ETV Bharat / bharat

ಏಕತಾ ಪ್ರತಿಮೆಗೆ ಸಂಪರ್ಕ ವ್ಯವಸ್ಥೆ : 8 ರೈಲುಗಳಿಗೆ ಮೋದಿಯಿಂದ ಹಸಿರು ನಿಶಾನೆ

ಪ್ರವಾಸೋದ್ಯಮದ ಅಭಿವೃದ್ಧಿ ಮತ್ತು ಏಕತಾ ಪ್ರತಿಮೆಗೆ ಉತ್ತಮ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ದೇಶದ ವಿವಿಧ ನಗರಗಳಿಂದ ಕೆವಾಡಿಯಾಗೆ ಸಂಪರ್ಕ ಕಲ್ಪಿಸುವ 8 ರೈಲುಗಳಿಗೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.

PM Modi will flag off 8 trains today
8 ರೈಲುಗಳಿಗೆ ಮೋದಿಯಿಂದ ಹಸಿರು ನಿಶಾನೆ
author img

By

Published : Jan 17, 2021, 7:41 AM IST

Updated : Jan 17, 2021, 11:50 AM IST

ನವದೆಹಲಿ: ಗುಜರಾತ್​ನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಗೆ ಉತ್ತಮ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧ ಪ್ರದೇಶಗಳಿಂದ ಕೆವಾಡಿಯಾವನ್ನು ಸಂಪರ್ಕಿಸುವ ಎಂಟು ರೈಲುಗಳಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಹಸಿರು ನಿಶಾನೆ ತೋರಿದ್ರು.

09103/04 ಕೆವಾಡಿಯಾ-ವಾರಣಾಸಿ ಮಹಾಮಣ ಎಕ್ಸ್‌ಪ್ರೆಸ್ (ವಾರದಲ್ಲಿ ಒಂದು ದಿನ), 02927/28 ದಾದರ್-ಕೆವಾಡಿಯಾ ಎಕ್ಸ್‌ಪ್ರೆಸ್ (ದೈನಂದಿನ), 09247/48 ಅಹಮದಾಬಾದ್-ಕೆವಾಡಿಯಾ ಜನಶತಾಬ್ದಿ ಎಕ್ಸ್‌ಪ್ರೆಸ್ (ದೈನಂದಿನ), 09145/46 ನಿಜಾಮುದ್ದೀನ್ - ಕೆವಾಡಿಯಾ ಎಕ್ಸ್‌ಪ್ರೆಸ್ (ವಾರಕ್ಕೆ 2 ಬಾರಿ) 09105/06 ಕೆವಾಡಿಯಾ - ರೇವಾ ಎಕ್ಸ್‌ಪ್ರೆಸ್ (ವಾರದಲ್ಲಿ ಒಂದು ದಿನ), 09119/20 ಚೆನ್ನೈ - ಕೆವಾಡಿಯಾ ಎಕ್ಸ್‌ಪ್ರೆಸ್ (ವಾರದಲ್ಲಿ ಒಂದು ದಿನ), 09107/08 ಪ್ರತಾಪನಗರ-ಕೆವಾಡಿಯಾ ಎಂಇಎಂಯು ರೈಲು (ದೈನಂದಿನ) ಮತ್ತು 09109/10 ಕೆವಾಡಿಯಾ-ಪ್ರತಾಪನಗರ ಎಂಇಎಂಯು ರೈಲು (ದೈನಂದಿನ) ಗಳಿಗೆ ಮೋದಿ ಚಾಲನೆ ನೀಡಿದ್ರು.

  • Prime Minister Narendra Modi flags off eight trains connecting Statue of Unity in Kevadia, Gujarat with different regions of the country, via video conference. pic.twitter.com/QkzIB0bnKG

    — ANI (@ANI) January 17, 2021 " class="align-text-top noRightClick twitterSection" data=" ">

ರೈಲ್ವೆ ಸಚಿವಾಲಯದ ಪ್ರಕಾರ, ಅಹಮದಾಬಾದ್-ಕೆವಾಡಿಯಾ ಜನಶತಾಬ್ದಿ ಎಕ್ಸ್‌ಪ್ರೆಸ್‌ಗೆ ಹೊಸ ಯುಗದ "ವಿಸ್ಟಾ-ಡೋಮ್ ಟೂರಿಸ್ಟ್ ಕೋಚ್" ಒದಗಿಸಲಾಗಿದ್ದು, ಇದು ಸ್ಕೈಲೈನ್‌ನ ವಿಹಂಗಮ ನೋಟವನ್ನು ನೀಡುತ್ತದೆ.

ಇವುಗಳಲ್ಲದೆ, ದಾಭೋಯ್-ಚಂದೋಡ್ ಬ್ರಾಡ್ ಗೇಜ್ ರೈಲ್ವೆ ಮಾರ್ಗ, ಚಂದೋಡ್-ಕೆವಾಡಿಯಾ ಹೊಸ ಬ್ರಾಡ್ ಗೇಜ್ ರೈಲ್ವೆ ಮಾರ್ಗ, ಹೊಸದಾಗಿ ವಿದ್ಯುದ್ದೀಕರಿಸಿದ ಪ್ರತಾಪನಗರ- ಕೆವಾಡಿಯಾ ವಿಭಾಗ ಮತ್ತು ದಬೋಯಿ, ಚಂದೋಡ್ ಮತ್ತು ಕೆವಾಡಿಯಾದ ಹೊಸ ನಿಲ್ದಾಣ ಕಟ್ಟಡಗಳನ್ನು ಕೂಡ ಉದ್ಘಾಟಿಸಿದ್ರು.

ಕೆವಾಡಿಯಾ ನಿಲ್ದಾಣವು ಹಸಿರು ಕಟ್ಟಡ ಪ್ರಮಾಣಪತ್ರ ಪಡೆದ ಭಾರತದ ಮೊದಲ ರೈಲ್ವೆ ನಿಲ್ದಾಣವಾಗಿದೆ. ಈ ಯೋಜನೆಗಳು ಈ ಪ್ರದೇಶದ ಅಭಿವೃದ್ಧಿ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ.

ಗುಜರಾತ್‌ನ ನರ್ಮದಾ ಜಿಲ್ಲೆಯ ಕೆವಾಡಿಯಾ ಬಳಿ ಇರುವ 'ಏಕತಾ ಪ್ರತಿಮೆ' ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದ್ದು, ಸ್ವಾತಂತ್ರ್ಯ ಭಾರತದ ಮೊದಲ ಗೃಹ ಸಚಿವ ಮತ್ತು ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಗೌರವಾರ್ಥ ನಿರ್ಮಾಣ ಮಾಡಲಾಗಿದೆ.

Last Updated : Jan 17, 2021, 11:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.