ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕಿ ಬಾತ್'ನ 68ನೇ ಆವೃತ್ತಿಗೆ ಜನರು ತಮ್ಮ ಮೌಲ್ಯಯುತವಾದ ಸಲಹೆ, ಯೋಚನೆ ಮತ್ತು ಯೋಜನೆಗಳನ್ನ ಪ್ರಧಾನಿ ಜತೆ ಹಂಚಿಕೊಳ್ಳಬಹುದು. ಜನ ಸಾಮಾನ್ಯರು ತಮ್ಮ ಯೋಚನೆಗಳನ್ನ ಹಂಚಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವಕಾಶ ಮಾಡಿಕೊಟ್ಟಿದ್ದಾರೆ.
ಪ್ರತಿ ತಿಂಗಳ ಕೊನೆಯ ಭಾನುವಾರದಂದು ನಡೆಯುವ ಕಾರ್ಯಕ್ರಮವು ಈ ತಿಂಗಳು ಆಗಸ್ಟ್ 30 ರಂದು ನಡೆಯಲಿದೆ.
ನಮೋ ಅಥವಾ ಮೈ-ಗವರ್ನ್ಮೆಂಟ್ ಆ್ಯಪ್‌ನಲ್ಲಿ ತಮ್ಮ ಯೋಜನೆ - ಯೋಚನೆ ಹಾಗೂ ಸಲಹೆಗಳನ್ನ ಬರೆಯುವ ಮೂಲಕ ಅಥವಾ 1800-11-7800 ಗೆ ಕರೆ ಮಾಡಿ ತಮ್ಮ ಸಂದೇಶಗಳನ್ನು ರೆಕಾರ್ಡ್ ಮಾಡುವ ಮೂಲಕ, ಜನರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಲಹೆ - ಸೂಚನೆ - ಹೊಸ ಆಲೋಚನೆಗಳನ್ನ ಹಂಚಿಕೊಳ್ಳುವುದಕ್ಕಾಗಿ ಇದೇ ಆಗಸ್ಟ್ 10 ರಿಂದಲೇ ದೂರವಾಣಿ ಮಾರ್ಗಗಳು ತೆರದಿರುತ್ತವೆ ಎಂದೂ ಅವರು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ "ಆಗಸ್ಟ್ 30ರಂದು ನಡೆಯಲಿರುವ ಈ ತಿಂಗಳ # ಮನ್ ಕಿ ಬಾತ್‌ನಲ್ಲಿ ಏನು ಚರ್ಚಿಸಬೇಕು ಎಂದು ನೀವು ಭಾವಿಸುತ್ತೀರಿ? ಅದನ್ನ 1800-11-7800 ನಂಬರ್ಗೆ ಡಯಲ್ ಮಾಡಿ ನಿಮ್ಮ ಸಂದೇಶ ರೆಕಾರ್ಡ್ ಮಾಡಿ. ಇಲ್ಲವೇ ನೀವು ನಮೋ ಅಪ್ಲಿಕೇಶನ್ ಅಥವಾ ಮೈ -ಗವರ್ನಮೆಂಟ್ನಲ್ಲಿಯೂ ನಿಮ್ಮ ಅಭಿಪ್ರಾಯಗಳನ್ನ ದಾಖಲಿಸಬಹುದು ಎಂದಿರುವ ಪ್ರಧಾನಿ ನಿಮ್ಮ ಆಲೋಚನೆಗಳನ್ನು ಎದುರು ನೋಡುತ್ತಿದ್ದೇವೆ" ಎಂದಿದ್ದಾರೆ.