ಶಿವಸಾಗರ (ಅಸ್ಸೋಂ): ಮುಂಬರುವ ಅಸ್ಸೋಂ ವಿಧಾನಸಭೆ ಚುನಾವಣೆ ಹಿನ್ನೆಲೆ ಇಲ್ಲಿನ ಶಿವಸಾಗರದಲ್ಲಿ ಆಯೋಜನೆಯಾಗಿದ್ದ 'ವಿಜಯ ಸಂಕಲ್ಪ ಯಾತ್ರೆ'ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಶಿವಸಾಗರದ 1.06 ಲಕ್ಷ ಜನರಿಗೆ ಭೂ ಹಂಚಿಕೆ ಪ್ರಮಾಣಪತ್ರವನ್ನು ಪಿಎಂ ಮೋದಿ ವಿತರಿಸಿದರು.
ಬಳಿಕ ಮಾತನಾಡಿದ ಪ್ರಧಾನಿ, ಜನರಲ್ಲಿನ ಆತ್ಮ ವಿಶ್ವಾಸವೊಂದೇ 'ಆತ್ಮನಿರ್ಭರ ಅಸ್ಸೋಂ'ಗೆ ದಾರಿಯಾಗಲಿದೆ. ರಾಜ್ಯದ ಜನಸಂಖ್ಯೆಯ ಶೇ. 40 ರಷ್ಟು ಜನರು ಕೇಂದ್ರ ಸರ್ಕಾರದ 'ಆಯುಷ್ಮಾನ್ ಭಾರತ' ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಅಸ್ಸೋಂ ಭಾಷೆ, ಸಾಹಿತ್ಯ, ಸಂಸ್ಕೃತಿದ ಸಂರಕ್ಷಣೆಯ ಉದ್ದೇಶವನ್ನು ಮೊದಲಿನಿಂದಲೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇಟ್ಟುಕೊಂಡಿದೆ ಎಂದು ಹೇಳಿದರು.
-
Prime Minister Narendra Modi distributes land allotment certificates to indigenous people, in Sivasagar, Assam pic.twitter.com/UzdagGuu3d
— ANI (@ANI) January 23, 2021 " class="align-text-top noRightClick twitterSection" data="
">Prime Minister Narendra Modi distributes land allotment certificates to indigenous people, in Sivasagar, Assam pic.twitter.com/UzdagGuu3d
— ANI (@ANI) January 23, 2021Prime Minister Narendra Modi distributes land allotment certificates to indigenous people, in Sivasagar, Assam pic.twitter.com/UzdagGuu3d
— ANI (@ANI) January 23, 2021
ಕೊರೊನಾ ಸಾಂಕ್ರಾಮಿಕವನ್ನು ಅಸ್ಸೋಂ ಸರ್ಕಾರ ನಿಭಾಯಿಸಿದ ರೀತಿ ಪ್ರಶಂಸೆಗೆ ಅರ್ಹವಾಗಿದೆ. ವ್ಯಾಕ್ಸಿನೇಷನ್ ಡ್ರೈವ್ ಅನ್ನು ಅಸ್ಸೋಂ ಸಫಲಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ. ರಾಜ್ಯದ ಎಲ್ಲ ಜನರು ಲಸಿಕೆ ಪಡೆಯುವಂತೆ ನಾನು ಮನವಿ ಮಾಡುತ್ತೇನೆ ಎಂದು ಮೋದಿ ಹೇಳಿದರು.
ಕಾರ್ಯಕ್ರಮದಲ್ಲಿ ಅಸ್ಸೋಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.