ಹೈದರಾಬಾದ್: ಚೀನಾದಲ್ಲಿ ನಡೆದಿರುವ ಸಂಶೋಧನೆ ತಿಳಿಸುವ ಪ್ರಕಾರ ಉಸಿರಾಟದ ತೊಂದರೆ ಉಂಟು ಮಾಡುವ ನೊವೆಲ್ ಕೊರೊನಾವೈರಸ್ ಸಹ ಗುಲಾಬಿ ಕಣ್ಣಿನ ತೊಂದರೆ ಅಥವಾ ಕಂಜಂಕ್ಟಿವೈಟಿಸ್ ಉಂಟು ಮಾಡಬಲ್ಲದು.
ಈ ಅಧ್ಯಯನಗಳಲ್ಲಿ ಕಂಡು ಬಂದ ಬಹಳ ಕುತೂಹಲಕಾರಿ ಅಂಶವೇನಂದರೆ ಈ ವೈರಸ್ಸು ಮೂಗು ಮತ್ತು ಕಣ್ಣುಗಳ ದ್ರವಗಳಲ್ಲಿ ಠಿಕಾಣಿ ಹೂಡಿದ್ದು ಕಂಡುಬಂದಿದೆ. ಅಂದರೆ ಗುಲಾಬಿ ಕಣ್ಣಿನ ತೊಂದರೆ ಕಾಣಿಸಿಕೊಳ್ಳುವುದು ಈ ಕಾಯಿಲೆಯ ಒಂದು ಅಪರೂಪದ ರೋಗ ಲಕ್ಷಣವಾಗಿದೆ.
ಇದುವರೆಗೆ ಜಾಗತಿಕ ಮಟ್ಟದಲ್ಲಿ ಇದ್ದ ತಿಳಿವಳಿಕೆ ಏನೆಂದರೆ ಈ ಕಾಯಿಲೆ ಹೊಂದಿರುವ ರೋಗಿಗಳು ಕೇವಲ ಮೂಗಿನ ದ್ರವದ ಮೂಲಕ ಕಾಯಿಲೆಯನ್ನು ಇತರರಿಗೆ ಹೊರಡಿಸುತ್ತಾರೆ ಎನ್ನುವುದಾಗಿತ್ತು. ಈಗ ದೃಢವಾಗಿರುವ ವಿಷಯವೇನೆಂದರೆ ಈ ರೋಗ ಸೋಂಕಿತರು ತಮ್ಮ ಕಣ್ಣುಗಳನ್ನು ಉಜ್ಜಿಕೊಂಡು ಇತರರನ್ನು ಮುಟ್ಟಿದರೆ ಅದರಿಂದಲೂ ಸೋಂಕನ್ನು ಹರಡಬಹುದಾಗಿದೆ. ಚೀನಾದ ತ್ರೀ ಗಾರ್ಜಸ್ ಯೂನಿವರ್ಸಿಟಿಯ ಆಫ್ತಮಾಲಜಿ ವಿಭಾಗದ ಡಾ. ಲಿಯಾಂಗ್ ಅವರ ಪ್ರಕಾರ ನ್ಯುಮೋನಿಯಾ ಹೊಂದಿದ್ದ ಹಲವು ಕೋವಿಡ್ -19 ಸೋಂಕಿತ ರೋಗಿಗಳು ಸಹ ಗುಲಾಬಿ ಕಣ್ಣಿನ ಲಕ್ಷಣಗಳನ್ನು ಬೆಳೆಸಿಕೊಂಡಿದ್ದರು. ಈ ಕಾರಣದಿಂದ ಕಾಯಿಲೆಯ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿ ಪಿಪಿಇ(ವೈಯಕ್ತಿಕ ಸುರಕ್ಷಾ ಸಲಕರಣೆ) ಮತ್ತು ಎನ್95 ಮಾಸ್ಕ್ ಜೊತೆಯಲ್ಲಿ ಕಣ್ಣುಗಳನ್ನು ರಕ್ಷಿಸುವ ಗಾಗಲ್ ಗಳನ್ನು ಧರಿಸಿಕೊಳ್ಳಬೇಕು.
