ETV Bharat / bharat

ನಾಳೆ ಕಾಶಿ - ಕೆವಾಡಿಯ ವಿಶೇಷ ರೈಲು ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಟಿಕೆಟ್‌ ಬುಕಿಂಗ್ ಮತ್ತು ಶುಲ್ಕ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್ಲೋಡ್​ ಮಾಡಲಾಗಿದೆ. ರೈಲು ಪರಿಚಯಿಸುವುದರೊಂದಿಗೆ, ಮೊದಲ ಪ್ರಯಾಣವನ್ನು ಸ್ಮರಣೀಯವಾಗಿಸಲು ಕೆಲವು ವಿಶೇಷ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಲು ರೈಲ್ವೆ ವ್ಯವಸ್ಥೆ ಮಾಡಿದೆ.

pm-modi-
ಪ್ರಧಾನಿ ಮೋದಿ
author img

By

Published : Jan 16, 2021, 5:15 PM IST

ವಾರಣಾಸಿ (ಉತ್ತರ ಪ್ರದೇಶ): ಏಕತಾ ಪ್ರತಿಮೆ ಸಂಪರ್ಕಿಸುವ ಕಾಶಿ - ಕೆವಾಡಿಯಾ ವಿಶೇಷ ರೈಲು ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಜನವರಿ 17 ರಂದು ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.

ರೈಲು ಭಾನುವಾರ ಬೆಳಗ್ಗೆ 11:12ಕ್ಕೆ ವಾರಣಾಸಿಯಿಂದ ಹೊರಟು ಮರುದಿನ ಮಧ್ಯಾಹ್ನ 2:12ಕ್ಕೆ ಕೆವಾಡಿಯಾದ ದಾಭೋಯಿ ಜಂಕ್ಷನ್‌ಗೆ ತಲುಪಲಿದೆ. ಇದಲ್ಲದೆ ದೇಶದ ವಿವಿಧ ಸ್ಥಳಗಳಿಂದ 8 ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಈ ಕಾರ್ಯಕ್ರಮದ ಹಿನ್ನೆಲೆ ರೈಲು ನಿಲ್ದಾಣದ ವ್ಯವಸ್ಥೆ ಪರೀಕ್ಷಿಸಲು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂಜಯ್ ತ್ರಿಪಾಠಿ ಶುಕ್ರವಾರ ರೈಲು ನಿಲ್ದಾಣಕ್ಕೆ ಆಗಮಿಸಿ ಪೂರ್ವಭಾವಿ ಸಭೆ ನಡೆಸಿದ್ದಾರೆ.

ವೇಳಾಪಟ್ಟಿ ಬಿಡುಗಡೆಯಾದ ಕೂಡಲೇ ಬುಕಿಂಗ್ ಪ್ರಾರಂಭವಾಗಿದ್ದು, ಕಾಶಿ - ಕೆವಾಡಿಯಾ ರೈಲಿನ ವೇಳಾಪಟ್ಟಿ ಶುಕ್ರವಾರ ಬಿಡುಗಡೆಯಾದ ಕೂಡಲೇ ಟಿಕೆಟ್ ಕಾಯ್ದಿರಿಸುವಿಕೆ ಪ್ರಾರಂಭಗೊಂಡಿದೆ.

ಟಿಕೆಟ್‌ ಬುಕಿಂಗ್ ಮತ್ತು ಶುಲ್ಕ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್ಲೋಡ್​ ಮಾಡಲಾಗಿದೆ. ರೈಲು ಪರಿಚಯಿಸುವುದರೊಂದಿಗೆ, ಮೊದಲ ಪ್ರಯಾಣವನ್ನು ಸ್ಮರಣೀಯವಾಗಿಸಲು ಕೆಲವು ವಿಶೇಷ ಪ್ರಯಾಣಿಕರನ್ನು ಉಚಿತವಾಗಿ ಪ್ರಯಾಣಿಸಲು ರೈಲ್ವೆ ವ್ಯವಸ್ಥೆ ಮಾಡಿದೆ.

ಎಲ್‌ಎಚ್‌ಬಿ ಕೋಚ್ ಹೊಂದಿದ ವಿಶೇಷ ರೈಲು ಸೂಪರ್‌ಫಾಸ್ಟ್‌ ಮಾರ್ಗದಲ್ಲಿ ಚಲಿಸಲಿದೆ. ಈ ರೈಲು ವಾರಣಾಸಿ ಮೂಲಕ ಪ್ರಯಾಗ್​​​​​​ರಾಜ್ ಮೂಲಕ ಸತ್ನಾ, ಕಾಟ್ನಿ, ಜಬಲ್ಪುರ್, ಇಟಾರ್ಸಿ, ಭೂಸಾವಲ್, ಅಮಲ್ನರ್, ವಡೋದರಾ ಮೂಲಕ 1,614.1 ಕಿ.ಮೀ ಪ್ರಯಾಣವು 27 ಗಂಟೆಗಳಲ್ಲಿ ಪೂರ್ಣಗೊಂಡ ನಂತರ ಕೆವಾಡಿಯಾದ ದಾಭೋಯ್ ಜಂಕ್ಷನ್‌ಗೆ ತಲುಪಲಿದೆ.

ಇದನ್ನೂ ಓದಿ: ಕೋವಿಡ್​ ವ್ಯಾಕ್ಸಿನೇಷನ್​ಗೆ ಚಾಲನೆ ನೀಡಿ ಪಾಕ್​ ವಿರುದ್ಧ ವಾಗ್ದಾಳಿ ನಡೆಸಿದ ನಮೋ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.