ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಹತ್ತಿಕ್ಕಲ್ಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುತ್ತಿದ್ದು, ಪ್ರಕರಣ ಹೆಚ್ಚಾಗಿ ಕಂಡು ಬಂದಿರುವ ರಾಜ್ಯಗಳನ್ನ ಈಗಾಗಲೇ ಲಾಕ್ಡೌನ್ ಮಾಡಿ ಮಹತ್ವದ ಆದೇಶ ಹೊರಡಿಸಲಾಗಿದೆ.
ವೈರಸ್ ಹೊಡೆದೊಡಿಸಲು ಪ್ರಧಾನಿ ನರೇಂದ್ರ ಮೋದಿ ಟೊಂಕ ಕಟ್ಟಿ ನಿಂತಿದ್ದು, ಬಿಡುವಿಲ್ಲದೇ ಮಹತ್ವದ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಇದು ಬೆಳಗ್ಗೆ ಮಾಧ್ಯಮ ದಿಗ್ಗಜರೊಂದಿಗೆ ವಿಡಿಯೋ ಕಾನ್ಪರೆನ್ಸ್ ನಡೆಸಿದ ನಮೋ ಇದೀಗ ವೈದ್ಯರ ಬಳಗದೊಂದಿಗೆ ವಿಡಿಯೋ ಕಾನ್ಪರೆನ್ಸ್ ನಡೆಸಿ ಮಹತ್ವದ ಮಾಹಿತಿ ಪಡೆದುಕೊಂಡಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಎಲ್ಲ ರಾಜ್ಯದ ಸಿಎಂಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ನಮೋ ಮಹತ್ವದ ಅಂಶ ಪಾಲಿಸುವಂತೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಜನತಾ ಕರ್ಫ್ಯೂ ಪಾಲನೆ ಮಾಡಲು ಕರೆ ನೀಡಿದ್ದ ನಮೋ ಇಂದು ರಾತ್ರಿ ಮತ್ತೊಮ್ಮೆ ದೇಶದ ಜನರನ್ನುದ್ದೇಶಿಸಿ ಮಾತನಾಡಲಿದ್ದು, ಮತ್ತಷ್ಟು ಮಹತ್ವದ ಅಂಶ ಹೊರಹಾಕುವ ಸಾಧ್ಯತೆ ಇದೆ.