ಹೈದರಾಬಾದ್: ಕೋವಿಡ್ -19 ಬಿಕ್ಕಟ್ಟು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಾಮಾಜಿಕ ಸಂರಕ್ಷಣೆಯಲ್ಲಿನ ವಿಫಲತೆ ಬಟಾಬಯಲಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು ಈಗಿರುವ ತಾತ್ಕಾಲಿಕ ಬಿಕ್ಕಟ್ಟು ಉಪಶಮನ ಕ್ರಮಗಳನ್ನು ಸಮಗ್ರ ಸಾಮಾಜಿಕ ಸಂರಕ್ಷಣೆ ಕ್ರಮಗಳಾಗಿ ಪರಿವರ್ತಿಸಿದರೆ ಮಾತ್ರ ಶಾಶ್ವತ ಚೇತರಿಕೆ ಮತ್ತು ಭವಿಷ್ಯದ ಬಿಕ್ಕಟ್ಟು ತಡೆಗಟ್ಟುಲು ಸಾಧ್ಯ ಎಂದು ಅಂತಾರಾಷ್ಟ್ರಿಯ ಕಾರ್ಮಿಕ ಸಂಘಟನೆ (ಐಎಲ್ಒ ) ಬಹಿರಂಗ ಪಡಿಸಿದೆ.
ಐಎಲ್ಒ ಬಿಡುಗಡೆ ಮಾಡಿದ ಎರಡು ಸಂಶೋಧನಾ ಪತ್ರಿಕೆಗಳ ಪ್ರಕಾರ, ಸಾಮಾಜಿಕ ಸುರಕ್ಷತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದು ಲಕ್ಷಾಂತರ ಜನರನ್ನು ಬಡತನಕ್ಕೆ ತಳ್ಳಬಹುದು ಮತ್ತು ಭವಿಷ್ಯದಲ್ಲಿ ಈ ರೀತಿಯ ಬಿಕ್ಕಟ್ಟನ್ನು ನಿಭಾಯಿಸಲು ಜಾಗತಿಕ ಸಿದ್ಧತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ.
ಬಿಕ್ಕಟ್ಟಿನ ಸಂದರ್ಭದಲ್ಲಿ ಅನಾರೋಗ್ಯದ ಪ್ರಯೋಜನೆಗಳನ್ನು ಪಡೆಯುವ ಕುರಿತು ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೋವಿಡ್-19 ನಿವಾರಣೆಯಲ್ಲಿ ಸಾಮಾಜಿಕ ಸುರಕ್ಷತಾ ಕ್ರಮಗಳ ಪಾತ್ರ ಕುರಿತು ಐಎಲ್ಒ ಪ್ರಸ್ತುತ ಪಡಿಸಿದ ಎರಡು ಸಂಶೋಧನ ಪತ್ರಿಕೆಗಳು ವಿಸ್ತ್ರತವಾಗಿ ಹೇಳಿವೆ.
"ಬಿಕ್ಕಟ್ಟಿನ ಸಂದರ್ಭದಲ್ಲಿ ವ್ಯಕ್ತಿಗಳಿಗೆ ಬೆಂಬಲವನ್ನು ನೀಡುವ ಅನಿವಾರ್ಯ ಕಾರ್ಯವಿಧಾನ" ಎಂದು ವಿಶ್ಲೇಷಿಸಲಾಗಿದೆ. ಗುಣಮಟ್ಟದ ಆರೋಗ್ಯ ರಕ್ಷಣೆಗೆ ಈಗ ಅಡ್ಡಿಯಾಗಿರುವ ಹಣಕಾಸಿನ ಅಡೆತಡೆಗಳನ್ನು ತೆಗೆದುಹಾಕುವುದು, ಆದಾಯ ಭದ್ರತೆಯನ್ನು ಹೆಚ್ಚಿಸುವುದು, ಅನೌಪಚಾರಿಕ ಆರ್ಥಿಕತೆ ವ್ಯವಸ್ಥೆಯ ನಡುವೆ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸುವುದು, ಆದಾಯ ಮತ್ತು ಉದ್ಯೋಗಗಳನ್ನು ಕಾಪಾಡುವುದು ಮತ್ತು ಸಾಮಾಜಿಕ ರಕ್ಷಣೆ, ಉದ್ಯೋಗ ಮತ್ತು ಇತರ ಉಪಕ್ರಮಗಳ ಪೂರೈಕೆಯನ್ನು ಉತ್ತಮಪಡಿಸುವುದು ಸೇರಿದಂತೆ ಕೆಲವು ದೇಶಗಳು ಕೈಗೊಂಡಿರುವ ಪೂರಕ ನಿರ್ಧಾರಗಳನ್ನು ಪ್ರಸ್ತಾಪಿಸಲಾಗಿದೆ.
