ಹೌರಾ (ಪಶ್ಚಿಮ ಬಂಗಾಳ): ತಮ್ಮ ಎರಡನೇ ದಿನದ ಕೋಲ್ಕತ್ತಾ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಇಂದು ಬೇಲೂರು ಮಠಕ್ಕೆ ಭೇಟಿ ನೀಡಿ ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ಗೌರವ ನಮನ ಸಲ್ಲಿಸಿದರು.
ಬೇಲೂರು ಮಠ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ನ ಪ್ರಧಾನ ಕಚೇರಿ. ಸ್ವಾಮಿ ರಾಮಕೃಷ್ಣ ಪರಮಹಂಸ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಅಲ್ಲಿ ಸಾಧು ಸಂತರನ್ನು ಭೇಟಿಯಾಗಿ ಪ್ರಾರ್ಥನೆಯಲ್ಲಿ ಭಾಗಿಯಾದರು. ಕಳೆದ ರಾತ್ರಿ ಪ್ರಧಾನಿಗಳು ಇದೇ ಮಠದಲ್ಲಿ ತಂಗಿದ್ದರು.