ಕೊರೊನಾ ವೈರಸ್ ಪಾಂಡೆಮಿಕ್ ಕಾಯಿಲೆಯ ಸೋಂಕಿಗೆ ಇದುವರೆಗೆ ಪ್ರಪಂಚದಾದ್ಯಂತ 10,98,762 ಜನರು ಒಳಗಾಗಿದ್ದಾರೆ. 59,172ಜನರು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 2,28,923ಕ್ಕೂ ಹೆಚ್ಚು ಸೋಂಕಿತರು ಈ ಸೋಂಕಿಗೆ ಒಳಗಾಗಿ ಚಿಕಿತ್ಸೆಯ ಮೂಲಕ ಚೇತರಿಸಿಕೊಂಡಿದ್ದಾರೆ. ಇದರಲ್ಲಿ ಹೆಚ್ಚಿನವರು ಚೀನೀಯರೇ ಆಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಜನರು ಈ ಕಾಯಿಲೆಯಿಂದ ಮರಣ ಹೊಂದುತ್ತಿರುವಂತೆ ಎಲ್ಲ ದೇಶಗಳು ಕಠಿಣವಾದ ಲಾಕ್ ಡೌನ್ ಜಾರಿಗೊಳಿಸಿವೆ. ಅಮೆರಿಕದಲ್ಲಿ ಉಂಟಾದ ಹೊಸ ಅಲೆಯ ಸೋಂಕು ಉಂಟು ಮಾಡಿರುವ ಪರಿಣಾಮಗಳು ಕೊವಿಡ್ -19 ಸೋಂಕನ್ನು ನಿಯಂತ್ರಿಸುವ ಪ್ರಯತ್ನಕ್ಕೆ ಹಿನ್ನಡೆ ತಂದಿದೆ . ಇಟಲಿ ಮತ್ತು ಸ್ಪೇನ್ ಗಳಲ್ಲಿ ಕೊಂಚ ಆಶಾದಾಯಕ ಬೆಳವಣಿಗೆ ಕಂಡಿದ್ದರೂ ಸಹ ಜಗತ್ತಿನ 2/5 ರಷ್ಟು ಭಾಗದಲ್ಲಿ ಜಾರಿಗೊಳಿಸಲಾದ ನಿರ್ಬಂಧಗಳನ್ನು ವಿಸ್ತರಿಸಲಾಗಿದೆ.
ಹೊಸ ಕೊರೊನಾ ವೈರಸ್ ಬಹುತೇಕ ಜನರಲ್ಲಿ ಸಾಧಾರಣ ಮಟ್ಟದ ರೋಗ ಲಕ್ಷಣಗಳನ್ನು ತೋರಿಸುತ್ತದೆ. ಕೆಲವರಿಗೆ ಅದರಲ್ಲೂ ವಯಸ್ಸಾದ ಹಾಗೂ ಈಗಾಗಲೇ ಇತರೆ ದೈಹಿಕ ಕಾಯಿಲೆಗಳಿಂದ ಬಳಲುವವರಿಗೆ ಅದು ತೀವ್ರ ರೀತಿಯ ತೊಂದರೆಗಳನ್ನು ಉಂಟು ಮಾಡಬಲ್ಲದಾಗಿದೆ. ಕೆಲವೊಮ್ಮೆ ಸಾವನ್ನು ಕೂಡ ಉಂಟು ಮಾಡಬಲ್ಲದು. ರೋಗಿಗಳ ಶುಶ್ರೂಷೆ ಮಾಡುತ್ತಿರುವ 3000 ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗಳ ಪೈಕಿ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಕೋವಿಡ್ 19 ಸೋಂಕು ತಗುಲಿದ ಪರಿಣಾಮವಾಗಿ ಹದಿನಾಲ್ಕು ಜನರು ಪ್ರಾಣ ತೆತ್ತಿದ್ದಾರೆ ಎಂದು ಚೀನಾದ ಸರ್ಕಾರ ತಿಳಿಸಿದೆ . ಇದರಲ್ಲಿ ಡಾ. ಲಿ ವಿಯೆನ್ ಲ್ಯಾಂಗ್ ಅವರು ಸಹ ಒಬ್ಬರಾಗಿ ದ್ದರು. ಅವರು ಈ ಕಾಯಿಲೆಯ ಹರಡುವಿಕೆಯ ಕುರಿತು ಸುದ್ದಿಯನ್ನು ಬಹಿರಂಗಪಡಿಸಿದ ಕಾರಣಕ್ಕೆ ಪೊಲೀಸರಿಂದ ಶಿಕ್ಷೆ ಅನುಭವಿಸುವ ಬೆದರಿಕೆಗೂ ಒಳಗಾಗಿದ್ದರು. ಆದರೆ ಚೀನಾ ಸರ್ಕಾರ ಈಗ ಅವರನ್ನು ರಾಷ್ಟ್ರೀಯ ಹುತಾತ್ಮರ ಪಟ್ಟಿಯಲ್ಲಿ ಸೇರಿಸಿದೆ.