ETV Bharat / bharat

ಮತ್ತೆ ತಲೆದೂರಿದ ಕೋವಿಡ್ ಬಿಕ್ಕಟ್ಟು: ಲಸಿಕೆ ಹಂಚಿಕೆ ಚರ್ಚಿಸಲು ಸಿಎಂಗಳ ಜತೆ ಪ್ರಧಾನಿ ಮೋದಿ ಸಭೆ

ಹರಿಯಾಣ, ದೆಹಲಿ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ ಮತ್ತು ಕೇರಳದ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ವರ್ಚ್ಯುವಲ್​​ ಸಭೆ ನಡೆಸಲಿದ್ದಾರೆ. ಈ ಸಭೆಯ ನಂತರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಲಸಿಕೆ ವಿತರಣೆಯ ಪೂರ್ವಭಾವಿ ಕಾರ್ಯಕ್ರಮ ಕುರಿತು ಮಾತುಕತೆ ನಡೆಸಲಿದ್ದಾರೆ.

Modi
ಮೋದಿ
author img

By

Published : Nov 24, 2020, 9:59 AM IST

Updated : Nov 24, 2020, 1:20 PM IST

ನವದೆಹಲಿ: ದೇಶದಲ್ಲಿ ಮತ್ತೆ ಕೊರೊನಾ ವೈರಸ್ ಪ್ರಕರಣಗಳ ಏರಿಕೆ ಆಗುತ್ತಿರುವ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಖ್ಯಮಂತ್ರಿಗಳ ಜೊತೆ ವರ್ಚ್ಯುವಲ್ ಸಭೆ ಕರೆದಿದ್ದಾರೆ.

ಹರಿಯಾಣ, ದೆಹಲಿ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ ಮತ್ತು ಕೇರಳದ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ವರ್ಚ್ಯುವಲ್​​ ಸಭೆ ನಡೆಸಲಿದ್ದಾರೆ. ಈ ಸಭೆಯ ನಂತರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಲಸಿಕೆ ವಿತರಣೆಯ ಪೂರ್ವಭಾವಿ ಕಾರ್ಯಕ್ರಮ ಕುರಿತು ಮಾತುಕತೆ ನಡೆಸಲಿದ್ದಾರೆ.

ಕೊರೊನಾ ಲಸಿಕೆ ಕುರಿತು ಮೋದಿ ಐತಿಹಾಸಿಕ ತೀರ್ಮಾನ ನಿರೀಕ್ಷೆ: ಸಿಎಂ ಬಿಎಸ್​ವೈ ವಿಶ್ವಾಸ

ಕೊರೊನಾ ವೈರಸ್ ಲಸಿಕೆ ಲಭ್ಯವಾದಾಗ ತ್ವರಿತ ಮತ್ತು ಪರಿಣಾಮಕಾರಿ ವಿತರಿಸಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಐದು ಲಸಿಕೆ ಮೆಂಬರ್​​ಗಳು ಭಾರತದಲ್ಲಿ ಅಭಿವೃದ್ಧಿಯ ಹಂತದಲ್ಲಿವೆ. ಅದರಲ್ಲಿ ನಾಲ್ಕು ಲಸಿಕೆಗಳು ಹಂತ II / III ಮತ್ತು ಒಂದು ಮೆಂಬರ್​ ಸ್ಟೇಜ್​ -1/ II ಕ್ಲಿನಿಕಲ್​ ಪ್ರಯೋಗದಲ್ಲಿ ಇದ್ದಾರೆ.

ಕೋವಿಡ್ ಪ್ರಕರಣಗಳು ಒಂಬತ್ತು ದಶಲಕ್ಷ ಮೀರಿರುವುದರಿಂದ ಲಸಿಕೆ ವಿತರಣಾ ವ್ಯವಸ್ಥೆಯನ್ನು ಆಧರಿಸಿ ಕೇಂದ್ರವು ಯುದ್ಧೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿದೆ. ಕಳೆದ 24 ಗಂಟೆಗಳಲ್ಲಿ 44,000 ಹೊಸ ಕೋವಿಡ್ -19 ಪ್ರಕರಣಗಳೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 91,39,866 ಏರಿಕೆಯಾಗಿದೆ.

Last Updated : Nov 24, 2020, 1:20 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.