ಅಹಮದಾಬಾದ್: ದಯಮಾಡಿ ಪ್ರತಿಪಕ್ಷಗಳು ಕಾಮನ್ ಸೆನ್ಸ್ ಉಪಯೋಗಿಸಿ ಟೀಕೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. ಅವತ್ತು ನಾನು ಹೇಳಿದ್ದೇನು ಎಂದರೆ, ಏರ್ಸ್ಟ್ರೈಕ್ ಸಮಯದಲ್ಲಿ ರಫೇಲ್ ಇದ್ದಿದ್ದರೆ ಯಾವುದೇ ನಮ್ಮ ಏರ್ಫೈಟರ್ಗಳನ್ನ ಕಳೆದುಕೊಳ್ಳಬೇಕಾಗಿದ್ದಿಲ್ಲ ಎನ್ನುವ ಮೂಲಕ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಪ್ರತಿಪಕ್ಷಗಳು ಮೋದಿ ಅವರ ಹೇಳಿಕೆಯನ್ನ ಟೀಕಿಸಿದ್ದವು. ಫೆಬ್ರವರಿ 27 ರಂದು ಬಾಲಕೋಟ್ ಮೇಲೆ ನಡೆದ ದಾಳಿ ಸಂದರ್ಭದಲ್ಲಿ ರಫೇಲ್ ಇದ್ದಿದ್ದರೇ ಕಥೆಯೇ ಬೇರೆ ಇರುತ್ತಿತ್ತು ಎಂಬುದಾಗಿ ಮೋದಿ ನೀಡಿದ್ದ ಹೇಳಿಕೆಯನ್ನ ಪ್ರತಿಪಕ್ಷಗಳು ಟೀಕಿಸಿದ್ದವು.
ಈ ಹಿನ್ನೆಲೆಯಲ್ಲಿ ಮಾತನಾಡಿರುವ ಪ್ರಧಾನಿ, ದಯಮಾಡಿ ಸಾಮಾನ್ಯಜ್ಞಾನ ಉಪಯೋಗಿಸಿ, ಏರ್ಸ್ಟ್ರೈಕ್ ಸಮಯದಲ್ಲಿ ರಫೇಲ್ ಇದ್ದಿದ್ದರೆ ಯಾವುದೇ ನಮ್ಮ ಏರ್ಫೈಟರ್ಗಳನ್ನ ಕಳೆದುಕೊಳ್ಳಬೇಕಾಗಿದ್ದಿಲ್ಲ ಎಂಬುದನ್ನಷ್ಟೇ ಎನ್ನುವ ಮೂಲಕ ತಮ್ಮ ಮಾತಿನ ಹಿಂದಿರುವ ಉದ್ದೇಶವನ್ನ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಪ್ರತಿಪಕ್ಷಗಳ ಟೀಕೆಗೂ ಉತ್ತರಿಸಿದ್ದಾರೆ.
ಇದೇ ವೇಳೆ ಮಾತನಾಡಿರುವ ಅವರು, ಉಗ್ರವಾದವನ್ನ ನೋಡಿಕೊಂಡು ಭಾರತ ಸುಮ್ಮನೇ ಕುಳಿತುಕೊಳ್ಳಲು ಆಗಲ್ಲ. ಭಯೋತ್ಪಾದನೆಯನ್ನ ಬೇರು ಸಮೇತ ಕಿತ್ತೊಗೆಯಬೇಕಾಗಿದೆ. ಪಾಕಿಸ್ತಾನದ ಸುಳ್ಳುಗಳಿಗೂ ಉತ್ತರ ನೀಡಬೇಕಿದೆ. ಈ ಹಿನ್ನೆಲೆಯಲ್ಲೇ ನಾನು ರಫೇಲ್ ಬಗ್ಗೆ ಪ್ರಸ್ತಾಪಿಸಿದ್ದೆ, ಆದರೆ ಪ್ರತಿಪಕ್ಷಗಳು ಮೋದಿ ನಮ್ಮ ವಾಯುಪಡೆ ದಾಳಿಯನ್ನೇ ಪ್ರಶ್ನಿಸಿದಂತಿದೆ ಎಂದು ಹೇಳಿದ್ದಾರೆ ಎಂಬುದನ್ನ ನೆನಪಿಸಿಕೊಂಡರು.
ನಮ್ಮ ನೆರೆಯ ರಾಷ್ಟ್ರದಲ್ಲಿ ಭಯೋತ್ಪಾದನೆ ಎಂಬ ರೋಗ ತೀರಾ ಆಳದಲ್ಲಿ ಬೇರು ಬಿಟ್ಟಿದೆ. ಹೀಗಾಗಿ ಅದನ್ನ ಗುಣಪಡಿಸುವುದು ತುಸು ಕಷ್ಟದ ಕೆಲಸ ಎಂದು ಪ್ರಧಾನಿ ಇದೇ ವೇಳೆ ಅಭಿಪ್ರಾಯಪಟ್ಟರು. ಉಗ್ರವಾದದ ಮೆಂಟರ್ಗಳು ಇಂಡಿಯಾ ಹಾಗೂ ಅದರಾಚೆ ನಾಶ ಮಾಡಲು ಹೊರಟರೆ ಅದನ್ನು ನೋಡುತ್ತಾ ಕುಳಿತುಕೊಳ್ಳಲು ಸಾಧ್ಯವೇ ಆಗಲ್ಲ ಎಂದು ಮೋದಿ ಗುಡುಗಿದರು.