ETV Bharat / bharat

ಚೀನಾ- ಪಾಕ್‌ದೊಂದಿಗೆ ಯಾವಾಗ ಯುದ್ಧ ನಡೆಯಲಿದೆ ಎಂದು ಪ್ರಧಾನಿ ನಿರ್ಧರಿಸಿದ್ದಾರೆ: ದೇವ್ ಸಿಂಗ್ - ಇಂಡೋ-ಪಾಕ್ ಮತ್ತು ಇಂಡೋ-ಚೀನಾ ಯುದ್ಧ

ಪಾಕಿಸ್ತಾನ ಮತ್ತು ಚೀನಾ ಜೊತೆ ದೇಶ ಯಾವಾಗ ಯುದ್ಧ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಬಿಜೆಪಿಯ ಉತ್ತರ ಪ್ರದೇಶದ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ..

PM has decided' date of war with China
ಬಿಜೆಪಿಯ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್
author img

By

Published : Oct 25, 2020, 10:49 PM IST

ಬಲ್ಲಿಯಾ(ಯುಪಿ): ಪಾಕಿಸ್ತಾನ ಮತ್ತು ಚೀನಾ ಜೊತೆ ದೇಶ ಯಾವಾಗ ಯುದ್ಧ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಉತ್ತರ ಪ್ರದೇಶದ ಬಿಜೆಪಿಯ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಮ್ ಮಂದಿರ ಮತ್ತು 370ನೇ ವಿಧಿಯ ರದ್ಧತಿಯ ನಿರ್ಧಾರಗಳಂತೆ, ಪಾಕಿಸ್ತಾನ ಮತ್ತು ಚೀನಾದೊಂದಿಗೆ ಯಾವಾಗ ಯುದ್ಧ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ" ಎಂದು ಸ್ವತಂತ್ರ ದೇವ್ ಸಿಂಗ್ ಹೇಳಿದ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್​ ಆಗಿದೆ. ಬಿಜೆಪಿ ಶಾಸಕ ಸಂಜಯ್ ಯಾದವ್ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವ್​ ಸಿಂಗ್ ಮಾತನಾಡುತ್ತಿದ್ದರು. ತಮ್ಮ ಭಾಷಣದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಕಾರ್ಯಕರ್ತರನ್ನು "ಭಯೋತ್ಪಾದಕರು" ಎಂದು ಅವರು ಹೇಳಿದ್ದಾರೆ.

ಈ ಹೇಳಿಕೆಗಳ ಬಗ್ಗೆ ಕೇಳಿದಾಗ, ಸ್ಥಳೀಯ ಸಂಸದ ರವೀಂದ್ರ ಕುಶ್ವಾಹ ಅವರು ಯುಪಿ ಬಿಜೆಪಿ ಅಧ್ಯಕ್ಷರು ಪಕ್ಷದ ಕಾರ್ಯಕರ್ತರ ಸ್ಥೈರ್ಯವನ್ನು ಹೆಚ್ಚಿಸುವಂತೆ ಮಾಡಿದ್ದಾರೆ ಎಂದು ಹೇಳಿದರು. ಇನ್ನೊಂದೆಡೆಗೆ ಚೀನಾದೊಂದಿಗಿನ ಗಡಿ ಉದ್ವಿಗ್ನತೆಯನ್ನು ಕೊನೆಗೊಳಿಸಲುರತ ಬಯಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಪುನರುಚ್ಚರಿಸಿದ್ದು, ಒಂದು ಇಂಚು ಭೂಮಿಯನ್ನು ಯಾರೊಬ್ಬರೂ ಕಸಿದುಕೊಳ್ಳಲು ಅನುಮತಿಸುವುದಿಲ್ಲ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.