ದೇಶದಿಂದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಮತ್ತು ರಾಷ್ಟ್ರೀಯ ಕ್ಯಾನ್ಸರ್‌ ಗ್ರಿಡ್‌ (ಎನ್‌ಸಿಜಿ) ಒಪ್ಪಂದಕ್ಕೆ ಸಹಿ ಹಾಕಿದ್ದವು. ದೇಶದಾದ್ಯಂತ ಇರುವ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರಗಳು, ಸಂಶೋಧನಾ ಸಂಸ್ಥೆಗಳು, ರೋಗಿಗಳ ಗುಂಪು ಹಾಗೂ ಚಾರಿಟೇಬಲ್‌ ಟ್ರಸ್ಟ್‌ಗಳ ನಡುವೆ ಒಂದು ಜಾಲ ಸೃಷ್ಟಿಸಿ ಕ್ಯಾನ್ಸರ್‌ ರೋಗಿಗಳ ಚಿಕಿತ್ಸಾ ಸೇವೆಗಳನ್ನು ಒಂದೇ ವೇದಿಕೆಗೆ ತಂದಿತು.

ಕೇಂದ್ರ ಆರೋಗ್ಯ ಇಲಾಖೆಯ ಹೊರಡಿಸಿದ ದತ್ತಾಂಶಗಳ ಪ್ರಕಾರ, ಪ್ರತಿ ವರ್ಷದ 11.57 ಲಕ್ಷ ಜನರು ಕ್ಯಾನ್ಸರ್​ ರೋಗಿಗಳು ಸೇರ್ಪಡೆ ಆಗುತ್ತಿದ್ದಾರೆ. ಪ್ರತಿ ವರ್ಷ 7.84 ಜನ ಕ್ಯಾನ್ಸರ್​ನಿಂದ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಒಟ್ಟು 22.5 ಲಕ್ಷ ಜನ ಕ್ಯಾನ್ಸರ್​ ಪೀಡಿತರಿದ್ದಾರೆ.

ಒಂದು ವರ್ಷದ ಅವಧಿಯಲ್ಲಿ ಕ್ಯಾನ್ಸರ್​ ಸಂಬಂಧಿತ ರೋಗಗಳಿಂದ ಬಳಲುತ್ತಿದ್ದ 90,000 ಜನರಿಗೆ ಪಿಎಂಜೆಎವೈ ಅಡಿ ಚಿಕಿತ್ಸೆ ಕೊಡಿಸಲಾಗಿದೆ. ಫಲಾನುಭವಿ ರೋಗಿಗಳಲ್ಲಿ ತಮಿಳುನಾಡು (40,056) ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ಕೇರಳ (22,000), ಮಧ್ಯಪ್ರದೇಶ (19,455), ಛತ್ತಿಸಗಢ (15,997) ಹಾಗೂ ಗುಜರಾತ್​ (14,380) ಇವೆ ಎಂದು ತಿಳಿಸಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.