ನವದೆಹಲಿ: ದೆಹಲಿ ಸರ್ಕಾರ, ಕೇಂದ್ರದ ಪ್ರಧಾನಮಂತ್ರಿ ಆವಾಸ್ ಯೋಜನೆ ಜಾರಿ ಮಾಡಲು ಬಿಡಲಿಲ್ಲ. ಅವರು ಅಧಿಕಾರದಲ್ಲಿ ಇರುವವರೆಗೂ ಕಲ್ಯಾಣ ಯೋಜನೆಗಳನ್ನ ಜಾರಿ ಮಾಡಲು ಬಿಡುವುದಿಲ್ಲ. ರಾಜಕೀಯ ಬಿಟ್ಟು ಅವರಿಗೆ ಬೇರೇನೂ ಗೊತ್ತಿಲ್ಲ ಎಂದು ಕೇಜ್ರಿವಾಲ್ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಕಾರ್ಡೂಮಾದಲ್ಲಿ ನಡೆಯತ್ತಿರುವ ಬೃಹತ್ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ಮೋದಿ, ಎಲ್ಲಿ ಜನರು ನಾನು ನೀಡಿದ ಭರವಸೆ ಏನು? ಅವುಗಳಲ್ಲಿ ಎಷ್ಟು ಭರವಸೆ ಈಡೇರಿಸಿದ್ದಾರೆ ಎಂದು ಪ್ರಶ್ನೆ ಮಾಡುತ್ತಾರೋ? ಎಂಬ ಉದ್ದೇಶದಿಂದ ಆಮ್ ಆದ್ಮಿ ಪಕ್ಷ ವೆಬ್ಸೈಟ್ನಿಂದ ತಮ್ಮ ಹಳೆಯ ಪ್ರಣಾಳಿಕೆಯನ್ನ ತೆಗೆದುಹಾಕಿದೆ. 'ಕೇಜ್ರಿವಾಲ್ ಸರ್ ನೀವು ಪ್ರಣಾಳಿಕೆಯನ್ನ ಬಚ್ಚಿಡಿ ಆದರೆ, ದೆಹಲಿ ಜನತೆ ಮತ್ತು ನಾನು, ಪ್ರಶ್ನೆ ಮಾಡುವುದನ್ನ ನಿಲ್ಲಿಸುವುದಿಲ್ಲ ಎಂದು ಮೋದಿ ಹೇಳಿದರು.
-
PM Modi: Article 370 was abrogated after 70 years, Ramjanambhoomi verdict came after 70 years, Kartarpur Sahab corridor was made after 70 years, India-Bangladesh border issue solved after 70 years, CAA came after 70 yrs, War memorial and Police memorial made after 50-60 years pic.twitter.com/KD8ArqFi0r
— ANI (@ANI) February 3, 2020 " class="align-text-top noRightClick twitterSection" data="
">PM Modi: Article 370 was abrogated after 70 years, Ramjanambhoomi verdict came after 70 years, Kartarpur Sahab corridor was made after 70 years, India-Bangladesh border issue solved after 70 years, CAA came after 70 yrs, War memorial and Police memorial made after 50-60 years pic.twitter.com/KD8ArqFi0r
— ANI (@ANI) February 3, 2020PM Modi: Article 370 was abrogated after 70 years, Ramjanambhoomi verdict came after 70 years, Kartarpur Sahab corridor was made after 70 years, India-Bangladesh border issue solved after 70 years, CAA came after 70 yrs, War memorial and Police memorial made after 50-60 years pic.twitter.com/KD8ArqFi0r
— ANI (@ANI) February 3, 2020
70 ವರ್ಷಗಳ ನಂತರ 370ನೇ ವಿಧಿ ರಧುಗೊಳಿಸಲಾಯ್ತು. 70 ವರ್ಷಗಳ ನಂತರ ರಾಮ ಜನ್ಮಭೂಮಿ ತೀರ್ಪು ಬಂತು. 70 ವರ್ಷಗಳ ನಂರತ ಕರ್ತಾರ್ಪುರ್ ಕಾರಿಡಾರ್ ಬಂದಿದೆ. ಭಾರತ ಮತ್ತು ಬಾಂಗ್ಲಾ ಗಡಿ ಸಮಸ್ಯೆ ಇತ್ಯರ್ಥವಾಗಲು 70 ವರ್ಷ ಬೇಕಾಯ್ತು. ಸಿಎಎ ಜಾರಿಗೆ ಬರಲು 70 ವರ್ಷ ಬೇಕಾಯ್ತು. 50-60 ವರ್ಷಗಳ ನಂತರ ಯುದ್ಧ ಸ್ಮಾರಕ ಮತ್ತು ಪೊಲೀಸ್ ಸ್ಮಾರಕ ನಿರ್ಮಾಣ ಮಾಡಲಾಯ್ತು ಎಂದು ಮೋದಿ ಹೇಳಿದ್ದಾರೆ.
