ETV Bharat / bharat

ಜಪಾನ್ ಪ್ರಧಾನಿ ಶಿಂಜೋ ಅಬೆ ಜೊತೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ

ಜಪಾನ್ ಹಾಗೂ ಭಾರತದ ನಡುವೆ ಲಾಜಿಸ್ಟಿಕ್ಸ್ ಸಪೋರ್ಟ್​ ಅಗ್ರಿಮೆಂಟ್ ಬುಧವಾರ ನಡೆದಿದೆ. ಇದರ ಬೆನ್ನಲ್ಲೇ ಜಪಾನ್ ಪ್ರಧಾನಿ ಶಿಂಜೋ ಅಬೆಯೊಂದಿಗೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ ನಡೆಸಿದ್ದಾರೆ.

author img

By

Published : Sep 10, 2020, 7:20 PM IST

modi, shinjo abe
ಪ್ರಧಾನಿ ಮೋದಿ, ಶಿಂಜೋ ಅಬೆ

ನವದೆಹಲಿ: ಪ್ರಧಾನಿ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಗೆ ಅವರ ಕೊಡುಗೆಯನ್ನು ಹಾಡಿ ಹೊಗಳಿದ್ದಾರೆ.

ಇದೇ ವೇಳೆ ಉಭಯ ದೇಶಗಳ ಸಹಕಾರ ಹಾಗೂ ಸಹಭಾಗಿತ್ವದಲ್ಲಿ ಇರುವ ವಿಶ್ವಾಸ ಭವಿಷ್ಯದಲ್ಲಿ ಮುಂದುವರೆಯಲಿದೆ ಎಂದು ಇಬ್ಬರೂ ನಾಯಕರು ಭರವಸೆ ನೀಡಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಭಾರತದ ಸಶಸ್ತ್ರ ಪಡೆ ಹಾಗೂ ಜಪಾನ್​ನ ಸ್ವರಕ್ಷಣಾ ಪಡೆಯ ನಡುವೆ ಇತ್ತೀಚೆಗೆ ಲಾಜಿಸ್ಟಿಕ್ಸ್ ಸಪೋರ್ಟ್​ ಅಗ್ರಿಮೆಂಟ್​​​​ ನಡೆದಿದ್ದು, ಈ ಒಪ್ಪಂದವನ್ನು ಉಭಯ ದೇಶಗಳ ನಾಯಕರು ಸ್ವಾಗತಿಸಿದ್ದಾರೆ.

ಈ ಒಪ್ಪಂದವು ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸುರಕ್ಷತೆ ನೆಲೆಸಲು ಸಹಕಾರಿಯಾಗುತ್ತದೆ ಎಂದು ಉಭಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಈ ಒಪ್ಪಂದಕ್ಕಾಗಿ ಹಲವು ವರ್ಷಗಳ ಮಾತುಕತೆ ನಡೆದಿತ್ತು. ಬುಧವಾರವಷ್ಟೇ ಎರಡೂ ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದರಿಂದಾಗಿ ಎರಡೂ ರಾಷ್ಟ್ರಗಳ ಸೈನಿಕರಿಗೆ ಪರಸ್ಪರರ ನೆಲೆಗಳಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿದೆ.

ಶಿಂಜೋ ಅಬೆ ಹಿಂದಿನ ತಿಂಗಳು ಅನಾರೋಗ್ಯದ ಕಾರಣಕ್ಕೆ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.