ಚಂಪಾರಣ್: ಬಿಹಾರದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಘಟಾನುಘಟಿ ನಾಯಕರುಗಳು ಪ್ರಚಾರದಲ್ಲಿ ತೊಡಗಿದ್ದಾರೆ. ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕೈ ಮುಖಂಡ ರಾಹುಲ್ ಗಾಂಧಿ ಪ್ರಚಾರ ನಡೆಸಿದರು.
ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈಗ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ಪ್ರಧಾನಿ ಭಾಷಣಗಳಲ್ಲಿ ಹೇಳುವುದಿಲ್ಲ. ಅವರಿಗೆ ಈಗ ಗೊತ್ತಾಗಿದೆ ನಾನು ಸುಳ್ಳು ಭರವಸೆ ನೀಡಿದ್ದೆ ಎಂದು. ಹೀಗಾಗಿ ಬಿಹಾರಕ್ಕೆ ಬಂದು ನಾನು ಇಲ್ಲಿಗೆ ಬಂದು, ಎರಡು ಕೋಟಿ ಉದ್ಯೋಗಗಳನ್ನು ನೀಡುತ್ತೇನೆ ಎಂದು ಹೇಳಿದರೆ, ಜನರು ಅವರನ್ನು ಓಡಿಸುತ್ತಾರೆ ಎಂದು ಹೇಳಿದರು.