ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗ ಎದುರಿಸಲು ನಡೆಯುತ್ತಿರುವ ಜಾಗತಿಕ ಸಹಯೋಗದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಬುಧವಾರ ಚರ್ಚಿಸಿದರು. ಸಾಂಪ್ರದಾಯಿಕ ಔಷಧವನ್ನ ಆಧುನಿಕ ವೈದ್ಯಕೀಯ ಅಭ್ಯಾಸಕ್ಕೆ ಪ್ರೋಟೋಕಾಲ್‌ಗಳ ಮೂಲಕ ಪರಿಹಾರದ ಅಗತ್ಯತೆ ಇದೆ ಎಂದು ಇಬ್ಬರು ನಾಯಕರು ಪ್ರತಿಪಾದಿಸಿದರು.
ಪಿಎಂ ಮೋದಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಡಿಜಿಯೊಂದಿಗೆ ದೂರವಾಣಿ ಮೂಲಕ ಕೊರೊನಾ ಬಗ್ಗೆ ಚರ್ಚೆ ನಡೆಸಿದರು. ಸಾಂಕ್ರಾಮಿಕ ರೋಗಕ್ಕೆ ಸಂಘಟಿತ ಜಾಗತಿಕ ಪ್ರತಿಕ್ರಿಯೆ ಒದಗಿಸುವಲ್ಲಿ ಡಬ್ಲ್ಯುಎಚ್‌ಒ ಪ್ರಮುಖ ಪಾತ್ರ ವಹಿಸಿದ್ದಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಡಬ್ಲ್ಯುಎಚ್ಒನ ಇತರ ಕಾಯಿಲೆಗಳ ವಿರುದ್ಧ ಹೋರಾಡುವ ದೃಷ್ಟಿ ಬಗ್ಗೆ ಗಮನಿಸಿದ ಮೋದಿ, ಅಭಿವೃದ್ಧಿಶೀಲ ರಾಷ್ಟ್ರಗಳ ಆರೋಗ್ಯ ವ್ಯವಸ್ಥೆಗಳಿಗೆ ಡಬ್ಲ್ಯುಎಚ್‌ಒ ಬೆಂಬಲದ ಮಹತ್ವ ಶ್ಲಾಘಿಸಿದರು ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಡಬ್ಲ್ಯುಎಚ್‌ಒ ಮತ್ತು ಭಾರತೀಯ ಆರೋಗ್ಯ ಅಧಿಕಾರಿಗಳ ನಡುವಿನ ನಿಕಟ ಮತ್ತು ನಿಯಮಿತ ಸಹಯೋಗ ಹೊಂದಿದೆ ಎಂದು ಡಬ್ಲ್ಯುಎಚ್‌ಒ ಮಹಾ ನಿರ್ದೇಶಕರು ಹೇಳಿದರು. ಭಾರತದ ದೇಶೀಯ ಉಪಕ್ರಮಗಳಾದ ಆಯುಷ್ಮಾನ್ ಭಾರತ್ ಯೋಜನೆ ಮತ್ತು ಕ್ಷಯರೋಗದ ವಿರುದ್ಧದ ಅಭಿಯಾನ ನಡೆಸಿರುವ ಬಗ್ಗೆ ವಿಶೇಷವಾಗಿ ಘೆಬ್ರೆಯೆಸಸ್ ಶ್ಲಾಘಿಸಿದ್ದಾರೆ. ಜಾಗತಿಕ ಆರೋಗ್ಯ ವಿಷಯಗಳಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಘೆಬ್ರೆಯೆಸಸ್ ಹೇಳಿದರು ಎಂದು ಪಿಎಂಒ ಕಚೇರಿ ತಿಳಿಸಿದೆ.
ಪ್ರಧಾನ ಮಂತ್ರಿ ಮತ್ತು ಮಹಾನಿರ್ದೇಶಕರು ಸಾಂಪ್ರದಾಯಿಕ ಔಷಧ ವೈಜ್ಞಾನಿಕ ಪರೀಕ್ಷೆ ಮತ್ತು ಮೌಲ್ಯಮಾಪನದ ಅಗತ್ಯದ ಬಗ್ಗೆ ಚರ್ಚೆ ನಡೆಸಿದರು. ವಿಶೇಷವಾಗಿ ಜಾಗತಿಕ ಜನಸಂಖ್ಯೆಯ ಸ್ವಾಸ್ಥ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕುರಿತು ದೀರ್ಘಕಾಲ ಚರ್ಚಿಸಿದರು.
