ನವದೆಹಲಿ: ಕೋವಿಡ್ -19 ಹಿನ್ನೆಲೆ ಚೀನಾದ ನಗರಗಳಿಂದ ಅನೇಕ ಕಂಪನಿಗಳು ನಿರ್ಗಮಿಸುವ ಸಾಧ್ಯತೆ ಇದ್ದು, ರಾಜ್ಯಗಳು ಹೂಡಿಕೆಗಳಿಗೆ ಸಿದ್ಧವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಿಎಂಗಳೊಂದಿಗೆ ನಡೆದ ಸಂವಾದದಲ್ಲಿ ತಿಳಿಸಿದ್ದಾರೆ.
ಹೇರಳವಾದ ಮಾನವ ಸಂಪನ್ಮೂಲ ಮತ್ತು ಸುಧಾರಿತ ಮೂಲಸೌಕರ್ಯ ಹೊಂದಿರುವ ಭಾರತದ ರಾಜ್ಯಗಳು ಹೂಡಿಕೆಗಳಿಗೆ ಸಿದ್ಧವಾಗಬೇಕು ಎಂದು ಪ್ರಧಾನಿ ಸೂಚಿಸಿದರು.
"ನಿಮಗೆಲ್ಲರಿಗೂ ತಿಳಿದಿರುವಂತೆ, ಕೊರೊನಾ ವೈರಸ್ ಬಿಕ್ಕಟ್ಟಿನ ನಂತರ ಹಲವಾರು ಕೈಗಾರಿಕೆಗಳು ಚೀನಾವನ್ನು ತೊರೆಯಲಿವೆ. ನಾವೆಲ್ಲರೂ ರಾಜ್ಯಗಳಲ್ಲಿ ಹೂಡಿಕೆ ಮಾಡುವ ಸಾಧ್ಯತೆಗಾಗಿ ಸಮಗ್ರ ಯೋಜನೆಯಲ್ಲಿ ಕೆಲಸ ಮಾಡಬೇಕು" ಎಂದು ಪ್ರಧಾನಿ ಸಿಎಂಗಳಿಗೆ ಸೂಚಿಸಿದ್ದಾರೆ ಎಂದು ಮೂಲಕಗಳು ತಿಳಿಸಿವೆ.
ಕೋವಿಡ್ -19ನಂತಹ ಸವಾಲುಗಳನ್ನು ನಿಭಾಯಿಸಲು ದೇಶವು ಸ್ವಾವಲಂಬಿಯಾಗಬೇಕು ಎಂದು ಪ್ರಧಾನಿ ಮೋದಿ ಸಂವಾದದಲ್ಲಿ ಹೇಳಿದ್ದಾರೆ.