ETV Bharat / bharat

ಪ್ರಧಾನಿ ಮೋದಿಗೆ 70ನೇ ಜನ್ಮದಿನದ ಸಂಭ್ರಮ... ರಾಷ್ಟ್ರಪತಿ ಸೇರಿ ಹಲವರಿಂದ ಶುಭಾಶಯ - ಮೋದಿಗೆ ಶುಭ ಕೂರಿದ ನೆಪಾಳ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಅವರು 70ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮೋದಿಯವರಿಗೆ ರಾಷ್ಟ್ರಪತಿಗಳು ಹಾಗೂ ವಿಶ್ವದ ಹಲವು ನಾಯಕರು ಜನ್ಮದಿನದ ಶುಭಾಶಯ ಹೇಳಿದ್ದಾರೆ. ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ 'ಸೇವಾ ಸಪ್ತಾಹ'ವನ್ನು ಹಮ್ಮಿಕೊಂಡಿದೆ.

PM Narendra Modi turns 70
ಪ್ರಧಾನಿ ಮೋದಿಗೆ ಜನ್ಮದಿನದ ಸಂಭ್ರಮ
author img

By

Published : Sep 17, 2020, 7:37 AM IST

Updated : Sep 17, 2020, 9:07 AM IST

ನವದೆಹಲಿ: 70ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿರುವ ಪ್ರಧಾನಿ ಮೋದಿ ಅವರಿಗೆ, ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಹಲವು ನಾಯಕರು ಶುಭ ಕೋರಿದ್ದಾರೆ.

  • प्रधानमंत्री @narendramodi जी को जन्मदिन की हार्दिक बधाई और शुभकामनाएं। आपने भारत के जीवन-मूल्यों व लोकतांत्रिक परंपरा में निष्ठा का आदर्श प्रस्तुत किया है। मेरी शुभेच्छा और प्रार्थना है कि ईश्वर आपको सदा स्वस्थ व सानन्द रखे तथा राष्ट्र को आपकी अमूल्य सेवाएं प्राप्त होती रहें।

    — President of India (@rashtrapatibhvn) September 17, 2020 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್, ‘ಪ್ರಧಾನಿ ನರೇಂದ್ರ ಮೋದಿ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ನೀವು ಜೀವನದ ಮೌಲ್ಯಗಳು ಮತ್ತು ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಕ್ಕೆ ನಿಷ್ಠೆಯ ಆದರ್ಶವನ್ನು ಪ್ರಸ್ತುತಪಡಿಸಿದ್ದೀರಿ. ನಿಮ್ಮನ್ನು ಯಾವಾಗಲೂ ಆರೋಗ್ಯವಾಗಿ ಮತ್ತು ಸಂತೋಷದಿಂದ ಇಡಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ರಾಷ್ಟ್ರವು ನಿಮ್ಮ ಅಮೂಲ್ಯವಾದ ಸೇವೆಗಳನ್ನು ಸ್ವೀಕರಿಸುತ್ತಲೇ ಇರಲಿ’ ಎಂದಿದ್ದಾರೆ.

  • Wishing PM Narendra Modi ji a happy birthday.

    — Rahul Gandhi (@RahulGandhi) September 17, 2020 " class="align-text-top noRightClick twitterSection" data=" ">

ಇತ್ತ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಕೂಡ ಟ್ವೀಟ್​ ಮಾಡಿದ್ದು, ಪ್ರಧಾನಿ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು ಎಂದಿದ್ದಾರೆ.

  • Warm greetings to Prime Minister Shri @narendramodi ji on the auspicious occasion of your birthday. I wish you good health and happiness.

    We will continue working closely together to further strengthen relations between our two countries.

    — K P Sharma Oli (@kpsharmaoli) September 17, 2020 " class="align-text-top noRightClick twitterSection" data=" ">

ನೇಪಾಳ ಪ್ರಧಾನಿ ಓಲಿ, "ಜನ್ಮದಿನದ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಿ ಅವರಿಗೆ ಶುಭಾಶಯಗಳು. ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ನಾನು ಬಯಸುತ್ತೇನೆ. ನಮ್ಮ ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ" ಎಂದು ಶುಭ ಕೋರಿದ್ದಾರೆ.

ಮೋದಿ ಜನ್ಮದಿನದ ಪ್ರಯುಕ್ತ ‘ಸೇವಾ ಸಪ್ತಾಹ’ ಪ್ರಾರಂಭಿಸಿದ ಬಿಜೆಪಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 70 ನೇ ಜನ್ಮದಿನದ ಪ್ರಯುಕ್ತ ಬಿಜೆಪಿ, ವಾರದ 'ಸೇವಾ ಸಪ್ತಾಹ' ಆಯೋಜಿಸುತ್ತಿದೆ. ಸೆಪ್ಟೆಂಬರ್ 20 ರಂದು ಮುಕ್ತಾಯಗೊಳ್ಳಲಿರುವ ವಾರಪೂರ್ತಿ ಆಚರಣೆಗಳಿಗಾಗಿ, ಪಕ್ಷವು ತನ್ನ ಎಲ್ಲಾ ರಾಜ್ಯ ಘಟಕದ ಮುಖ್ಯಸ್ಥರಿಗೆ ಸುತ್ತೋಲೆ ಕಳುಹಿಸಿದೆ. ವಾರದ ಅವಧಿಯ ಅಭಿಯಾನದ ಭಾಗವಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳನ್ನು ಸೂಚಿಸಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಕಳುಹಿಸಿದ ಸುತ್ತೋಲೆಯಲ್ಲಿ '70' ಎಂಬ ವಿಷಯದೊಂದಿಗೆ ಸಾಮಾಜಿಕ ಉಪಕ್ರಮಗಳು ಸೇರಿದಂತೆ ಕಾರ್ಯಕ್ರಮಗಳ ಪಟ್ಟಿಯನ್ನು ಒಳಗೊಂಡಿದೆ. ಬಿಜೆಪಿ ಕಾರ್ಯಕರ್ತರು ಪ್ರತಿ ಬೂತ್‌ನಲ್ಲಿ 70 ಸಸಿಗಳನ್ನು ನೆಡಲಿದ್ದಾರೆ ಮತ್ತು ಏಕ-ಬಳಕೆಯ ಪ್ಲಾಸ್ಟಿಕ್ ತೊಡೆದುಹಾಕುವ ಪ್ರತಿಜ್ಞೆಯೊಂದಿಗೆ ಪ್ರತಿ ಜಿಲ್ಲೆಯ 70 ಹಳ್ಳಿಗಳಲ್ಲಿ ಸ್ವಚ್ಛತೆ ಕಾರ್ಯಕ್ರಮ ನಡೆಸಲಾಗುವುದು.

ಪ್ರಧಾನಿ ನರೇಂದ್ರ ಮೋದಿಯವರ ಜೀವನ ಮತ್ತು ಧ್ಯೇಯ ಕುರಿತು 'ಎಪ್ಪತ್ತು ವಾಸ್ತವ' ಸಮ್ಮೇಳನಗಳನ್ನು ವೆಬ್‌ನಾರ್‌ಗಳ ಮೂಲಕವೂ ಆಯೋಜಿಸಲಾಗುವುದು. ಕೋವಿಡ್ -19 ಮಾನದಂಡಗಳನ್ನು ಅನುಸರಿಸಿ ಬಿಜೆಪಿ ಸಂಸದರು, ಶಾಸಕರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೋರಲಾಗಿದೆ.

Last Updated : Sep 17, 2020, 9:07 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.