ETV Bharat / bharat

ಪ್ಲಾಸ್ಮಾ ಥೆರಪಿಯಿಂದ ಕೊರೊನಾ ಸೋಂಕಿತ ಗುಣಮುಖ: ಮಾಕ್ಸ್​ ಆಸ್ಪತ್ರೆ ವೈದ್ಯರ ಸ್ಪಷ್ಟನೆ

ಕೊರೊನಾ ಸೋಂಕಿತ ವ್ಯಕ್ತಿ ಮೇಲೆ ಪ್ಲಾಸ್ಮಾ ಥೆರಪಿ ಮಾಡಲಾಗಿದ್ದು, ಇದರಿಂದ ಆತ ಚೇತರಿಸಿಕೊಂಡ ಘಟನೆ ದೆಹಲಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.

max-hospital
ಕೊರೊನಾ ಸೋಂಕಿತ ವ್ಯಕ್ತಿ ಮೇಲೆ ಪ್ಲಾಸ್ಮಾ ಥೆರಪಿ
author img

By

Published : Apr 21, 2020, 3:05 PM IST

ನವದೆಹಲಿ: ಕೊರೊನಾ ಸೋಂಕಿತ ವ್ಯಕ್ತಿ ಮೇಲೆ ಪ್ಲಾಸ್ಮಾ ಥೆರಪಿ ಮಾಡಲಾಗಿದ್ದು, ಇದರಿಂದಾಗಿ ಆ ವ್ಯಕ್ತಿ ಶೀಘ್ರವಾಗಿ ಗುಣಮುಖನಾಗುತ್ತಿದ್ದಾನೆ ಎಂದು ಮಾಕ್ಸ್​ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

49 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದು, ಆತನ ಮೇಲೆ ಪ್ಲಾಸ್ಮಾ ಥೆರಪಿ ಮೊದಲ ಬಾರಿಗೆ ಮಾಡಲಾಗಿತ್ತು. ಮುಖ್ಯವಾಗಿ ಆ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಥೆರಪಿ ಮಾಡಲಾಗಿದ್ದು, ಇದರ ಪರಿಣಾಮ ಉತ್ತಮ ಫಲಿತಾಂಶ ದೊರೆತಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಒಬ್ಬ ವ್ಯಕ್ತಿಗೆ ಏಪ್ರಿಲ್​ 4ರಂದು ಕೊರೊನಾ ವೈರಸ್​ ಸೋಂಕು ಇರುವುದು ದೃಢವಾಗಿತ್ತು. ಅದೇ ದಿನ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರದ ಹಿನ್ನೆಲೆಯಲ್ಲಿ ಮಾಕ್ಸ್​ ಆಸ್ಪತ್ರೆಗೆ ಆ ವ್ಯಕ್ತಿ ದಾಖಲಾಗಿದ್ದಾನೆ. ಆದರೆ, ಕೆಲವೇ ದಿನಗಳಲ್ಲಿ ಆತನ ಸ್ಥಿತಿ ಗಂಭೀರವಾಗಿ ನ್ಯುಮೋನಿಯಾ ಕೂಡ ಉಲ್ಬಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಆತನಿಗೆ ಏಪ್ರಿಲ್​ 8ರಂದು ವೆಂಟಿಲೇಟರ್​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಯಿತು. ಆದರೆ, ಯಾವುದೇ ಸುಧಾರಣೆ ಕಂಡುಬರದ ಹಿನ್ನೆಲೆಯಲ್ಲಿ ಆತನಿಗೆ ಪ್ಲಾಸ್ಮಾ ಥೆರಪಿ ಮಾಡಲಾಗಿದೆ. ಇದರಿಂದ ಆತ ಚೇತರಿಸಿಕೊಂಡಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಮ್ಯಾಕ್ಸ್ ಹೆಲ್ತ್‌ಕೇರ್‌ ಗ್ರೂಪ್​ನ ನಿರ್ದೇಶಕ ಮತ್ತು ಇನ್ಸಿಟ್ಯೂಟ್ ಆಫ್ ಇಂಟರ್ನಲ್ ಮೆಡಿಸಿನ್‌ನ ಹಿರಿಯ ನಿರ್ದೇಶಕ ಸಂದೀಪ್ ಬುಧಿರಾಜಾ, "ಈ ಚಿಕಿತ್ಸಾ ವಿಧಾನದಿಂದ ಹೊಸ ಆವಿಷ್ಕಾರ ತೆರೆದುಕೊಂಡಿದೆ. ಈ ಥೆರಪಿಯಿಂದ ಉತ್ತಮ ಫಲಿತಾಂಶ ದೊರಕಿದ್ದು, ಸಂತಸವಾಗುತ್ತಿದೆ. ಚಿಕಿತ್ಸೆಯ ವೇಳೆ ಕೆಲ ಮಾನದಂಡಗಳನ್ನು ಬಳಸಿಕೊಂಡಿದ್ದೆವು. ಆದರೆ ಪ್ಲಾಸ್ಮಾ ಥೆರಪಿ ಶೇ.100ರಷ್ಟು ಕೆಲಸ ಮಾಡುತ್ತದೆ ಎಂದು ನಾವು ಹೇಳಲಾರೆವು" ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.

ಅಷ್ಟೇ ಅಲ್ಲದೇ, ದೇಶದ ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ಥೆರಪಿ ಮಾಡಲು ವ್ಯವಸ್ಥೆಗಳನ್ನು ಸರ್ಕಾರ ಮಾಡಬೇಕು. ಒಬ್ಬ ವ್ಯಕ್ತಿಗೆ ಥೆರಪಿ ಮಾಡಲು 200 ಮಿ.ಲೀ ಪ್ಲಾಸ್ಮಾ ಬೇಕಾಗುತ್ತದೆ ಎಂದು ಅವರು ಸಲಹೆ ನೀಡಿದರು.

ಪ್ಲಾಸ್ಮಾ ಥೆರಪಿಯು ಸೋಂಕಿತನ ದೇಹದಲ್ಲಿರುವ ವೈರಸ್​ಗಳನ್ನು ತೆಗೆದುಹಾಕಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಾಧ್ಯ ಮಾಡುತ್ತದೆ ಎಂದು ಈ ಪ್ರಯೋಗದ ಮುಖೇನ ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.