ETV Bharat / bharat

ಅಮೆರಿಕದಲ್ಲಿ 50 ಕಿಲೋ ವ್ಯಾಟ್​ ಸಾಮರ್ಥ್ಯದ 'ಗಾಂಧಿ ಸೋಲಾರ್​ ಪಾರ್ಕ್'​ ಉದ್ಘಾಟಿಸಲಿದ್ದಾರೆ ಮೋದಿ - ಅಮೆರಿಕಾ

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹ್ಯೂಸ್ಟನ್‌ ತಲುಪಿದ್ದಾರೆ. ಇದೇ ಸೆ.24ರಂದು ನ್ಯೂಯಾರ್ಕ್​ನಲ್ಲಿ 50 ಕಿಲೋ ವ್ಯಾಟ್​ ಸಾಮರ್ಥ್ಯದ 'ಗಾಂಧಿ ಸೋಲಾರ್​ ಪಾರ್ಕ್ ಅನ್ನು ಅವರು ಉದ್ಘಾಟಿಸಲಿದ್ದಾರೆ.

ಗಾಂಧಿ ಸೋಲಾರ್​ ಪಾರ್ಕ್ ಉದ್ಘಾಟಿಸಲಿರುವ ಮೋದಿ
author img

By

Published : Sep 22, 2019, 7:58 AM IST

ನ್ಯೂಯಾರ್ಕ್​(ಯುಎಸ್​ಎ) : ​ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೆ.24ರಂದು ನ್ಯೂಯಾರ್ಕ್​ನಲ್ಲಿ 50 ಕಿಲೋ ವ್ಯಾಟ್​ ಸಾಮರ್ಥ್ಯದ 'ಗಾಂಧಿ ಸೋಲಾರ್​ ಪಾರ್ಕ್' ಅನ್ನು ಉದ್ಘಾಟಿಸಲಿದ್ದಾರೆ.

ನವೀಕರಿಸಬಹುದಾದ ಶಕ್ತಿಯನ್ನು ಹೆಚ್ಚಿಸುವ ಹಾಗೂ ಹವಾಮಾನ ಬದಲಾವಣೆಯನ್ನು ಎದುರಿಸುವ ಭಾರತದ ಬದ್ಧತೆಯ ಭಾಗವಾಗಿ ಮೋದಿ ಅವರು ಅಮೆರಿಕದಲ್ಲಿ ಈ ಸೋಲಾರ್​ ಪಾರ್ಕ್ಅನ್ನು ಉದ್ಘಾಟಿಸಲಿದ್ದಾರೆ.

ಸೌರಫಲಕ ಮತ್ತು ಹಸಿರು ಛಾವಣಿಯ ಯೋಜನೆಗಾಗಿ ಭಾರತವು ಒಂದು ಮಿಲಿಯನ್ ಯುಎಸ್​ ಡಾಲರ್​ಅನ್ನು ಅಮೆರಿಕಕ್ಕೆ ಉಡುಗೊರೆಯಾಗಿ ನೀಡಿದೆ. ಇದರಡಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ನ್ಯೂಯಾರ್ಕ್​ನಲ್ಲಿ ಸೌರಶಕ್ತಿಯನ್ನು ಉತ್ಪಾದಿಸಲಾಗುತ್ತಿದೆ.

ಗಾಂಧಿ ಸೋಲಾರ್​ ಪಾರ್ಕ್ ಉದ್ಘಾಟಿಸಲಿರುವ ಮೋದಿ

ಈ ಸ್ಥಾವರದ ವಾರ್ಷಿಕ ವಿದ್ಯುತ್​ ಉತ್ಪಾದನೆಯು 86,244 kWh ಆಗಿದ್ದು, ಕಲ್ಲಿದ್ದಿಲಿನಿಂದ ಬಿಡುಗಡೆಯಾಗುವ ಸುಮಾರು 30 ಸಾವಿರದ 200 ಕೆಜಿಯಷ್ಟು ಇಂಗಾಲದ ಡೈ ಆಕ್ಸೈಡ್​ ಅನ್ನು ತಡೆಗಟ್ಟಿದಂತಾಗುತ್ತದೆ. ಒಟ್ಟು 193 ದ್ಯುತಿವಿದ್ಯುಜ್ಜನಕ ಫಲಕಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಫಲಕವು 71.41 ಕಿ.ವ್ಯಾ. ಗಾತ್ರವನ್ನು ಹೊಂದಿದೆ.

ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಸುಸ್ಥಿರ ಶಕ್ತಿಯನ್ನು ಉತ್ತೇಜಿಸಲು ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಸೌರ ಯೋಜನೆಗೆ ಭಾರತ ಧನಸಹಾಯ ನೀಡಿದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಈ ಹಿಂದೆ ಟ್ವೀಟ್ ಮಾಡಿದ್ದರು.

ಮೋದಿಯವರು ಶನಿವಾರ ಮಧ್ಯಾಹ್ನ ಹ್ಯೂಸ್ಟನ್‌ ತಲುಪಿದ್ದಾರೆ. ಇಂದು ಅವರು 50,000 ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸೆಪ್ಟೆಂಬರ್ 23 ರಂದು ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಆಯೋಜಿಸಿರುವ 'ಹವಾಮಾನ ಶೃಂಗಸಭೆ' ಸೇರಿದಂತೆ, ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

Intro:Body:

solar

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.