"ಕೊರೊನಾ ವೈರಸ್ ಸೋಂಕು ಬಡವ ಅಥವಾ ಶ್ರೀಮಂತರ ಎಂಬ ತಾರತಮ್ಯ ಮಾಡುವುದಿಲ್ಲ. ಆದರೆ ಅದರ ಪರಿಣಾಮಗಳು ಹೆಚ್ಚು ಅಸಮರ್ಪಕವಾಗಿವೆ. ಕೈಗೆಟುಕುವ, ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯುವ ಸಾಮರ್ಥ್ಯವು "ಬದುಕು ಮತ್ತು ಸಾವಿನ ವಿಷಯ" ವಾಗಿದೆ ಎಂದು ಪತ್ರಿಕೆಗಳು ವಿಶ್ಲೇಷಿಸಿವೆ.
ಕೋವಿಡ್ -19 ಕುರಿತ ಏಕಮುಖ ಗಮನ ಕೇಂದ್ರಿಕರಿಸುವುದನ್ನು ತಪ್ಪಿಸಲು ಐಎಲ್ಒ ತನ್ನ ನೀತಿ ನಿರೂಪಕರಿಗೆ ಎಚ್ಚರಿಸಿದೆ. ಏಕೆಂದರೆ ಈ ಸೋಂಕು "ಪ್ರತಿದಿನ ಜನರನ್ನು ಕೊಲ್ಲುವ ಮತ್ತು ಇತರ ರೋಗರುಜಿನಗಳಿಗೆ ಸ್ಪಂದಿಸಲು ಆರೋಗ್ಯ ವ್ಯವಸ್ಥೆಗಳ ಲಭ್ಯತೆಯನ್ನು ಅಸಮರ್ಪಕಗೊಳಿಸುತ್ತದೆ ಎಂದು ಹೇಳಿದೆ.
ವಿಶ್ವದ ಜನಸಂಖ್ಯೆಯ 55 ಪ್ರತಿಶತದಷ್ಟು ಅಂದರೆ 4 ಶತಕೋಟಿ ಜನರು ಸಾಮಾಜಿಕ ವಿಮೆ ಅಥವಾ ಸಾಮಾಜಿಕ ಭದ್ರತೆಯಿಂದ ವಂಚಿತರಾಗಿದ್ದಾರೆ. ಜಾಗತಿಕವಾಗಿ ನಿರುದ್ಯೋಗಿಗಳಲ್ಲಿ ಕೇವಲ 20 ಪ್ರತಿಶತದಷ್ಟು ಜನರು ಮಾತ್ರ ನಿರುದ್ಯೋಗ ಭತ್ಯೆಗಳನ್ನು ಪಡೆದುಕೊಂಡಿದ್ದಾರೆ. ಕೆಲವು ಪ್ರದೇಶಗಳಲ್ಲಿ ಈ ಪ್ರಯೋಜನಗಳ ಹಂಚಿಕೆ ತುಂಬಾ ಅಸಮರ್ಪಕವಾಗಿದೆ.