ಪ್ರೋಟೋಕಾಲ್‌ಗಳ ಮೂಲಕ ಸಾಂಪ್ರದಾಯಿಕ ಔಷಧ ಪರಿಹಾರಗಳನ್ನು ಆಧುನಿಕ ವೈದ್ಯಕೀಯ ಅಭ್ಯಾಸಕ್ಕೆ ಸಂಯೋಜಿಸುವ ಅಗತ್ಯತೆ ಮತ್ತು ಜಾಗೃತವಾಗಿ ಸಾಂಪ್ರದಾಯಿಕ ಔಷಧ ಉತ್ಪನ್ನಗಳು ಮತ್ತು ಅಭ್ಯಾಸಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅವರು ಒಪ್ಪಿದ್ದಾರೆ ಎಂದು ಪಿಎಂಒ ತಿಳಿಸಿದೆ.
ಸಾಂಪ್ರದಾಯಿಕ ಔಷಧದ ಸಾಮರ್ಥ್ಯವನ್ನು ಇದುವರೆಗೂ ಸಮರ್ಪಕವಾಗಿ ಪ್ರಶಂಸಿಸಲಾಗಿಲ್ಲ. ಈ ಪ್ರದೇಶದಲ್ಲಿನ ಸಂಶೋಧನೆ, ತರಬೇತಿ ಮತ್ತು ಉತ್ತಮ ಅಭ್ಯಾಸಗಳ ಹಂಚಿಕೆಯನ್ನು ಉತ್ತೇಜಿಸಲು ಡಬ್ಲ್ಯುಎಚ್‌ಒ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಮೋದಿ ಪ್ರಯತ್ನಗಳನ್ನು ಶ್ಲಾಘಿಸಿದ ಘೆಬ್ರೆಯೆಸಸ್, 'ಆಯುರ್ವೇದ ಫಾರ್ ಕೋವಿಡ್ -19' ಹೆಸರಲ್ಲಿ ನವೆಂಬರ್ 13 ರಂದು ಭಾರತದಲ್ಲಿ ಆಯುರ್ವೇದ ದಿನಾಚರಣೆ ನಡೆಸುವುದರ ಬಗ್ಗೆ ಡಬ್ಲ್ಯುಎಚ್‌ಒ ಮಹಾನಿರ್ದೇಶಕರಿಗೆ ಮಾಹಿತಿ ನೀಡಿದರು.
ಚರ್ಚೆ ಬಳಿಕ ಟ್ವೀಟ್ ಮಾಡಿದ ಘೆಬ್ರೆಯೆಸಸ್, ನಮಸ್ತೆ ಪ್ರಧಾನಿ ನರೇಂದ್ರ ಮೋದಿ, ಜಾಗತಿಕವಾಗಿ ಸಾಂಪ್ರದಾಯಿಕ ಔಷಧದಲ್ಲಿ ನಮ್ಮ ಸಹಯೋಗ ಮತ್ತು ಜ್ಞಾನ, ಸಂಶೋಧನೆ ಮತ್ತು ತರಬೇತಿಗೆ ಮುಂಗಡ ಪ್ರವೇಶವನ್ನು ಹೇಗೆ ಬಲಪಡಿಸುವುದು ಎಂಬುದರ ಕುರಿತು ನಾವು ಚರ್ಚಿಸಿದ್ದೇವೆ. ಜಾಗತಿಕ ಆರೋಗ್ಯ ಮತ್ತು ಸಾರ್ವತ್ರಿಕ ಆರೋಗ್ಯ ಕವರೇಜ್ನಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿರುವುದು ಡಬ್ಲ್ಯುಎಚ್‌ಒ ಸ್ವಾಗತಿಸಿದೆ ಎಂದು ಬರೆದುಕೊಂಡಿದ್ದಾರೆ.
ಕೋವಾಕ್ಸ್ ಮತ್ತು ಕೋವಿಡ್ -19 ಲಸಿಕೆಗಳನ್ನು ಜಾಗತಿಕ ಸಾರ್ವಜನಿಕ ಹಿತದೃಷ್ಟಿಯಿಂದ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಸಾಂಕ್ರಾಮಿಕ ರೋಗವು ಜಗತ್ತಿಗೆ ಅಭೂತಪೂರ್ವ ಸವಾಲಾಗಿದೆ. ಅದನ್ನು ಕೊನೆಗೊಳಿಸಲು ನಾವು ಕೈ ಜೋಡಿಸುತ್ತೇವೆ ಎಂದು ACTtogether ಎಂಬ ಹ್ಯಾಶ್‌ಟ್ಯಾಗ್ ಬಳಸಿ ಮತ್ತೊಂದು ಟ್ವೀಟ್ ಮಾಡಿದರು.