ETV Bharat / bharat

ಕೇಂದ್ರ ಸಚಿವ ಗೋಯಲ್ ಮನೆಯಲ್ಲಿ ಕಳ್ಳತನ.. ಅನಾಮದೇಯ ವ್ಯಕ್ತಿಗೆ ಇ-ಮೇಲ್ ಮೂಲಕ ರವಾನೆ - ಮುಂಬೈ ಪೊಲೀಸರು

ಕೇಂದ್ರ ಸಚಿವರ ಮನೆಯಲ್ಲಿ ಕಳ್ಳತನ ಮಾಡುತಿದ್ದ ಮನೆ ಕೆಲಸದ ವ್ಯಕ್ತಿಯನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಪಿಯೂಷ್ ಗೋಯಲ್
author img

By

Published : Oct 3, 2019, 8:15 AM IST

ಮುಂಬೈ: ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್​ ಮನೆಯಲ್ಲಿ ಮುಖ್ಯವಾದ ದಾಖಲಾತಿಗಳನ್ನ ಕದಿಯುತಿದ್ದ ಮನೆ ಕೆಲಸದ ವ್ಯಕ್ತಿಯನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಗೋಯಲ್​ ಮನೆಯಲ್ಲಿ ಕೆಲ ದಿನಗಳ ಹಿಂದೆ ಬೆಳ್ಳಿ ವಸ್ತುಗಳು ಕಳುವಾಗುತ್ತಿದ್ದವು. ಈ ಬಗ್ಗೆ ಕುಟುಂಬಸ್ಥರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಗೋಯಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವಿಷ್ಣು ಕುಮಾರ್ ವಿಶ್ವಕರ್ಮ ಎಂಬ ವ್ಯಕ್ತಿಯನ್ನ ಬಂಧಿಸಿದ್ದಾರೆ.

ವಿಷ್ಣುನನ್ನ ವಿಚಾರಣೆಗೆ ಒಳಪಡಿಸಿದ್ದಾಗ ಕೇವಲ ಬೆಳ್ಳಿ ಅಷ್ಟೆ ಅಲ್ಲದೇ ಗೋಯಲ್​ ಕಂಪ್ಯೂಟರ್​ನಿಂದ ಕೆಲ ಮುಖ್ಯವಾದ ಸರ್ಕಾರಿ ದಾಖಲಾತಿಗಳನ್ನ ಕದ್ದು ಬೆರೆಯವರಿಗೆ ಇ-ಮೇಲ್ ಮೂಲಕ ಕಳಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಆತನ ಮೊಬೈಲ್​ ವಶಕ್ಕೆ ಪಡೆದಿರುವ ಸೈಬರ್ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ವಿಷ್ಣು ದೂರವಾಣಿ ಕರೆ ಮೂಲಕ ಯಾರನ್ನ ಸಂಪರ್ಕಿಸಿದ್ದಾನೆ, ಯಾರಿಗೆ ದಾಖಲಾತಿಗಳನ್ನ ಇ-ಮೇಲ್ ಮಾಡಿದ್ದಾನೆ ಎಂಬ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.