ಇತರ ಸಾಮಾಜಿಕ ಸುರಕ್ಷತೆಯನ್ನು ವಿವರಿಸಲಾಗಿದ್ದು, ಅನಾರೋಗ್ಯ ರಜೆ ಪ್ರಯೋಜನಗಳು ಮತ್ತು ಕ್ವಾರಂಟೈನ್ , ಕೋವಿಡ್ -19 ಕುರಿತು ದೇಶಗಳ ಪ್ರತಿಕ್ರಿಯೆಗಳು ಮತ್ತು ನೀತಿ ನಿರೂಪಣೆಗಳು. ಅಲ್ಲದೆ ಪತ್ರಿಕೆಯ ಸಂಕ್ಷಿಪ್ತ ವಿವರದಲ್ಲಿ ಕೊವಿಡ್ -19 ಆರೋಗ್ಯ ಬಿಕ್ಕಟ್ಟು ಅನಾರೋಗ್ಯ ಸಂದರ್ಭದ ಪ್ರಯೋಜನ ಕುರಿತು ಎರಡು ಪ್ರಮುಖ ಪ್ರತಿಕೂಲ ಪರಿಣಾಮಗಳನ್ನು ಬಹಿರಂಗಪಡಿಸಿದೆ. ಮೊದಲನೆಯದಾಗಿ, ಅಂತಹ ರಕ್ಷಣೆಯ ಕ್ರಮಗಳು ಜನರು ಅನಾರೋಗ್ಯದಿಂದ ಬಳಲುತ್ತಿರುವ ಸಂದರ್ಭದಲ್ಲಿ ಮತ್ತು ಕ್ವಾರಂಟೈನ್ ಆಗಿದ್ದಾಗ ಅವರನ್ನು ಕೆಲಸಕ್ಕೆ ಹೋಗಲು ಒತ್ತಾಯಿಸುತ್ತದೆ, ಇದರಿಂದಾಗಿ ಇತರರಿಗೆ ಸೋಂಕು ತಗಲುವ ಅಪಾಯವನ್ನು ಹೆಚ್ಚಿಸುತ್ತದೆ. ಎರಡನೆಯದಾಗಿ, ಆದಾಯದ ನಷ್ಟವು ಕಾರ್ಮಿಕರು ಮತ್ತು ಅವರ ಕುಟುಂಬಗಳ ಬಡತನದ ಅಪಾಯವನ್ನು ಹೆಚ್ಚಿಸುತ್ತದೆ, ಇದು ದೂರಗಾಮಿ ಪರಿಣಾಮ ಬೀರಬಹುದು ಎಂದು ಸಂಶೋಧನ ವರದಿಗಳಲ್ಲಿ ವಿಶ್ಲೇಷಿಸಲಾಗಿದೆ.
ಅನಾರೋಗ್ಯದ ಸಂದರ್ಭದ ಪ್ರಯೋಜನ ಮತ್ತು ಸಮರ್ಪಕ ಅಂತರವನ್ನು ಕಡಿಮೆಗೊಳಿಸಲು ತುರ್ತು, ಅಲ್ಪಾವಧಿಯ ಕ್ರಮಗಳನ್ನು ಸಂಶೋಧನ ಪತ್ರಿಕೆಗಳಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಇದು ಮೂರು ಪಟ್ಟು ಪ್ರಯೋಜನವನ್ನು ನೀಡುತ್ತದೆ ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ. ಸಾರ್ವಜನಿಕ ಆರೋಗ್ಯಕ್ಕೆ ಬೆಂಬಲ, ಬಡತನ ನಿರ್ಮೂಲನೆ ಮತ್ತು ಆರೋಗ್ಯ ಮತ್ತು ಸಾಮಾಜಿಕ ಭದ್ರತೆಗೆ ಮಾನವ ಹಕ್ಕುಗಳ ಉತ್ತೇಜನದ ಬಗ್ಗೆ ಪತ್ರಿಕೆಯಲ್ಲಿ ವಿವರಿಸಲಾಗಿದೆ . ಪ್ರಸ್ತಾವಿತ ಕ್ರಮಗಳು ಎಲ್ಲರಿಗೂ ಅನಾರೋಗ್ಯದ ಭತ್ಯೆಗಳ ವ್ಯಾಪ್ತಿಯನ್ನು ವಿಸ್ತರಿಸುವುದು, ಮುಖ್ಯವಾಗಿ ಗುಣಮಟ್ಟರಹಿತ ಮತ್ತು ಅನೌಪಚಾರಿಕ ಉದ್ಯೋಗ, ಸ್ವಉದ್ಯೋಗ , ವಲಸಿಗರು ಮತ್ತು ದುರ್ಬಲ ಗುಂಪುಗಳೆಂದು ವರ್ಗಿಕರಿಸಲ್ಪಟ್ಟ ಮಹಿಳೆಯರು ಮತ್ತು ಪುರುಷರನ್ನು ತಲುಪುವ ಕುರಿತು ನಿರ್ದಿಷ್ಟ ಗಮನವನ್ನು ಹರಿಸಲಾಗಿದೆ.
