ETV Bharat / bharat

ಉಧಂಪುರ್ - ಬಾರಾಮುಲ್ಲಾ ರೈಲು ಯೋಜನೆ: 2022ರ ಡೆಡ್​ಲೈನ್ ನಿಗದಿ ಮಾಡಿದ ಪ್ರಧಾನಿ - 34th PRAGATI interaction

ಕಾಶ್ಮೀರ ಕಣಿವೆಯನ್ನು ರೈಲ್ವೆ ಮಾರ್ಗದೊಂದಿಗೆ ಸಂಪರ್ಕಿಸುವ ಉಧಂಪುರ್-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯ ಪ್ರಗತಿಯನ್ನು ಪರಿಶೀಲಿಸುವ ವೇಳೆ, ಎಲ್ಲ ಸಮಸ್ಯೆಗಳು ಬಗೆಹರಿದಿದ್ದು, ಕಾಮಗಾರಿ ಸಹ ವೇಗವಾಗಿ ನಡೆಯುತ್ತಿದೆ ಎಂದು ತಿಳಿಸಲಾಯಿತು. ಈ ಯೋಜನೆಯನ್ನು ಪೂರ್ಣಗೊಳಿಸಲು ಪ್ರಧಾನಿ ಆಗಸ್ಟ್ 15 2022ಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ.

Prime minister Narendra modi
ಪ್ರಧಾನಿ ನರೇಂದ್ರ ಮೋದಿ
author img

By

Published : Dec 30, 2020, 10:46 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ-ಕಾನ್ಫರೆನ್ಸ್ ಮೂಲಕ ವಿವಿಧ ಸಚಿವಾಲಯಗಳ ಕೇಂದ್ರ ಕಾರ್ಯದರ್ಶಿಗಳು ಮತ್ತು ರಾಜ್ಯ, ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳೊಂದಿಗೆ 34ನೇ ‘ಪ್ರಗತಿ’ ಸಂವಾದದ ಅಧ್ಯಕ್ಷತೆ ವಹಿಸಿದ್ದರು.

ಈ ಸಮ್ಮೇಳನದಲ್ಲಿ ಜಮ್ಮು - ಕಾಶ್ಮೀರದ ಮುಖ್ಯ ಕಾರ್ಯದರ್ಶಿ, ಬಿವಿಆರ್​​ ಸುಬ್ರಮಣ್ಯಂ ಅವರೊಂದಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ಆಡಳಿತ ಕಾರ್ಯದರ್ಶಿಗಳು ಭಾಗಿಯಾಗಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸಲಾಗುತ್ತಿರುವ ಪ್ರತಿಷ್ಠಿತ ಉಧಂಪುರ್-ಬಾರಾಮುಲ್ಲಾ ರೈಲು ಸಂಪರ್ಕ ಸೇರಿದಂತೆ 7 ಸಚಿವಾಲಯಗಳಿಗೆ ಸಂಬಂಧಿಸಿದ 11 ಯೋಜನೆಗಳನ್ನು ಪ್ರಧಾನಿ ಪರಿಶೀಲಿಸಿದರು.

ಕಾಶ್ಮೀರ ಕಣಿವೆಯನ್ನು ರೈಲ್ವೆ ಮಾರ್ಗದೊಂದಿಗೆ ಸಂಪರ್ಕಿಸುವ ಉಧಂಪುರ್-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯ ಪ್ರಗತಿಯನ್ನು ಪರಿಶೀಲಿಸುವ ವೇಳೆ, ಎಲ್ಲ ಸಮಸ್ಯೆಗಳು ಬಗೆಹರಿದಿದ್ದು, ಕಾಮಗಾರಿ ಸಹ ವೇಗವಾಗಿ ನಡೆಯುತ್ತಿದೆ ಎಂದು ತಿಳಿಸಲಾಯಿತು. ಈ ಯೋಜನೆಯನ್ನು ಪೂರ್ಣಗೊಳಿಸಲು ಆಗಸ್ಟ್ 15 2022ಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ.

ದೇಶದಾದ್ಯಂತ ಆಯುಷ್ಮಾನ್ ಭಾರತ್- ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದ ಪ್ರಧಾನಿ, ಈ ಯೋಜನೆಯು ಆರ್ಥಿಕ ಪರಿಹಾರವನ್ನು ನೀಡುವುದಲ್ಲದೇ, ಹಿಂದುಳಿದ ಕುಟುಂಬಗಳಿಗೆ ಸುರಕ್ಷತಾ ಜಾಲವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದರು. ಜಮ್ಮು ಮತ್ತು ಕಾಶ್ಮೀರವು ಇತ್ತೀಚೆಗೆ ಆಯುಷ್ಮಾನ್ ಭಾರತ್- ‘ಸೆಹತ್’ ಅನ್ನು ಪ್ರಾರಂಭಿಸಿದೆ ಮತ್ತು ಕೇಂದ್ರ ಪ್ರದೇಶದ ಎಲ್ಲಾ ನಿವಾಸಿಗಳಿಗೆ ಉಚಿತ ಆರೋಗ್ಯ ಸೌಲಭ್ಯಗಳನ್ನು ನೀಡುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಜ.1ರಂದು ಆರು ರಾಜ್ಯಗಳಲ್ಲಿ ಲೈಟ್ ಹೌಸ್ ಯೋಜನೆಗಳಿಗೆ ಪ್ರಧಾನಿ ಮೋದಿ ಅಡಿಪಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.