ETV Bharat / bharat

ಸೇನಾ ಶೌರ್ಯ ಬಿಹಾರ ಚುನಾವಣೆಗೆ ಬಳಸುತ್ತಿರುವ ಮೋದಿ.. ಇದು ಕೊರೋನಾಗಿಂತ ಗಂಭೀರ ಎಂದ ಶಿವಸೇನೆ!! - ಪ್ರಧಾನಿ ಮೋದಿ ವಿರುದ್ಧ ಶಿವ ಸೇನೆ ಆಕ್ರೋಶ

'ದೇಶವು ತನ್ನ ಗಡಿಯಲ್ಲಿ ಬಿಕ್ಕಟ್ಟನ್ನು ಎದುರಿಸಿದಾಗ, ಮಹರ್, ಮರಾಠಾ, ರಜಪೂತ್, ಸಿಖ್, ಗೂರ್ಖಾ, ಡೋಗ್ರಾ ರೆಜಿಮೆಂಟ್‌ಗಳು ಸುಮ್ಮನೆ ಕುಳಿತು ಗಡಿಯಲ್ಲಿ ತಂಬಾಕು ಬೆರೆಸುತ್ತಿದ್ದವೋ ಅಥವಾ ಅಗಿಯುತ್ತಿದ್ದವೋ?' ಎಂದು ಕಟುವಾಗಿ ಪ್ರಶ್ನಿಸಿದೆ..

PM using Army for Bihar polls
ಮೋದಿ ವಿರುದ್ಧ ಕಿಡಿ ಕಾರಿದ ಶಿವಸೇನೆ
author img

By

Published : Jun 26, 2020, 4:18 PM IST

ಮುಂಬೈ (ಮಹಾರಾಷ್ಟ್ರ) : ಗಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಭಾರತೀಯ ಸೇನೆ ತೋರಿದ ಶೌರ್ಯವನ್ನೂ ಪ್ರಧಾನಿ ನರೇಂದ್ರ ಮೋದಿ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಬಳಸಿಕೊಂಡಿದ್ದಾರೆ ಎಂದು ಶಿವಸೇನೆ ಆರೋಪಿಸಿದೆ.

ಜೂನ್ 15ರಂದು ಎಲ್‌ಎಸಿಯ ಉದ್ದಕ್ಕೂ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ತೀವ್ರ ಘರ್ಷಣೆಯಲ್ಲಿ ಭಾಗಿಯಾಗಿರುವ ನಿರ್ದಿಷ್ಟ ಸೇನಾ ರೆಜಿಮೆಂಟ್‌ನ ಪಾತ್ರವನ್ನು ಎತ್ತಿ ತೋರಿಸುವ ಮೂಲಕ ಪ್ರಧಾನಿ ಮೋದಿ ಜಾತಿ ಮತ್ತು ಪ್ರಾದೇಶಿಕ ಕಾರ್ಡ್ ಬಳಕೆ ಮಾಡುತ್ತಿದೆ ಎಂದು ಹೇಳಿದೆ.

ಪಕ್ಷದ ಮುಖವಾಣಿ 'ಸಾಮ್ನಾ' ತನ್ನ ಸಂಪಾದಕೀಯದಲ್ಲಿ ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ ಬಿಹಾರ ರೆಜಿಮೆಂಟ್‌ನ ಧೈರ್ಯವನ್ನು ಉಲ್ಲೇಖಿಸಿ ಮೋದಿಯವರ ಹೇಳಿಕೆಯನ್ನು ಉಲ್ಲೇಖಿಸಿದೆ. 'ದೇಶವು ತನ್ನ ಗಡಿಯಲ್ಲಿ ಬಿಕ್ಕಟ್ಟನ್ನು ಎದುರಿಸಿದಾಗ, ಮಹರ್, ಮರಾಠಾ, ರಜಪೂತ್, ಸಿಖ್, ಗೂರ್ಖಾ, ಡೋಗ್ರಾ ರೆಜಿಮೆಂಟ್‌ಗಳು ಸುಮ್ಮನೆ ಕುಳಿತು ಗಡಿಯಲ್ಲಿ ತಂಬಾಕು ಬೆರೆಸುತ್ತಿದ್ದವೋ ಅಥವಾ ಅಗಿಯುತ್ತಿದ್ದವೋ?' ಎಂದು ಕಟುವಾಗಿ ಪ್ರಶ್ನಿಸಿದೆ.

'ನಿನ್ನೆ, ಮಹಾರಾಷ್ಟ್ರದ ಸುನಿಲ್ ಕೇಲ್ ಎಂಬ ರಾಜ್ಯ ಸಿಆರ್​ಪಿಎಫ್ ಯೋಧ ಪುಲ್ವಾಮಾದಲ್ಲಿ ಹುತಾತ್ಮರಾದರು. ಆದರೆ, ಮುಂಬರುವ ಬಿಹಾರ ಚುನಾವಣೆಯಿಂದಾಗಿ, ಭಾರತೀಯ ಸೇನೆಯಲ್ಲಿ ಜಾತಿ ಮತ್ತು ಪ್ರದೇಶಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅಂತಹ ರಾಜಕೀಯವು ಕೊರೊನಾ ವೈರಸ್​ಗಿಂತ ಗಂಭೀರವಾಗಿದೆ' ಎಂದು ಸಂಪಾದಕೀಯ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.