ETV Bharat / bharat

ಜಿ -7 ರಾಷ್ಟ್ರಗಳ ಭಾಗವಾಗಲು ಟ್ರಂಪ್​ ಪ್ರಸ್ತಾಪಕ್ಕೆ ಮೋದಿ ಸಮ್ಮತಿ - ಜಿ7 ಶೃಂಗ

ಈ ವಾರದ ಆರಂಭದಲ್ಲಿ ಜಿ-7 ರಾಷ್ಟ್ರಗಳ ಸಭೆಯನ್ನು ಸೆಪ್ಟೆಂಬರ್​ವರೆಗೆ ಮುಂದೂಡಲು ಟ್ರಂಪ್​ ನಿರ್ಧರಿಸಿದ್ದರು. ಅಲ್ಲದೇ ಭಾರತ, ರಷ್ಯಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾವನ್ನು ಈ ಸಭೆಗೆ ಆಹ್ವಾನಿಸಿ ಚೀನಾದೊಂದಿಗೆ ಭವಿಷ್ಯದಲ್ಲಿ ನಡೆದುಕೊಳ್ಳಬೇಕಾದ ಬಗೆಯ ಬಗ್ಗೆ ಚರ್ಚಿಸಲು ಟ್ರಂಪ್​ ನಿರ್ಧರಿಸಿದ್ದಾರೆ. ಈ ನಡುವೆ ಪ್ರಧಾನಿ ಮೋದಿಗೆ ಕರೆ ಮಾಡಿರುವ ಟ್ರಂಪ್​ ಈ ಸಭೆಯಲ್ಲಿ ಭಾಗಿಯಾಗುವಂತೆ ಇಟ್ಟ ಪ್ರಸ್ತಾಪಕ್ಕೆ ಮೋದಿ ಸಮ್ಮತಿ ಸೂಚಿಸಿದ್ದಾರೆ.

trump
ಟ್ರಂಪ್
author img

By

Published : Jun 3, 2020, 3:49 PM IST

Updated : Jun 3, 2020, 3:55 PM IST

ನವದೆಹಲಿ: ಚೀನಾ ವಿಚಾರವಾಗಿ ಒಂದು ನಿರ್ಧಾರಕ್ಕೆ ಬರುವ ಕುರಿತು ಚರ್ಚಿಸಲು 'ವಿಸ್ತೃತ' ಜಿ-7 ರಾಷ್ಟ್ರಗಳ ಸಭೆಯಲ್ಲಿ ಭಾಗವಹಿಸಬೇಕೆಂಬ ಟ್ರಂಪ್ ಪ್ರಸ್ತಾಪವನ್ನು ಪ್ರಧಾನಿ ಮೋದಿ ಒಪ್ಪಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕಳೆದ ಮಂಗಳವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ ಮಾತನಾಡಿದ್ದರು. ಈ ವೇಳೆ ಭವಿಷ್ಯದಲ್ಲಿ ಚೀನಾ ವಿಚಾರವಾಗಿ ಚರ್ಚಿಸಲು ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ಸಮೂಹವಾದ 'ವಿಸ್ತರಿತ ಜಿ7' ನ ಭಾಗವಾಗಲು ಟ್ರಂಪ್​ ಅವರ ಪ್ರಸ್ತಾಪವನ್ನು ಮೋದಿ ಒಪ್ಪಿಕೊಂಡಿದ್ದಾರೆ.

ಈ ವಾರದ ಆರಂಭದಲ್ಲಿ ಈ ಶೃಂಗಸಭೆಯನ್ನು ಸೆಪ್ಟೆಂಬರ್​ವರೆಗೆ ಮುಂದೂಡಲು ಟ್ರಂಪ್​ ನಿರ್ಧರಿಸಿದ್ದರು. ಅಲ್ಲದೇ ಭಾರತ, ರಷ್ಯಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾವನ್ನು ಈ ಸಭೆಗೆ ಆಹ್ವಾನಿಸಿ ಚೀನಾದೊಂದಿಗೆ ಭವಿಷ್ಯದಲ್ಲಿ ನಡೆದುಕೊಳ್ಳಬೇಕಾದ ಬಗೆಯ ಬಗ್ಗೆ ಚರ್ಚಿಸಲು ಟ್ರಂಪ್​ ನಿರ್ಧರಿಸಿದ್ದಾರೆ.

ವುಹಾನ್‌ನಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹುಟ್ಟಿದಾಗಿನಿಂದ ಯುಎಸ್ ಮತ್ತು ಚೀನಾ ಬಹಿರಂಗವಾಗಿ ಪರಸ್ಪರ ಕಿತ್ತಾಡುತ್ತಿರುವುದನ್ನು ಇಲ್ಲಿ ಗಮನಿಸಬೇಕಾಗಿದೆ. ಎಲ್ಲ ರಾಷ್ಟ್ರಗಳನ್ನು ಒಗ್ಗೂಡಿಸಿ ಚೀನಾದ ಶಕ್ತಿಯನ್ನು ಬದಿಗೆ ಸರಿಸುವುದು ಟ್ರಂಪ್ ಉದ್ದೇಶವಾಗಿದೆ.

ಪೂರ್ವ ಲಡಾಕ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ನಿರಂತರ ಸಮರದ ದೃಷ್ಟಿಯಿಂದ ಈ ದೂರವಾಣಿ ಸಂಭಾಷಣೆ ಮಹತ್ವದ್ದಾಗಿದೆ. ಈ ನಿಲುವನ್ನು ಬಗೆಹರಿಸಲು ಟ್ರಂಪ್ ಏಷ್ಯಾದ ಎರಡು ದೈತ್ಯ ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದಾರೆ.

ಭಾರತ ಮತ್ತು ಚೀನಾ ಈ ಸಮಸ್ಯೆಯನ್ನು ಪರಿಹರಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸಿ ಮಾತನಾಡುತ್ತಿವೆ. ಆದಾಗ್ಯೂ, ಕಳೆದ ವಾರ, ನಡೆಯುತ್ತಿರುವ ಗಡಿ ಸಂಘರ್ಷದ ಸಂಬಂಧ ಕ್ಸಿ ಜಿನ್‌ಪಿಂಗ್ ನಡವಳಿಕೆ ಬಗ್ಗೆ ಮೋದಿ ಸಂತೋಷವಾಗಿಲ್ಲ ಎಂದು ಟ್ರಂಪ್ ಹೇಳಿಕೊಂಡಿದ್ದರು.

Last Updated : Jun 3, 2020, 3:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.