ಜೀವನದಲ್ಲಿ ತಮ್ಮ ಮನೆಯ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಎಂದಿಗೂ ಯೋಚಿಸದ ಜನರು, ಈಗ ಅವರ ಕನಸುಗಳು ನನಸಾಗುತ್ತಿರುವುದನ್ನ ಕಾಣುತ್ತಿದ್ದಾರೆ. ದೆಹಲಿಯ ಜನರ ಮತ ದೇಶದ ಬದಲಾವಣೆಯನ್ನು ಬೆಂಬಲಿಸಿದೆ. ಜನರ ಮತವು ನಮ್ಮ ದೆಹಲಿಯನ್ನು ಬದಲಾಯಿಸುತ್ತದೆ ಮತ್ತು ನಿಮ್ಮ ಮತ ನಿಮ್ಮನ್ನ ಸುರಕ್ಷಿತವಾಗಿರಿಸುವುದಲ್ಲದೆ ಇಲ್ಲಿ ವಾಸಿಸುವ ಜನರ ಜೀವನವನ್ನು ಸುಲಭಗೊಳಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
-
Prime Minister Narendra Modi:The Delhi Govt is not letting Pradhan Mantri Awas Yojana be implemented here. Till this Govt is in power in Delhi they will continue to put obstacles in welfare work. They don't know anything except playing politics. pic.twitter.com/C669bDqTQ3
— ANI (@ANI) February 3, 2020 " class="align-text-top noRightClick twitterSection" data="
">Prime Minister Narendra Modi:The Delhi Govt is not letting Pradhan Mantri Awas Yojana be implemented here. Till this Govt is in power in Delhi they will continue to put obstacles in welfare work. They don't know anything except playing politics. pic.twitter.com/C669bDqTQ3
— ANI (@ANI) February 3, 2020Prime Minister Narendra Modi:The Delhi Govt is not letting Pradhan Mantri Awas Yojana be implemented here. Till this Govt is in power in Delhi they will continue to put obstacles in welfare work. They don't know anything except playing politics. pic.twitter.com/C669bDqTQ3
— ANI (@ANI) February 3, 2020
ಮೊನ್ನೆಯಷ್ಟೆ ಮಂಡನೆಯಾದ ಕೇಂದ್ರ ಬಜೆಟ್ ಈ ವರ್ಷಕ್ಕೆ ಮಾತ್ರವಲ್ಲದೆ, ಇಡೀ ದಶಕಕ್ಕೂ ನಿರ್ದೇಶನ ನೀಡಲಿದೆ. ದೆಹಲಿಯ ಯುವಕರು, ವ್ಯಾಪಾರಿಗಳು, ಮಧ್ಯಮ ವರ್ಗದವರು, ಬಡವರು ಮತ್ತು ಮಹಿಳೆಯರು ಈ ಬಜೆಟ್‌ನ ಲಾಭ ಪಡೆಯಲಿದ್ದಾರೆ.
ದೆಹಲಿ ಸೇರಿದಂತೆ ದೇಶದ ವ್ಯಾಪಾರಿಗಳಿಂದ ತೆರಿಗೆ ಒತ್ತಡ ಎದುರಾಗಿದೆ ಎಂಬ ದೂರು ಕೇಳಿ ಬಂದಿತ್ತು. ಹೀಗಾಗಿ ಕಳೆದ ವರ್ಷ ಪರೋಕ್ಷ ತೆರಿಗೆ ಇತ್ಯರ್ಥ ಯೋಜನೆಯನ್ನು ಪ್ರಾರಂಭಿಸಿದ್ದೆವು. ಇದಾದ ನಂತರ ನೇರ ತೆರಿಗೆಗೂ ಇಂತಹ ಯೋಜನೆಯನ್ನು ಪ್ರಾರಂಭಿಸಬೇಕು ಎಂಬ ಬೇಡಿಕೆ ಇತ್ತು. ಈ ಬಜೆಟ್‌ನಲ್ಲಿ ನಾವು ಅದನ್ನ ಪೂರೈಸಿದ್ದೇವೆ ಎಂದಿದ್ದಾರೆ.