ಆದಾಯದ ಸುರಕ್ಷತೆ ಒದಗಿಸುವುದನ್ನು ಖಾತರಿಪಡಿಸಿಕೊಳ್ಳಲು ಸೌಕರ್ಯದ ಮಟ್ಟವನ್ನು ಹೆಚ್ಚಿಸುವುದು ಸೌಕರ್ಯ ಪೂರೈಕೆಯ ವೇಗವನ್ನು ಹೆಚ್ಚಿಸುವುದು ಮತ್ತು ರೋಗ ನಿರ್ಬಂದ, ರೋಗಪತ್ತೆಹಚ್ಚುವುದು ಮತ್ತು ಚಿಕಿತ್ಸೆಯ ಕ್ರಮಗಳನ್ನು ಪರಿಣಾಮಕಾರಿಗೊಳಿಸುವುದು ಇತರ ಶಿಫಾರಸುಗಳು. ಇದರೊಂದಿಗೆ ಕ್ವಾರಂಟೈನ್ ಅವಧಿಯ ಸುರಕ್ಷತೆಯನ್ನು ಹೆಚ್ಚಿಸುವುದು ಅಥವಾ ಅನಾರೋಗ್ಯ ಪೀಡಿತ ಅವಂಬಿತರನ್ನು ಆರೈಕೆ ಮಾಡುವವರಿಗೆ ಸೌಲಭ್ಯ ಹೆಚ್ಚಿಸುವುದು.
"ಕೋವಿಡ್-19 ಬಿಕ್ಕಟ್ಟು ಎಚ್ಚರಿಕೆ ಗಂಟೆ. ಸಾಮಾಜಿಕ ರಕ್ಷಣೆಯ ಕೊರತೆಯು ಕೇವಲ ಬಡವರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತೋರಿಸಿದೆ, ಇದು ಸಾಮಾನ್ಯ ಉತ್ತಮವಾಗಿ ಜೀವನ ನಡೆಸುತ್ತಿರುವವರ ದುರ್ಬಲತೆಯನ್ನು ಬಹಿರಂಗಪಡಿಸುತ್ತದೆ, ಏಕೆಂದರೆ ವೈದ್ಯಕೀಯ ಶುಲ್ಕಗಳು ಮತ್ತು ಆದಾಯದ ನಷ್ಟವು ಕುಟುಂಬವೊಂದು ದಶಕಗಳ ಕಾಲ ಮಾಡಿದ ಕೆಲಸ ಮತ್ತು ಉಳಿತಾಯವನ್ನು ಸುಲಭವಾಗಿ ನಾಶಪಡಿಸುತ್ತದೆ ”ಎಂದು ಐಎಲ್ಒನ ಸಾಮಾಜಿಕ ಸುರಕ್ಷತೆಯ ವಿಭಾಗದ ನಿರ್ದೇಶಕರಾದ ಶಹರಾ ರಜಾವಿ ಹೇಳಿದರು.
"ದೃಢವಾದ ಮತ್ತು ಸಮಗ್ರ ಸಾಮಾಜಿಕ ಸಂರಕ್ಷಣಾ ವ್ಯವಸ್ಥೆಯನ್ನು ಹೊಂದಿರುವ ದೇಶಗಳು ಬಿಕ್ಕಟ್ಟಿಗೆ ಸ್ಪಂದಿಸಲು ಮತ್ತು ಅದರಿಂದ ಚೇತರಿಸಿಕೊಳ್ಳಲು ಹೆಚ್ಚು ಬಲವಾದ ಸ್ಥಾನದಲ್ಲಿವೆ ಎಂದು ವಿಶ್ವದಾದ್ಯಂತದ ಉದಾಹರಣೆಗಳು ಮತ್ತೊಮ್ಮೆ ಸ್ಪಷ್ಟವಾಗಿ ತೋರಿಸಿ ಕೊಟ್ಟಿವೆ. ಭವಿಷ್ಯದ ಬಿಕ್ಕಟ್ಟನ್ನು ಎದುರಿಸಲು ಸಿದ್ದತೆಯನ್ನು ಖಚಿತಪಡಿಸಿಕೊಳ್ಳಲು, ಸಾಮಾಜಿಕ ಸಂರಕ್ಷಣೆಯ ಪ್ರಾಮುಖ್ಯತೆ ಮತ್ತು ಸಮಾಜದ ಎಲ್ಲರೂ ಅದರಲ್ಲಿ ಹೂಡಿಕೆ ಮಾಡುವ ತುರ್ತು ಅವಶ್ಯಕತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ನೀತಿ ನಿರೂಪಕರು ಒಂದು ಹೊಸ ಆಯಾಮವನ್ನು ಸೃಷ್ಠಿಸಬೇಕು.